Golden Globe Awards: ‘RRR’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್ ಗ್ಲೋಬ್’ ಪಡೆದವರ ಪೂರ್ತಿ ಲಿಸ್ಟ್ ಇಲ್ಲಿದೆ
Golden Globe Awards Winners List: ಪ್ರತಿಷ್ಠಿತ ‘ಗೋಲ್ಡನ್ ಗ್ಲೋಬ್ 2023’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಟಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಎಂಎಂ ಕೀರವಾಣಿ, ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಸೇರಿದಂತೆ ಅನೇಕರು ಈ ಪ್ರಶಸ್ತಿ ಪಡೆದಿದ್ದಾರೆ.
2023ರ ಆರಂಭದಲ್ಲೇ ಭಾರತೀಯ ಚಿತ್ರರಂಗಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ‘ಆರ್ಆರ್ಆರ್’ (RRR Movie) ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಪ್ರತಿಷ್ಠಿತ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ (Golden Globe Award) ಸಿಕ್ಕಿದೆ. ಅತ್ಯುತ್ತಮ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಈ ಹಾಡು ಪ್ರಶಸ್ತಿ ಪಡೆದಿದೆ. ಲಾಸ್ ಏಂಜಲಿಸ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಪ್ರತಿಷ್ಠಿತ ಟ್ರೋಫಿ ಪಡೆದಿದ್ದಾರೆ. ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಮುಂತಾದವರು ಈ ವೇಳೆ ಹಾಜರಿದ್ದರು. ಎಂಎಂ ಕೀರವಾಣಿ ಮಾತ್ರವಲ್ಲದೇ ಈ ಬಾರಿ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದವರ ಪೂರ್ತಿ ಲಿಸ್ಟ್ ಇಲ್ಲಿದೆ. ಕಾರಣಾಂತರಗಳಿಂದ ಕೆಲವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿಲ್ಲ.
ಹಾಲಿವುಡ್ನ ದಿಗ್ಗಜ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರು ‘ದಿ ಫೇಬಲ್ಮ್ಯಾನ್ಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಬಾರಿಯ ಗೋಲ್ಡನ್ ಗ್ಲೋಬ್ಸ್ನಲ್ಲಿ ಈ ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿವೆ. ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಈ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್ಆರ್ಆರ್ನ ನಾಟು ನಾಟು ಹಾಡು
‘ಗೋಲ್ಡನ್ ಗ್ಲೋಬ್ 2023’ ಪ್ರಶಸ್ತಿ ಪಡೆದವರ ಲಿಸ್ಟ್:
ಅತ್ಯುತ್ತಮ ಸಿನಿಮಾ (ಡ್ರಾಮಾ): ದಿ ಫೇಬಲ್ಮ್ಯಾನ್ಸ್
ಅತ್ಯುತ್ತಮ ಸಿನಿಮಾ (ಮ್ಯೂಸಿಕಲ್/ಕಾಮಿಡಿ): ದಿ ಬಾನ್ಶೀಸ್ ಆಫ್ ಇನ್ಶಿರೆನ್
ಅತ್ಯುತ್ತಮ ನಿರ್ದೇಶಕ: ಸ್ಟೀವಲ್ ಸ್ಪೀಲ್ಬರ್ಗ್
ಅತ್ಯುತ್ತಮ ನಟಿ (ಡ್ರಾಮಾ): ಕೇಟ್ ಬ್ಲಾಂಚೆಟ್
ಅತ್ಯುತ್ತಮ ನಟ (ಡ್ರಾಮಾ): ಆಸ್ಟಿನ್ ಬಟ್ಲರ್
ಅತ್ಯುತ್ತಮ ನಟಿ (ಮ್ಯೂಸಿಕಲ್/ಕಾಮಿಡಿ): ಮಿಶಾಲ್ ಯೋ
ಅತ್ಯುತ್ತಮ ನಟ (ಮ್ಯೂಸಿಕಲ್/ಕಾಮಿಡಿ): ಕಾಲಿನ್ ಫೆರಲ್
ಅತ್ಯುತ್ತಮ ಪೋಷಕ ನಟಿ: ಆಂಜೆಲಾ ಬ್ಯಾಸೆಟ್
ಅತ್ಯುತ್ತಮ ಪೋಷಕ ನಟ: ಕಿ ಹ್ಯು ಕ್ವಾನ್
ಅತ್ಯುತ್ತಮ ಚಿತ್ರಕಥೆ: ಮಾರ್ಟಿನ್ ಮೆಕ್ಡೊನಾಗ್
ಇದನ್ನೂ ಓದಿ: MM Keeravani: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ‘ಆರ್ಆರ್ಆರ್’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ: ಅರ್ಜೆಂಟೀನಾ, 1985
ಅತ್ಯುತ್ತಮ ಒರಿಜಿನಲ್ ಸಾಂಗ್: ನಾಟು ನಾಟು
ಬೆಸ್ಟ್ ಸೀರಿಸ್ (ಡ್ರಾಮಾ): ಹೌಸ್ ಆಫ್ ಡ್ರಾಗನ್
ಬೆಸ್ಟ್ ಸೀರಿಸ್ (ಮ್ಯೂಸಿಕಲ್/ಕಾಮಿಡಿ): ಅಬಾಟ್ ಎಲಿಮೆಂಟರಿ
ಅತ್ಯುತ್ತಮ ಕಿರುತೆರೆ ನಟಿ (ಡ್ರಾಮಾ): ಝೆಂಡೆಯಾ
ಅತ್ಯುತ್ತಮ ಕಿರುತೆರೆ ನಟ (ಡ್ರಾಮಾ): ಕೆವಿನ್ ಕಾಸ್ಟನರ್
ಅತ್ಯುತ್ತಮ ಕಿರುತೆರೆ ನಟಿ (ಮ್ಯೂಸಿಕಲ್/ಕಾಮಿಡಿ): ಕಿಂಟಾ ಬ್ರಾನ್ಸನ್
ಅತ್ಯುತ್ತಮ ಕಿರುತೆರೆ ನಟ (ಮ್ಯೂಸಿಕಲ್/ಕಾಮಿಡಿ): ಜೆರೆಮಿ ಅಲೆನ್ ವೈಟ್
ಅತ್ಯುತ್ತಮ ಪೋಷಕ ನಟಿ (ಕಿರುತೆರೆ): ಜೂಲಿಯಾ ಗಾರ್ನರ್
ಅತ್ಯುತ್ತಮ ಪೋಷಕ ನಟ (ಕಿರುತೆರೆ): ಟೈಲರ್ ಜೇಮ್ಸ್ ವಿಲಿಯಮ್ಸ್
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.