AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಭಾಷ್ ಚಂದ್ರ ಬೋಸ್ ನನ್ನ ಬಳಿ ಬಂದು ಆ ಒಂದು ಮಾತು ಹೇಳಿದ್ದರು; ನೆನಪಿಸಿಕೊಂಡ ನಟ ಅಜಿತ್  

ನಟ ಅಜಿತ್ ಕುಮಾರ್ ಅವರು ತಮ್ಮ ರೇಸಿಂಗ್ ಪ್ರಯಾಣದ ಬಗ್ಗೆ ಮತ್ತು ತಮ್ಮ ಸ್ಫೂರ್ತಿಯಾದ ರೇಸರ್ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಗಳ ನಡುವೆಯೂ ರೇಸಿಂಗ್‌ನಲ್ಲಿ ತೊಡಗಿಸಿಕೊಂಡ ಅವರು, ತಮ್ಮ ಕುಟುಂಬದ ಬೆಂಬಲ ಮತ್ತು ಸುಭಾಷ್ ಅವರ ಪ್ರೋತ್ಸಾಹದಿಂದ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.

ಸುಭಾಷ್ ಚಂದ್ರ ಬೋಸ್ ನನ್ನ ಬಳಿ ಬಂದು ಆ ಒಂದು ಮಾತು ಹೇಳಿದ್ದರು; ನೆನಪಿಸಿಕೊಂಡ ನಟ ಅಜಿತ್  
ಅಜಿತ್
ರಾಜೇಶ್ ದುಗ್ಗುಮನೆ
|

Updated on: May 20, 2025 | 7:18 AM

Share

ನಟ ಅಜಿತ್ ಕುಮಾರ್ (Ajith Kumar) ಅವರಿಗೆ ಈಗ ವಯಸ್ಸು 54. ಅವರು ನಟನೆ ಹಾಗೂ ರೇಸಿಂಗ್​ನ ಸಮದೂಗಿಸಿಕೊಂಡು ಹೋಗುತ್ತಿದ್ದಾರೆ. ಇದರ ಜೊತೆಗೆ ಕುಟುಂಬಕ್ಕೂ ಅವರು ಸಮಯ ಕೊಡುತ್ತಿದ್ದಾರೆ. ಅವರು ವಿವಿಧ ರೇಸ್​ಗಳಲ್ಲಿ ಭಾಗಿ ಆಗಿ ಎಲ್ಲರಿಗೂ ಸ್ಫೂರ್ತಿ ಕೊಡುತ್ತಿದ್ದಾರೆ. ಈಗ ಅವರು ತಮ್ಮ ಸ್ಫೂರ್ತಿ ಯಾರು ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ರೇಸರ್ ಸುಭಾಷ್ ಚಂದ್ರ ಬೋಸ್ ಅವರಿಂದ ತಾವು ಸ್ಫೂರ್ತಿ ಪಡೆದಿದ್ದಾಗಿ ಅಜಿತ್ ಅವರು ಹೇಳಿಕೊಂಡಿದ್ದಾರೆ.

ಅವರು 90ರ ದಶಕದಲ್ಲಿ ಆರ್ಥಿಕ ಸಮಸ್ಯೆ ಇದ್ದಾಗ ಹಣಕ್ಕಾಗಿ ಅಜಿತ್ ರೇಸಿಂಗ್ ಮಾಡುತ್ತಿದ್ದರು. ಇದರಿಂದ ಸಣ್ಣ ಪುಟ್ಟ ಗಳಿಕೆ ಮಾಡಿಕೊಳ್ಳುತ್ತಿದ್ದರು. ‘ಕೈಗೆಟುಕುವ ದರದಲ್ಲಿ ಇದೆ ಎಂಬ ಕಾರಣಕ್ಕೆ ನಾನು ಬೈಕ್ ರೇಸ್ ಆರಂಭಿಸಿದ್ದೆ. ಇದಕ್ಕೆ ನನ್ನ ಪೋಷಕರು ವಿರೋಧ ತೋರಿಸಲಿಲ್ಲ. ಇದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಆದರೆ ನನ್ನ ತಂದೆ ತುಂಬಾ ಪ್ರಾಮಾಣಿಕವಾಗಿ ನನ್ನೊಡನೆ ಮಾತನಾಡಿದ್ದರು’ ಎಂದು ಅಜಿತ್ ಹಳೆಯ ಕಥೆ ತೆರೆದಿಟ್ಟಿದ್ದಾರೆ.

‘ನೋಡು ಅಜಿತ್, ಇದು ತುಂಬಾ ದುಬಾರಿ ಕ್ರೀಡೆ. ನಾನು ನಿಮ್ಮನ್ನು ಬೆಂಬಲಿಸಲು ಸಾಧ್ಯವಾಗದಿರಬಹುದು. ನೀನು ಪ್ರಾಯೋಜಕರನ್ನು ಕಂಡುಕೊಂಡರೆ, ಅದರಿಂದ ನಿನಗೆ ಲಾಭ ಇದೆ ಎಂದರೆ ನೀನು ಮುಂದುವರಿಯಬಹುದು’ ಎಂದು ತಂದೆ ಅಜಿತ್​ಗೆ ಹೇಳಿದ್ದರು.

ಇದನ್ನೂ ಓದಿ
Image
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು
Image
ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಮದುವೆ ಆಮಂತ್ರಣ ಪತ್ರ ವೈರಲ್
Image
ಪ್ರತಿಷ್ಠಿತ ಕಾನ್ಸ್ ಫಿಲ್ಮ್​ ಚಿತ್ರೋತ್ಸವದಲ್ಲಿ ಲಕ್ಷ್ಮೀ ನಿವಾಸ ನಟಿ ದಿಶಾ
Image
ಸಿನಿಮಾ ರಿಲೀಸ್​ಗೂ ಮೊದಲೇ ಸೋಲಿನ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ

ಅಜಿತ್ ಕುಟುಂಬ ಶ್ರೀಮಂತಿಕೆಯನ್ನು ಕಂಡಿರಲಿಲ್ಲ. ಆದರೆ, ಕಠಿಣತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಬಲವಾಗಿ ನಂಬಿದ್ದರು. ‘ನನ್ನ ಕುಟುಂಬದವರು ನನಗೆ ಎರಡು ಆಯ್ಕೆ ಇಟ್ಟಿದ್ದರು. ಒಂದೋ ಅಧ್ಯಯನ ಮಾಡಬೇಕು. ಕನಿಷ್ಠ ಪದವಿಯನ್ನಾದರೂ ಪಡೆಯಬೇಕು. ಇಲ್ಲವಾದರೆ ಕೆಲಸ ಆರಂಭಿಸಬೇಕು. ನಾನು ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಕೇವಲ 8 ತಿಂಗಳಲ್ಲಿ 42 ಕೆಜಿ ತೂಕ ಕಡಿಮೆ ಮಾಡಿಕೊಂಡ ನಟ ಅಜಿತ್ ಕುಮಾರ್

ಅಜಿತ್ ಅವರು 1990ರಲ್ಲಿ ಇರುಂಗಟ್ಟುಕೊಟ್ಟೈನಲ್ಲಿ ರೇಸ್ ಮಾಡಿದರು. ಅವರು 2 ಗಂಟೆಗಳ ಕಾಲ ರೇಸ್​ನಲ್ಲಿ ಇದ್ದರು. ಅವರಿಗೆ ಐದನೇ ಸ್ಥಾನ ಸಿಕ್ಕಿತ್ತು. ‘1990ರ ಸೆಪ್ಟೆಂಬರ್​ನಲ್ಲಿ ನಾನು ಎರಡು ಗಂಟೆಗಳ ಕಾಲ ರೇಸ್ ಮಾಡಿದೆ. ನಾನು ಐದನೇ ಸ್ಥಾನ ಪಡೆದೆ. ಸುಭಾಷ್ ಚಂದ್ರ ಬೋಸ್ ನೀವು ಮೋಟಾರ್‌ಸ್ಪೋರ್ಟ್ಸ್ ಅನ್ನು ಮುಂದುವರಿಸಬೇಕು ಎಂದು ಹೇಳಿದ್ದು ನನಗೆ ನೆನಪಿದೆ’ ಎಂದಿದ್ದಾರೆ ಅಜಿತ್. ಸುಭಾಷ್ ಚಂದ್ರ ಬೋಸ್ ಅವರು ಬುಲೆಟ್ ಬೋಸ್ ಎಂದು ಕೂಡ ಫೇಮಸ್ ಆಗಿದ್ದರು. 1968-94ನಲ್ಲಿ ಅವರು ರೇಸ್​ನಲ್ಲಿ ಡಾಮಿನೇಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.