‘ಟೈಮ್​ಗೆ​ ಸರಿಯಾಗಿ ಶೂಟಿಂಗ್​ಗೆ ಬರ್ತೀನಿ, ಪ್ಲೀಸ್​ ಚಾನ್ಸ್​ ಕೊಡಿ’; ನಿರ್ಮಾಪಕಿ ಬಳಿ ಶಾರುಖ್​ ಮನವಿ

Shah Rukh Khan: ‘ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ. ಸರಿಯಾದ ಸಮಯಕ್ಕೆ ನಾನು ಶೂಟಿಂಗ್​ಗೆ ಬರುತ್ತೇನೆ. ತುಂಬ ಪ್ರೊಫೆಷನಲ್​ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್​ ಮಾಡುತ್ತೇನೆ’ ಎಂದು ಶಾರುಖ್​ ಖಾನ್ ಮನವಿ ಮಾಡಿದ್ದಾರೆ.

‘ಟೈಮ್​ಗೆ​ ಸರಿಯಾಗಿ ಶೂಟಿಂಗ್​ಗೆ ಬರ್ತೀನಿ, ಪ್ಲೀಸ್​ ಚಾನ್ಸ್​ ಕೊಡಿ’; ನಿರ್ಮಾಪಕಿ ಬಳಿ ಶಾರುಖ್​ ಮನವಿ
ಶಾರುಖ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 04, 2021 | 4:02 PM

ಬಾಲಿವುಡ್​ನಲ್ಲಿ ಸದ್ಯ ಶಾರುಖ್​ ಖಾನ್​ ಸ್ಥಿತಿ ಯಾವ ರೀತಿ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ಏನೇ ಪ್ರಯತ್ನಪಟ್ಟರೂ ವಿಜಯಲಕ್ಷ್ಮೀ ಅವರ ಕಡೆಗೆ ಸುಳಿಯುತ್ತಿಲ್ಲ. ಹಾಗಾಗಿ, ‘ಜೀರೋ’ ಸಿನಿಮಾ ಸೋತ ಬಳಿಕ ಅವರು ದೀರ್ಘ ಗ್ಯಾಪ್​ ಪಡೆದುಕೊಂಡಿದ್ದರು. ಈಗ ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಷ್ಟೇ ಬಾರಿ ಸೋತಿದ್ದರೂ ಕೂಡ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಮುಗಿಬೀಳುವುದನ್ನು ನಿಲ್ಲಿಸಿಲ್ಲ. ಆದರೆ ಅವರೆಲ್ಲರನ್ನೂ ಬಿಟ್ಟು, ಓರ್ವ ನಟಿಯ ಬಳಿ ಶಾರುಖ್​ ಅವಕಾಶ ಕೇಳಿದ್ದಾರೆ.

ಶಾರುಖ್​ ಹೀಗೆ ಅವಕಾಶ ಕೇಳಿರುವುದು ಆಲಿಯಾ ಭಟ್​ ಬಳಿ. ಇದು ನಿಜವೋ ಅಥವಾ ತಮಾಷೆಯೋ ಅಂತ ನೀವೇ ನಿರ್ಧರಿಸಿ. ಅಸಲಿಗೆ ನಡೆದ ಘಟನೆ ಏನೆಂದರೆ, ಈಗ ಆಲಿಯಾ ಭಟ್​ ನಿರ್ಮಾಪಕಿ ಕೂಡ ಆಗಿದ್ದಾರೆ. ‘ಡಾರ್ಲಿಂಗ್ಸ್’ ಶೀರ್ಷಿಕೆಯ ಹೊಸ ಚಿತ್ರಕ್ಕೆ ಅವರು ಬಂಡವಾಳ ಹೂಡುವುದರ ಜೊತೆಗೆ ನಟಿಸುತ್ತಿದ್ದಾರೆ ಕೂಡ. ಆ ಚಿತ್ರದ ಮೊದಲ ದಿನದ ಚಿತ್ರೀಕರಣದ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಶಾರುಖ್​ ಅವರು, ಆಲಿಯಾ ಬಳಿ ಬಹಿರಂಗವಾಗಿಯೇ ಅವಕಾಶ ಕೇಳಿದ್ದಾರೆ.

‘ಈ ಸಿನಿಮಾ ಆದ ಬಳಿಕ ನಿಮ್ಮ ಹೋಮ್​ ಪ್ರೊಡಕ್ಷನ್​ನಲ್ಲಿ ಬರುವ ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ. ಸರಿಯಾದ ಸಮಯಕ್ಕೆ ನಾನು ಶೂಟಿಂಗ್​ಗೆ ಬರುತ್ತೇನೆ. ತುಂಬ ಪ್ರೊಫೆಷನಲ್​ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್​ ಮಾಡುತ್ತೇನೆ’ ಎಂದು ಶಾರುಖ್​ ಖಾನ್​ ಟ್ವೀಟ್​ ಮಾಡಿದ್ದಾರೆ. ಇದು ಸದ್ಯ ವೈರಲ್​ ಆಗುತ್ತಿದೆ. ಆಲಿಯಾ ನಿರ್ಮಿಸುತ್ತಿರುವ ‘ಡಾರ್ಲಿಂಗ್ಸ್​’ ಚಿತ್ರಕ್ಕೆ ಶಾರುಖ್​ ಪತ್ನಿ ಗೌರಿ ಖಾನ್​ ಕೂಡ ನಿರ್ಮಾಪಕಿ ಎಂಬುದು ಗಮನಿಸಬೇಕಾದ ಅಂಶ.

ಶಾರುಖ್​ ಮಾಡಿದ ಟ್ವೀಟ್​ಗೆ ಆಲಿಯಾ ಕೂಡಲೇ ಉತ್ತರ ನೀಡಿದ್ದಾರೆ. ‘ಹಹ್ಹಹ್ಹ.. ಇದಕ್ಕಿಂತ ಹೆಚ್ಚು ನಾನು ಏನ್ನನ್ನೂ ಕೇಳಲು ಸಾಧ್ಯವಿಲ್ಲ. ಆಯಿತು, ಒಪ್ಪಂದಕ್ಕೆ ಸಹಿ ಮಾಡಿದ್ದೇನೆ. ಲವ್​ ಯೂ ಮೈ ಫೇವರಿಟ್​’ ಎಂದು ಆಲಿಯಾ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವಿನ ಈ ಟ್ವೀಟ್​ ಮಾತುಕತೆ ಅಭಿಮಾನಿಗಳ ಗಮನ ಸೆಳೆದಿದೆ. 2016ರಲ್ಲಿ ಗೌರಿ ಶಿಂದೆ ನಿರ್ದೇಶನ ಮಾಡಿದ್ದ ‘ಡಿಯರ್​ ಜಿಂದಗಿ’ ಸಿನಿಮಾದಲ್ಲಿ ಶಾರುಖ್​ ಮತ್ತು ಆಲಿಯಾ ಜೊತೆಯಾಗಿ ನಟಿಸಿದ್ದರು.

ಇದನ್ನೂ ಓದಿ:

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್