AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರ್ಮದ ಕಾಯಿಲೆ ಬಗ್ಗೆ ಹೇಳಿಕೊಂಡು ನಿರಾಳ ಆದ ನಟಿ ಯಾಮಿ ಗೌತಮ್​; ಅವರಿಗಿರುವ ಸಮಸ್ಯೆ ಏನು?

ನಟಿ ಯಾಮಿ ಗೌತಮ್​ ಅವರಿಗೆ ಚರ್ಮದ ಸಮಸ್ಯೆ ಕಾಡುತ್ತಿದೆ. ಆದರೆ ಅದನ್ನು ಒಪ್ಪಿಕೊಂಡು ಅವರು ಮುಂದೆ ಸಾಗುತ್ತಿದ್ದಾರೆ. ತಮ್ಮ ನ್ಯೂನತೆಯನ್ನು ಅವರು ಮುಚ್ಚಿಟ್ಟಿಲ್ಲ.

ಚರ್ಮದ ಕಾಯಿಲೆ ಬಗ್ಗೆ ಹೇಳಿಕೊಂಡು ನಿರಾಳ ಆದ ನಟಿ ಯಾಮಿ ಗೌತಮ್​; ಅವರಿಗಿರುವ ಸಮಸ್ಯೆ ಏನು?
ಯಾಮಿ ಗೌತಮ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 27, 2021 | 3:23 PM

ಸಿನಿಮಾ ನಟಿಯರ ತ್ವಚೆ ಮಿರಮಿರನೆ ಮಿಂಚುತ್ತ ಇರುತ್ತದೆ. ಅದನ್ನು ಕಂಡು ಅಭಿಮಾನಿಗಳು ಫಿದಾ ಆಗುತ್ತಾರೆ. ಆದರೆ ಅಸಲಿಯತ್ತು ಹಾಗಿರುವುದಿಲ್ಲ. ಆ ರೀತಿ ಕಾಂತಿಯುತ ಚರ್ಮದ ಹಿಂದೆ ಬಗೆಬಗೆಯ ಮೇಕಪ್​ ಕೈವಾಡ ಇರುತ್ತದೆ. ಆದರೆ ಬಹುತೇಕ ನಟಿಯರು ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಬಾಲಿವುಡ್​ ನಟಿ ಯಾಮಿ ಗೌತಮ್​ (Yami Gautam) ಅವರು ಈ ವಿಚಾರದಲ್ಲಿ ಭಿನ್ನ ನಿಲುವು ತಾಳಿದ್ದಾರೆ. ತಮಗೆ ಇರುವ ಚರ್ಮದ ಸಮಸ್ಯೆ (Skin Problem) ಬಗ್ಗೆ ಅವರು ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಆ ಕುರಿತಂತೆ ಅವರು ಮಾಧ್ಯಮವೊಂದರ ಜೊತೆ ಮತ್ತೊಮ್ಮೆ ಮಾತನಾಡಿದ್ದಾರೆ. ಯಾಮಿ ಗೌತಮ್​ ಅವರಿಗೆ ಕೆರಟೋಸಿಸ್ ಪಿಲಾರಸ್​ (Keratosis-Pilaris) ಎಂಬ ಚರ್ಮದ ಸಮಸ್ಯೆ ಇದೆ. ಇದನ್ನು ಜಗತ್ತಿನ ಎದುರು ಬಹಿರಂಗಪಡಿಸಿದ ನಂತರ ಅವರು ನಿರಾಳ ಆಗಿದ್ದಾರೆ!

ಕೆರಟೋಸಿಸ್ ಪಿಲಾರಸ್​ ಸಮಸ್ಯೆ ಯಾಮಿ ಗೌತಮ್​ ಅವರನ್ನು ಬಹಳ ಸಮಯದಿಂದ ಕಾಡುತ್ತಿದೆ. ಇದೇನೂ ಗಂಭೀರ ಸಮಸ್ಯೆ ಅಲ್ಲ. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ. ಇದು ಕೆರಟೋಸಿಸ್ ಪಿಲಾರಸ್​ ಲಕ್ಷಣ. ಹದಿಹರೆಯಲ್ಲಿ ಇದ್ದಾಗಲೇ ಯಾಮಿ ಗೌತಮ್​ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ಇದನ್ನು ಮುಚ್ಚಿಟ್ಟುಕೊಂಡೇ ಇದ್ದ ಅವರು ಅನೇಕ ಸವಾಲುಗಳನ್ನು ಎದುರಿಸಿದ್ದಾರೆ.

ತಮಗೆ ಇಂಥದ್ದೊಂದು ಸಮಸ್ಯೆ ಇದೆ ಎಂದು ಗೊತ್ತಾದಾಗಿನಿಂದ, ಅದನ್ನು ಒಪ್ಪಿಕೊಂಡು ಬಹಿರಂಗಪಡಿಸುವ ನಿರ್ಧಾರ ತೆಗೆದುಕೊಳ್ಳುವವರೆಗಿನ ಅವರ ಪಯಣ ತುಂಬ ಚಾಲೆಂಜಿಂಗ್​ ಆಗಿತ್ತು. ಒಮ್ಮೆ ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಸಮಸ್ಯೆಯನ್ನು ಜಗತ್ತಿನ ಮುಂದಿಟ್ಟ ಬಳಿಕ ಅವರಿಗೆ ಈ ವಿಚಾರದಲ್ಲಿ ನಿರಾಳ ಭಾವ ಆವರಿಸಿದೆ. ಈಗ ಅವರಿಗೆ ಜನರಿಂದ ಪಾಸಿಟಿವ್​ ಪ್ರತಿಕ್ರಿಯೆ ಸಿಕ್ಕಿದೆ. ಅದಕ್ಕಾಗಿ ಅವರು ಸಂತಸಗೊಂಡಿದ್ದಾರೆ.

‘ಸತ್ಯವನ್ನು ನಿಮ್ಮೆದುರು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಯಿತು. ಇನ್ನೂ ಇದು ವಾಸಿ ಆಗಿಲ್ಲ. ತುಂಬ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ. ಆದರೆ ಇಂದು ನನ್ನ ನ್ಯೂನತೆಯನ್ನು ಒಪ್ಪಿಕೊಂಡು, ಭಯ ಮತ್ತು ಅಭದ್ರತೆಯನ್ನು ತೊಲಗಿಸುವ ಧೈರ್ಯ ಮಾಡಿದ್ದೇನೆ’ ಎಂದು ಯಾಮಿ ಗೌತಮ್​ ಅವರು ಮೊದಲ ಬಾರಿಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ:

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?

Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ