Oscar nominations 2023: ಆಸ್ಕರ್ ನಾಮಿನೇಷನ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಭಾರತೀಯರಲ್ಲಿ ಕುತೂಹಲ
ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್ವಿನ್ ಥಿಯೇಟರ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ ಏಳು ಗಂಟೆ ಕಾರ್ಯಕ್ರಮ ಆರಂಭ ಆಗಲಿದೆ.
ಈ ಬಾರಿಯ ಆಸ್ಕರ್ (Oscar 2023) ಸಾಕಷ್ಟು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಭಾರತದ ‘ಆರ್ಆರ್ಆರ್’, ‘ಕಾಂತಾರ’ (Kantara Movie) ಮೊದಲಾದ ಸಿನಿಮಾಗಳು ಅರ್ಹತೆ ಸುತ್ತಿಗೆ ಸ್ಥಾನ ಪಡೆದುಕೊಂಡಿದ್ದು. ಈಗ ಆಸ್ಕರ್ ನಾಮಿನೇಷನ್ ಪಟ್ಟಿ ರಿಲೀಸ್ ಮಾಡುವ ಸಮಯ. ಇಂದು (ಜನವರಿ 24) ಆಸ್ಕರ್ ನಾಮಿನೇಷನ್ ಲಿಸ್ಟ್ ಅನೌನ್ಸ್ ಆಗಲಿದೆ. ಭಾರತದ ಯಾವ ಚಿತ್ರಗಳು ಆಯ್ಕೆ ಆಗಲಿವೆ ಎನ್ನುವ ಕುತೂಹಲ ಮೂಡಿದೆ.
ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್ವಿನ್ ಥಿಯೇಟರ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ ಏಳು ಗಂಟೆ (ಅಮೆರಿಕದ ಕಾಲಮಾನ ಬೆಳಗ್ಗೆ 8.30) ಕಾರ್ಯಕ್ರಮ ಆರಂಭ ಆಗಲಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ಹಾಗೂ ನಟಿ ವಿಭಾಗದಲ್ಲಿ ಯಾವ ಸಿನಿಮಾಗಳು ನಾಮನಿರ್ದೇಶನಗೊಳ್ಳುತ್ತವೆ ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಇದೆ.
ಭಾರತದ ‘ಆರ್ಆರ್ಆರ್’ ‘ಚೆಲ್ಲೋ ಶೋ’, ‘ಆಲ್ ದೆಟ್ ಬ್ರೀತ್ಸ್’ ಹಾಗೂ ‘ಎಲಿಫಂಟ್ ವಿಸ್ಪರ್ಸ್’ ಚಿತ್ರಗಳು ಶಾರ್ಟ್ಲಿಸ್ಟ್ ಆಗಿವೆ. ಈ ಚಿತ್ರಗಳಲ್ಲಿ ಯಾವ ಸಿನಿಮಾಗಳು ನಾಮನಿರ್ದೇಶನಗೊಳ್ಳಲಿದೆ ಎನ್ನುವ ಕುತೂಹಲ ಭಾರತೀಯರಲ್ಲಿ ಮೂಡಿದೆ. ‘ಆರ್ಆರ್ಆರ್’ ಚಿತ್ರ ಈಗಾಗಲೇ ವಿದೇಶದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ಇಂದು ಆಸ್ಕರ್ ನಾಮಿನೇಷನ್ ಪಟ್ಟಿಯಲ್ಲಿ ‘ಆರ್ಆರ್ಆರ್’ಗೆ ಸ್ಥಾನ ಸಿಕ್ಕರೆ ಹೊಸ ದಾಖಲೆ ಸೃಷ್ಟಿ ಆಗಲಿದೆ. ‘ಆರ್ಆರ್ಆರ್’ ಚಿತ್ರಕ್ಕೆ ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ‘ಆರ್ಆರ್ಆರ್’ ಚಿತ್ರಕ್ಕೆ ಆಸ್ಕರ್ ಸಿಗಲಿದೆ ಎನ್ನುವ ಭರವಸೆಯಲ್ಲಿ ರಾಜಮೌಳಿ ಇದ್ದಾರೆ.
ಇದನ್ನೂ ಓದಿ: ‘ಗೋಲ್ಡನ್ ಗ್ಲೋಬ್’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್ಆರ್ಆರ್’ ಚಿತ್ರ
www.oscars.org ವೆಬ್ಸೈಟ್ನಲ್ಲಿ ಕಾರ್ಯಕ್ರಮದ ಲೈವ್ ವೀಕ್ಷಿಸಬಹುದು. ಇದಲ್ಲದೆ, ಆಸ್ಕರ್ನ ಅಧಿಕೃತ ಟ್ವಿಟರ್, ಯೂಟ್ಯೂಬ್ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ