Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

ಹಾಗೆಂದು ಈ ಬಗ್ಗೆ ಆತಂಕ ಪಡುವುದು ಅಥವಾ ಆ್ಯಂಟಿಬಾಡಿ ಇದೆ ಎಂದು ಖಚಿತಪಡಿಸಿಕೊಂಡು ಅಸಡ್ಡೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ. ಲಸಿಕೆ ಪಡೆದುಕೊಳ್ಳುವುದು ಹಾಗೂ ಕೊರೊನಾ ತಡೆಯ ಕ್ರಮಗಳು, ನಿಯಮಾವಳಿಗಳನ್ನು ಅನುಸರಿಸುವುದು ಅಗತ್ಯವಾಗಿದೆ.

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 07, 2022 | 5:48 PM

ಕೊರೊನಾ ಲಸಿಕೆ ನಮ್ಮ ದೇಹದಲ್ಲಿ ಕೆಲಸ ಮಾಡುತ್ತಿದೆಯೇ? ಅದು ನಮಗೆ ಪರಿಣಾಮಕಾರಿ ಆಗಿದೆಯೇ? ನಮ್ಮ ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಕಂಡುಬಂದಿದೆಯಾ? ಇವುಗಳು ಲಸಿಕೆ ಪಡೆದ ಜನರಲ್ಲಿ ಸಾಮಾನ್ಯವಾಗಿ ಬರಬಹುದಾದ ಪ್ರಶ್ನೆಗಳು. ಇಂಥವರಲ್ಲಿ ಕೆಲವರು ರೋಗನಿರೋಧಕ ಶಕ್ತಿಯ ಪರೀಕ್ಷೆಗೆ (Antibody Test) ಕೂಡ ಮುಂದಾಗಬಹುದು.

ಕೊರೊನಾ ಎರಡನೇ ಅಲೆಯ ಪ್ರಮಾಣವೂ ಕಡಿಮೆ ಆಗಿ, ಜನರು ಮನೆಯಿಂದ ಹೊರಗೆ ಕಾಲಿಡುವ ಸಂದರ್ಭ ಎದುರಾಗುತ್ತಿದ್ದಂತೆ ಎಲ್ಲರೂ ತಾವು ಸುರಕ್ಷಿತರೇ ಎಂದು ಆಲೋಚಿಸುತ್ತಾರೆ. ಹಾಗೂ ಅದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ. ಅವರಲ್ಲಿ ಕೆಲವರು ಈಗಾಗಲೇ ಕೊವಿಡ್ ಆ್ಯಂಟಿಬಾಡಿ ಪರೀಕ್ಷೆ ನಡೆಸಲು ಮುಂದಾಗಿರಬಹುದು. ಕೆಲವು ದೇಶಗಳು ಈ ಪರೀಕ್ಷೆಯನ್ನು ಕಡ್ಡಾಯ ಮಾಡಿರುವುದೂ ಇದೆ.

ಆ್ಯಂಟಿಬಾಡೀಸ್ ಎಂದರೇನು? ಕೊರೊನಾ ಆ್ಯಂಟಿಬಾಡಿ ಪ್ರೊಟೀನ್​ಗಳು ದೇಹದ ಇಮ್ಯುನಿಟಿ ವ್ಯವಸ್ಥೆಯಿಂದ ತಯಾರಿಸಲ್ಪಟ್ಟವಾಗಿದೆ. ಇದು ಪ್ರತ್ಯೇಕ ವೈರಾಣು ಒಂದರ ವಿರುದ್ಧ ಹೋರಾಡಲು ಅಂದರೆ ಉದಾಹರಣೆಗೆ SARS-CoV-2 ವಿರುದ್ಧ ಹೋರಾಡಲು ಇರುತ್ತವೆ. ಹೀಗೆ ಒಂದು ವೈರಾಣು ವಿರುದ್ಧ ಹೋರಾಡಲು ಇರುವ ಆ್ಯಂಟಿಬಾಡಿ ಅಥವಾ ರೋಗನಿರೋಧಕ ಶಕ್ತಿ ಮತ್ತೊಂದು ವೈರಸ್​ನ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ ಅಥವಾ ದೇಹವನ್ನು ರಕ್ಷಿಸುತ್ತದೆ ಎಂದು ಹೇಳುವಂತಿಲ್ಲ.

ಹಾಗೆಂದು ಆ್ಯಂಟಿಬಾಡಿ ಟೆಸ್ಟ್ ಎಂದರೆ ಒಂದು ವೈರಾಣುವಿನ ವಿರುದ್ಧ ದೇಹದ ರೋಗನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂದು ಪರೀಕ್ಷೆ ಮಾಡುವುದಲ್ಲ. ಬದಲಾಗಿ ನಮ್ಮ ದೇಹದ ಸಮಗ್ರ ರೋಗನಿರೋಧಕ ಶಕ್ತಿಯು ನಿಗದಿತ ಮತ್ತು ಆಯ್ದ ವೈರಾಣುವಿನ ವಿರುದ್ಧವೂ ಪ್ರತಿಕ್ರಿಯಿಸಿದೆಯೇ ಎಂದಷ್ಟೇ ನೋಡುವುದಾಗಿದೆ. ಕೊರೊನಾ ಎಂದು ಪರಿಗಣಿಸಿದರೆ, ಕೇವಲ ಕೊವಿಡ್-19 ವಿರುದ್ಧ ರೋಗನಿರೋಧಕ ಶಕ್ತಿ ಕೆಲಸ ಮಾಡುತ್ತಿದೆಯೇ ಎಂದು ನೋಡುವುದಲ್ಲ. ಸಂಪೂರ್ಣ ರೋಗನಿರೋಧಕ ಶಕ್ತಿಯಲ್ಲಿ ಕೊರೊನಾ ವಿರುದ್ಧ ಕೆಲಸ ಮಾಡುವ ಶಕ್ತಿಯೂ ಇದೆಯೇ ಎಂದಷ್ಟೇ ನೋಡುವುದು.

ಆ್ಯಂಟಿಬಾಡಿ ಟೆಸ್ಟ್ ಪಾಸಿಟಿವ್, ನೆಗೆಟಿವ್ ಎಂದರೇನು? ಹೀಗೆ ಕೊವಿಡ್-19 ಆ್ಯಂಟಿಬಾಡಿ ಪರೀಕ್ಷೆ ನಡೆಸಿದಾಗ, ವ್ಯಕ್ತಿಯೊಬ್ಬನಿಗೆ ಅದರ ಫಲಿತಾಂಶ ಪಾಸಿಟಿವ್ ಅಥವಾ ನೆಗೆಟಿವ್ ಎಂದು ಬರಬಹುದು. ವ್ಯಕ್ತಿ ಈ ಮೊದಲು ಕೊರೊನಾ ಸೋಂಕಿಗೆ ತುತ್ತಾಗಿದ್ದರೆ ಆ್ಯಂಟಿಬಾಡಿ ಟೆಸ್ಟ್ ಫಲಿತಾಂಶ ಪಾಸಿಟಿವ್ ಎಂದು ಬರಬಹುದು. ಅಂದರೆ, ಆತನ ದೇಹದಲ್ಲಿ ಕೊರೊನಾ ವಿರುದ್ಧದ ರೋಗನಿರೋಧಕ ಶಕ್ತಿ ಕಂಡುಬರಬಹುದು. ಅಥವಾ ಸೋಂಕಿತನಲ್ಲದವನ ದೇಹದಲ್ಲೂ ಆ್ಯಂಟಿಬಾಡಿ ಟೆಸ್ಟ್ ಪಾಸಿಟಿವ್ ಬರುವ ಸಾಧ್ಯತೆ ಇರುತ್ತದೆ. ಅಂದರೆ, ಆ ವ್ಯಕ್ತಿಯಲ್ಲಿ ಅಸಿಂಪ್ಟಮಾಟಿಕ್ ಕೊರೊನಾ ಉಂಟಾಗಿದ್ದಿರಬಹುದು. ಅದರ ಲಕ್ಷಣಗಳು ಗೋಚರಿಸದೇ ಹೋಗಿರಬಹುದು.

ಅಥವಾ ಕೆಲವೊಂದು ಸನ್ನಿವೇಶಗಳಲ್ಲಿ ವ್ಯಕ್ತಿಯ ದೇಹದಲ್ಲಿ ಕೊವಿಡ್-19 ವಿರುದ್ಧ ಆ್ಯಂಟಿಬಾಡಿಗಳು ರಚಿತವಾಗಿರದೇ ಇದ್ದರೂ ಕೊರೊನಾ ಆ್ಯಂಟಿಬಾಡಿ ಪರೀಕ್ಷೆಯಲ್ಲಿ ಮಾತ್ರ ಪಾಸಿಟಿವ್ ಫಲಿತಾಂಶ ಬರಬಹುದು. ಈ ರೀತಿ ತಪ್ಪಾಗಿ ರಿಸಲ್ಟ್ ಬರುವ ಸಾಧ್ಯತೆಯೂ ಇದೆ. ಇದನ್ನು ಫಾಲ್ಸ್ ಪಾಸಿಟಿವ್ ಎನ್ನುತ್ತಾರೆ.

ಕೊರೊನಾ ಆ್ಯಂಟಿಬಾಡಿ ಟೆಸ್ಟ್ ಫಲಿತಾಂಶ ನೆಗೆಟಿವ್ ಎಂದರೆ ಆ ವ್ಯಕ್ತಿಯು ಕೊರೊನಾ ಸೋಂಕಿಗೆ ತುತ್ತಾಗಿಲ್ಲ ಅಥವಾ ಆತನ ದೇಹದಲ್ಲಿ ಇನ್ನೂ ಕೂಡ ಕೊರೊನಾ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಅಥವಾ ರೋಗನಿರೋಧಕ ಶಕ್ತಿಯು ಕಂಡುಬಂದಿಲ್ಲ ಎಂದು ಅರ್ಥ. ಕೊರೊನಾಕ್ಕೆ ತುತ್ತಾಗಿ ಒಂದರಿಂದ ಮೂರು ವಾರಗಳಿಗೂ ಮೊದಲೆ ರೋಗನಿರೋಧಕ ಶಕ್ತಿ ಉತ್ಪಾದನೆ ಆಗಿರುವುದಿಲ್ಲ.

ಆ್ಯಂಟಿಬಾಡಿ ಟೆಸ್ಟ್ ಪಾಸಿಟಿವ್ ಎಂದರೆ ರೋಗನಿರೋಧಕ ಶಕ್ತಿ ಇದೆ ಎಂದು ಅರ್ಥವೇ? ದೇಹದಲ್ಲಿ ಆ್ಯಂಟಿಬಾಡಿಗಳು ಅಥವಾ ರೋಗನಿರೋಧಕ ಶಕ್ತಿ ಇದ್ದಾಗ ಆ್ಯಂಟಿಬಾಡಿ ಟೆಸ್ಟ್ ಫಲಿತಾಂಶ ಪಾಸಿಟಿವ್ ಎಂದು ಬರುತ್ತದೆ. ಅಂದರೆ ಆ ದೇಹದಲ್ಲಿ ಆ್ಯಂಟಿಬಾಡಿ ಉತ್ಪಾದನೆ ಆಗಿದೆ ಎಂದು ಅರ್ಥ. ಇದು ಮುಂದೆ ಉಂಟಾಗಬಹುದಾದ ಸೋಂಕಿನಿಂದ ದೇಹವನ್ನು ರಕ್ಷಿಸಬಹುದು.

ಈ ಇಮ್ಯುನಿಟಿ ಕಾಲಕ್ರಮೇಣ ಕಡಿಮೆ ಆಗುವ ಸಾಧ್ಯತೆಯೂ ಇದೆ. ಅಧ್ಯಯನಗಳ ವರದಿಯ ಪ್ರಕಾರ ಹಾಗೂ ತಜ್ಞರ ಅಭಿಪ್ರಾಯದಂತೆ ಕೊರೊನಾ ವಿರುದ್ಧದ ರೋಗನಿರೋಧಕ ಶಕ್ತಿ ವ್ಯಕ್ತಿಯನ್ನು ಗಂಭೀರ ಸ್ವರೂಪದ ಕೊವಿಡ್​ನಿಂದ ಅಂತೂ ರಕ್ಷಿಸುತ್ತದೆ.

ಹಾಗೆಂದು ಈ ಬಗ್ಗೆ ಆತಂಕ ಪಡುವುದು ಅಥವಾ ಆ್ಯಂಟಿಬಾಡಿ ಇದೆ ಎಂದು ಖಚಿತಪಡಿಸಿಕೊಂಡು ಅಸಡ್ಡೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ. ಲಸಿಕೆ ಪಡೆದುಕೊಳ್ಳುವುದು ಹಾಗೂ ಕೊರೊನಾ ತಡೆಯ ಕ್ರಮಗಳು, ನಿಯಮಾವಳಿಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ

ಭಾರತದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್

Published On - 9:57 am, Sat, 3 July 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್