‘ನಾಟು ನಾಟು..’ ಜತೆ ಸ್ಪರ್ಧೆಯಲ್ಲಿರುವ ನಾಲ್ಕು ಹಾಡುಗಳು ಇವೇ ನೋಡಿ; ಯಾವುದಕ್ಕೆ ಚಾನ್ಸ್?
‘ನಾಟು ನಾಟು..’ ಹಾಡು ಈ ಬಾರಿಯ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ
ಈ ಬಾರಿಯ ಆಸ್ಕರ್ (Oscar 2023) ಭಾರತೀಯರ ಪಾಲಿಗೆ ವಿಶೇಷ ಎನಿಸಿಕೊಳ್ಳಲಿದೆ. ಭಾರತದ ಎರಡು ಕಿರುಚಿತ್ರಗಳು ಹಾಗೂ ‘ಆರ್ಆರ್ಆರ್’ ಚಿತ್ರದ (RRR Movie) ‘ನಾಟು ನಾಟು..’ ಹಾಡು ನಾಮನಿರ್ದೇಶನಗೊಂಡಿದೆ. ಪ್ರತಿ ವಿಭಾಗದಲ್ಲಿ ಒಟ್ಟೂ ಐದು ಪ್ರಾಜೆಕ್ಟ್ಗಳು ನಾಮನಿರ್ದೇನಗೊಳ್ಳುತ್ತವೆ. ‘ನಾಟು ನಾಟು..’ ಹಾಡಿನ ಜತೆ ನಾಲ್ಕು ಹಾಡುಗಳು ನಾಮನಿರ್ದೇಶನಗೊಂಡಿವೆ.
‘ನಾಟು ನಾಟು..’ ಹಾಡು ಈ ಬಾರಿಯ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದ್ರಬೋಸ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
‘ಲಿಫ್ಟ್ ಮಿ ಅಪ್’ ಹಾಡು ರೇಸ್ನಲ್ಲಿದೆ. ಇದು ಇಂಗ್ಲಿಷ್ ಹಾಡು. ಇದನ್ನು ಗಾಯಕಿ ರಿಯಾನ ಅವರು ಹಾಡಿದ್ದಾರೆ. ಇಂಗ್ಲಿಷ್ನ ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಕೂಡ ರೇಸ್ನಲ್ಲಿದೆ.
ಇದನ್ನೂ ಓದಿ: Oscar 2023 Nomination: ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟ; ಭಾರತಕ್ಕೆ ಬಂಪರ್ ಚಾನ್ಸ್
‘ಗೋಲ್ಡನ್ ಗ್ಲೋಬ್ಸ್ 2023’ರಲ್ಲಿ ‘ನಾಟು ನಾಟು..’ ಹಾಡಿಗೆ ಪ್ರಶಸ್ತಿ ಸಿಕ್ಕಿರುವುದರಿಂದ ಈ ಹಾಡಿಗೆ ಈ ಬಾರಿ ಆಸ್ಕರ್ ಒಲಿಯುವ ಸಾಧ್ಯತೆ ಹೆಚ್ಚಿದೆ ಎಂದು ಅನೇಕರು ಊಹಿಸುತ್ತಿದ್ದಾರೆ.
ರಾಜಮೌಳಿ ಪತ್ರ
‘ನನ್ನ ದೊಡ್ಡಣ್ಣ (ಎಂಎಂ ಕೀರವಾಣಿ) ಅವರು ನನ್ನ ಚಿತ್ರದಲ್ಲಿನ ಹಾಡಿಗೆ ಆಸ್ಕರ್ ನಾಮನಿರ್ದೇಶನ ಪಡೆದಿದ್ದಾರೆ. ನಾನು ಹೆಚ್ಚಿನದನ್ನು ಕೇಳಲಾರೆ. ಚರಣ್ ಹಾಗೂ ತಾರಕ್ಗಿಂತ ಹೆಚ್ಚಿನ ಹುರುಪಿನೊಂದಿಗೆ ನಾಟು ನಾಟು ಹಾಡಿಗೆ ನಾನು ಡಾನ್ಸ್ ಮಾಡುತ್ತಿದ್ದೇನೆ. ಚಂದ್ರ ಬೋಸ್ ಅವರೇ ಅಭಿನಂದನೆಗಳು. ಆಸ್ಕರ್ ವೇದಿಕೆ ಮೇಲೆ ನಮ್ಮ ಹಾಡು’ ಎಂದು ರಾಜಮೌಳಿ ಪತ್ರ ಆರಂಭಿಸಿದ್ದಾರೆ.
‘ಪ್ರೇಮ್ ಮಾಸ್ಟರ್ ನಿಮಗೆ ನನ್ನ ಧನ್ಯವಾದ. ಹಾಡಿಗೆ ನಿಮ್ಮ ಕೊಡುಗೆ ಬೆಲೆ ಕಟ್ಟಲಾಗದ್ದು. ನನ್ನ ವೈಯಕ್ತಿಕ ಆಸ್ಕರ್ ನಿಮಗೆ ಸಲ್ಲುತ್ತದೆ. ತಾರಕ್ ಹಾಗೂ ಚರಣ್ ನಿಮಗೂ ಧನ್ಯವಾದ. ನಾನು ನಿಮಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಅದಕ್ಕೆ ಕ್ಷಮೆ ಇರಲಿ’ ಎಂದಿರುವ ರಾಜಮೌಳಿ ಈ ಹಾಡಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ