‘ನಾಟು ನಾಟು..’ ಹಾಡು ಬರೆಯಲು ಬೇಕಾಯ್ತು 19 ತಿಂಗಳು; ಹೊರಬಿತ್ತು ಅಚ್ಚರಿಯ ಮಾಹಿತಿ

ರಾಜಮೌಳಿ ಅವರು ನನಗೆ ಸಿನಿಮಾದ ದೃಶ್ಯವೊಂದನ್ನು ಹೇಳಿ ಹಾಡು ಬರೆಯುವಂತೆ ಹೇಳಿದರು. ನಾನು ಮೂರು ಹಾಡನ್ನು ಬರೆದು ಅವರ ಮುಂದಿಟ್ಟೆ. ರಾಜಮೌಳಿ ಅವರು ನಾಟು ನಾಟು ಹಾಡನ್ನು ಆಯ್ಕೆ ಮಾಡಿದರು ಎಂದು ಚಂದ್ರಬೋಸ್ ಹೇಳಿದ್ದಾರೆ.   

‘ನಾಟು ನಾಟು..’ ಹಾಡು ಬರೆಯಲು ಬೇಕಾಯ್ತು 19 ತಿಂಗಳು; ಹೊರಬಿತ್ತು ಅಚ್ಚರಿಯ ಮಾಹಿತಿ
ನಾಟು ನಾಟು ಹಾಡಿನಲ್ಲಿ ರಾಮ್ ಚರಣ್​-ಜೂ.ಎನ್​ಟಿಆರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 12, 2023 | 11:31 AM

ಎಸ್​.ಎಸ್​​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡಿಗೆ ‘ಗೋಲ್ಡನ್​ ಗ್ಲೋಬ್ ಅವಾರ್ಡ್ಸ್​​’ನಲ್ಲಿ ಮನ್ನಣೆ ಸಿಕ್ಕಿದೆ. ಈ ಹಾಡಿಗೆ ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ಪ್ರಶಸ್ತಿ ದೊರೆತಿದೆ. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ (MM Keeravani) ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈಗ ಈ ಹಾಡಿನ ಕುರಿತಾದ ಸಾಕಷ್ಟು ವಿಚಾರಗಳು ಹೊರಬೀಳುತ್ತಿವೆ. ಈ ಹಾಡನ್ನು ಬರೆಯಲು ತಗುಲಿದ ಸಮಯ ಬರೋಬ್ಬರಿ ಒಂದೂವರೆ ವರ್ಷಕ್ಕಿಂತಲೂ ಹೆಚ್ಚು. ಈ ವಿಚಾರವನ್ನು ಗೀತ ಸಾಹಿತಿ ಚಂದ್ರಬೋಸ್ ಅವರು ರಿವೀಲ್ ಮಾಡಿದ್ದಾರೆ.

ಎನ್​ಡಿಟಿವಿ ಜತೆ ಚಂದ್ರಬೋಸ್ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ‘ರಾಜಮೌಳಿ ಅವರು ನನಗೆ ಸಿನಿಮಾದ ದೃಶ್ಯವೊಂದನ್ನು ಹೇಳಿ ಹಾಡು ಬರೆಯುವಂತೆ ಹೇಳಿದರು. ನಾನು ಮೂರು ಹಾಡನ್ನು ಬರೆದು ಅವರ ಮುಂದಿಟ್ಟೆ. ರಾಜಮೌಳಿ ಅವರು ನಾಟು ನಾಟು ಹಾಡನ್ನು ಆಯ್ಕೆ ಮಾಡಿದರು’ ಎಂದು ಚಂದ್ರಬೋಸ್ ಹೇಳಿದ್ದಾರೆ.

‘ನಾಟು ನಾಟು ಹಾಡಿನ ಶೇ. 90 ಸಾಹಿತ್ಯವನ್ನು ಕೇವಲ ಅರ್ಧ ದಿನದಲ್ಲಿ ಬರೆದೆ. ಇದನ್ನು ನಿರ್ದೇಶಕರು ಇಷ್ಟಪಟ್ಟರು. ಉಳಿದ ಶೇ. 10 ಭಾಗದ ಸಾಹಿತ್ಯ ಬರೆಯಲು ನನಗೆ ಒಂದು ವರ್ಷದ ಏಳು ತಿಂಗಳು ಬೇಕಾಯಿತು’ ಎಂದಿದ್ದಾರೆ ಚಂದ್ರಬೋಸ್.

ಇದನ್ನೂ ಓದಿ
Image
MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
Image
Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ
Image
MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
Image
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

ಇದನ್ನೂ ಓದಿ: Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ

ರಾಮ್ ಚರಣ್ ಹಾಗೂ ಜೂ.ಎನ್​ಟಿಆರ್ ಅವರು ‘ನಾಟು ನಾಟು..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಹಳ್ಳಿ ಹಿನ್ನೆಲೆಯನ್ನು ಸಾರುತ್ತದೆ. ಈ ಹಾಡನ್ನು ಉಕ್ರೇನ್​ನಲ್ಲಿ ಶೂಟ್ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಆರಂಭಕ್ಕೂ ಮೊದಲು ಈ ಹಾಡು ಶೂಟ್ ಆಗಿತ್ತು.

ನಾಟು ನಾಟು ಹಾಡಿಗೆ ರಾಜಮೌಳಿ-ಕೀರವಾಣಿ ಸ್ಟೆಪ್

‘ನಾಟು ನಾಟು..’ ಹಾಡಿಗೆ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದ ನಂತರದಲ್ಲಿ ಅವರು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ