ಜೂ.ಎನ್ಟಿಆರ್ ಎಷ್ಟು ಶ್ರೀಮಂತ ಅನ್ನೋದು ಗೊತ್ತಾ? ಇಲ್ಲಿದೆ ಆಸ್ತಿ ವಿವರ
Jr NTR Birthday: ಜೂನಿಯರ್ ಎನ್ಟಿಆರ್ ಅವರು ಟಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರು. ಐಷಾರಾಮಿ ಮನೆ, ದುಬಾರಿ ಕಾರುಗಳು ಮತ್ತು ವಾಚ್‌ಗಳು ಅವರ ಬಳಿ ಇವೆ. ಅವರು ಸಿನಿಮಾ ಜಾಹೀರಾತು ಒಪ್ಪಂದಗಳು ಮತ್ತು ಹೂಡಿಕೆಗಳಿಂದ ಅವರ ಸಂಪತ್ತು ಬೆಳವಣಿಗೆ ಕಾಣುತ್ತಿದೆ. ಅವರು ಕೆಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

ಜೂನಿಯರ್ ಎನ್ಟಿಆರ್ (JR NTR) ಅವರಿಗೆ ಇಂದು (ಮೇ 20) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಜೂ. ಎನ್ಟಿಆರ್ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು ಅನ್ನೋದು ಅವರ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ವಿಚಾರ. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಇದು ಅವರ ಆಸ್ತಿ ಹೆಚ್ಚಲು ಕಾರಣ. ಅವರು ಕೇವಲ ಒಳ್ಳೆಯ ನಟ ಮಾತ್ರವಲ್ಲ, ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಅವರಿಗೆ ಮ್ಯಾನ್ ಆಫ್ ದಿ ಮಾಸಸ್ ಎಂಬ ಟೈಟಲ್ ಕೂಡ ಸಿಕ್ಕಿದೆ.
ಜೂನಿಯರ್ ಎನ್ಟಿಆರ್ ಅವರಿಗೆ ‘ಆರ್ಆರ್ಆರ್’ ಮೂಲಕ ದೊಡ್ಡ ಗೆಲುವು ಸಿಕ್ಕಿದೆ. ಇದಾದ ಬಳಿಕ ‘ದೇವರ’ ಸಿನಿಮಾ ಸಾಧಾರಣ ಗೆಲುವು ಕಂಡಿತು. ಈ ಹೀರೋನ ಒಟ್ಟೂ ಆಸ್ತಿ 500 ಕೋಟಿ ರೂಪಾಯಿಗೂ ಅಧಿಕವಾಗಿದೆ ಅನ್ನೋದು ವಿಶೇಷ. ಅವರಿಗೆ ಸಿನಿಮಾ, ವಿವಿಧ ರೀತಿಯ ಜಾಹೀರಾತು ಹಾಗೂ ಹೂಡಿಕೆಗಳಿಂದ ಸಾಕಷ್ಟು ಹಣ ಬರುತ್ತದೆ.
ಜೂನಿಯರ್ ಎನ್ಟಿಆರ್ ತಾತ ಎನ್ಟಿ ರಾಮ್ ರಾವ್ ಅವರು ಶ್ರೇಷ್ಠ ನಟ ಎನಿಸಿಕೊಂಡಿದ್ದರು. ಇಡೀ ಕುಟುಂಬ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಈ ಕಾರಣಕ್ಕೆ ಜೂನಿಯರ್ ಎನ್ಟಿಆರ್ ಅವರಿಗೆ ನಟನೆ ಎಂಬುದು ರಕ್ತದಲ್ಲೇ ಬಂದು ಬಿಟ್ಟಿತ್ತು. ಅವರು ಬಾಲ ಕಲಾವಿದಾನಗಿ ನಟಿಸಿದರು. ‘ಬ್ರಹ್ಮರ್ಷಿ ವಿಶ್ವಾಮಿತ್ರ’ ಅವರ ನಟನೆಯ ಮೊದಲ ಚಿತ್ರ. 2001ರಲ್ಲಿ ಅವರು ‘ನಿನ್ನು ಚೂಡಲಾನಿ’ ಚಿತ್ರದ ಮೂಲಕ ಹೀರೋ ಆದರು.
ಜೂನಿಯರ್ ಎನ್ಟಿಆರ್ ಅವರು ಹೈದರಾಬಾದ್ನಲ್ಲಿ ದುಬಾರಿ ಮನೆ ಹೊಂದಿದ್ದಾರೆ. ಜುಬ್ಲೀ ಹಿಲ್ಸ್ನಲ್ಲಿ ಇರೋ ಈ ಮನೆಯ ಬೆಲೆ 25 ಕೋಟಿ ರೂಪಾಯಿ. ಬೆಂಗಳೂರು, ಮುಂಬೈ ಹಾಗೂ ಅಮೆರಿಕದಲ್ಲಿಯೂ ಅವರು ನಿವಾಸ ಹೊಂದಿದ್ದಾರೆ ಎನ್ನಲಾಗಿದೆ. ಜೂನಿಯರ್ ಎನ್ಟಿಆರ್ ಬಳಿ 2.5 ಕೋಟಿ ರೂಪಾಯಿ, 4 ಕೋಟಿ ರೂಪಾಯಿ ಬೆಲೆಯ ವಾಚ್ಗಳೇ ಇವೆ. ಇದುವೇ ಅವರ ಶ್ರೀಮಂತಿಕೆಯನ್ನು ಹೇಳುತ್ತದೆ.
ಜೂ. ಎನ್ಟಿಆರ್ ಬಳಿ ದುಬಾರಿ ಕಾರುಗಳು ಇವೆ. ಲ್ಯಾಂಬೋರ್ಗಿನಿ ಉರುಸ್ (5 ಕೋಟಿ ರೂಪಾಯಿ), ದುಬಾರಿ ಬೆಲೆಯ ರೇಂಜ್ ರೋವರ್ ಆಟೋಗ್ರಾಫ್, ಬಿಎಂಡಬ್ಲ್ಯೂ, ಮರ್ಸೀಡಿಸ್ ಬೆಂಜ್, ಪೋರ್ಷಾ ರೀತಿಯ ಕಾರುಗಳು ಇವರ ಗ್ಯಾರೇಜ್ನಲ್ಲಿ ಕಾಣಬಹುದು.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ಗೆ ‘9999’ ಸಂಖ್ಯೆ ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?
ಸದ್ಯ ಜೂನಿಯರ್ ಎನ್ಟಿಆರ್ ಅವರು 45-60 ಕೋಟಿ ರೂಪಾಯಿ ಪ್ರತಿ ಚಿತ್ರಕ್ಕೆ ಚಾರ್ಜ್ ಮಾಡುತ್ತಾರೆ. ಸದ್ಯ ಅವರ ಕೈಯಲ್ಲಿ ‘ವಾರ್ 2’, ‘ದೇವರ 2’ ಹಾಗೂ ಇನ್ನೂ ಟೈಟಲ್ ಇಡದ ಪ್ರಶಾಂತ್ ನೀಲ್ ಸಿನಿಮಾ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:16 am, Tue, 20 May 25