ಆಸ್ಕರ್ ನಾಮಿನೇಷನ್ಸ್ಗೆ ವೋಟ್ ಮಾಡಿದ ಎ.ಆರ್. ರೆಹಮಾನ್; ನಿಜವಾಗಲಿದೆಯೇ ಅಭಿಮಾನಿಗಳ ಊಹೆ?
ಆಸ್ಕರ್ಗೆ ವೋಟ್ ಮಾಡಿದ್ದಕ್ಕೆ ಅಕಾಡೆಮಿಯವರು ಕಳುಹಿಸಿದ ಪತ್ರದ ಫೋಟೋವನ್ನು ಎ.ಆರ್. ರೆಹಮಾನ್ ಅವರು ಶೇರ್ ಮಾಡಿಕೊಂಡಿದ್ದಾರೆ.
ಈ ವರ್ಷದ ಆಸ್ಕರ್ ನಾಮಿನೇಷನ್ಸ್ (Oscar Nomination) ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಭಾರತದ ‘ಆರ್ಆರ್ಆರ್’, ‘ಕಾಂತಾರ’ (Kantara Movie) ಮೊದಲಾದ ಚಿತ್ರಗಳು ಆಸ್ಕರ್ ರೇಸ್ನ ಅರ್ಹತಾ ಸುತ್ತಿನಲ್ಲಿವೆ. ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಈ ಬಾರಿ ಆಸ್ಕರ್ ಅವಾರ್ಡ್ ಗೆಲ್ಲಲಿದೆ ಎಂದು ಅನೇಕರು ಊಹಿಸುತ್ತಿದ್ದಾರೆ. ಈ ಮಧ್ಯೆ ಆಸ್ಕರ್ ನಾಮಿನೇಷನ್ಗೆ ವೋಟಿಂಗ್ ನಡೆದಿದೆ. ಎ.ಆರ್. ರೆಹಮಾನ್ ಅವರು ತಮ್ಮ ವೋಟ್ಅನ್ನು ಚಲಾಯಿಸಿದ್ದಾರೆ. ಅವರು ‘ನಾಟು ನಾಟು..’ ಹಾಡಿಗೆ ವೋಟ್ ಹಾಕಿದ್ದಾರೆ ಎಂದು ಅನೇಕರು ಊಹಿಸಿದ್ದಾರೆ.
ಆಸ್ಕರ್ಗೆ ವೋಟ್ ಮಾಡಿದ್ದಕ್ಕೆ ಅಕಾಡೆಮಿಯವರು ಕಳುಹಿಸಿದ ಪತ್ರದ ಫೋಟೋವನ್ನು ಎ.ಆರ್. ರೆಹಮಾನ್ ಅವರು ಶೇರ್ ಮಾಡಿಕೊಂಡಿದ್ದಾರೆ. ‘ಧನ್ಯವಾದಗಳು. ನಿಮ್ಮ ವೋಟ್ ಸಿಕ್ಕಿದೆ’ ಎಂದು ಅಕಾಡೆಮಿಯವರು ರೆಹಮಾನ್ಗೆ ಕಳುಹಿಸಿದ್ದಾರೆ. ಇದರ ಜತೆಗೆ ಯಾರಿಗೆ ವೋಟ್ ಹಾಕಿದ್ದೇವೆ ಎನ್ನುವ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡದಂತೆ ಸೂಚಿಸಲಾಗಿದೆ.
ಈ ಪೋಸ್ಟ್ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆಸ್ಕರ್ಗೆ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಶಾರ್ಟ್ಲಿಸ್ಟ್ ಆಗಿದೆ. ಈ ಹಾಡಿನ ಪರವಾಗಿ ರೆಹಮಾನ್ ಅವರು ವೋಟ್ ಚಲಾವಣೆ ಮಾಡಿರುತ್ತಾರೆ ಎಂದು ಅನೇಕರು ಊಹಿಸಿದ್ದಾರೆ. ಈಗಾಗಲೇ ಪ್ರತಿಷ್ಠಿತ ‘ಗೋಲ್ಡನ್ ಗ್ಲೋಬ್ಸ್ ಅವಾರ್ಡ್ಸ್’ನಲ್ಲಿ ಈ ಚಿತ್ರ ಪ್ರಶಸ್ತಿ ಗೆದ್ದಿದೆ. ‘ನಾಟು ನಾಟು..’ ಹಾಡು ಅತ್ಯುತ್ತಮ ಮೂಲ ಹಾಡು ಪ್ರಶಸ್ತಿ ಗೆದ್ದಿದೆ. ಎಂ.ಎಂ. ಕೀರವಾಣಿ ಅವರು ‘ಆರ್ಆರ್ಆರ್’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: Rishab Shetty: ಆಸ್ಕರ್ಗೆ ಕಾಂತಾರ ಪೈಪೋಟಿ, ಕಮಲ್ ಪತ್ರ ಸೇರಿದಂತೆ ಅನೇಕ ವಿಚಾರಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಆಸ್ಕರ್ ಅವಾರ್ಡ್ ಕಾರ್ಯಕ್ರಮ ಈ ವರ್ಷ ಮಾರ್ಚ್ 12ರಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಎ.ಆರ್.ರೆಹಮಾನ್ ಸೇರಿ ಭಾರತದ ಐವರು ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಸಂಪೂರ್ಣವಾಗಿ ಭಾರತದಲ್ಲೇ ಸಿದ್ಧವಾದ ಸಿನಿಮಾಗೆ ಈ ಪ್ರಶಸ್ತಿ ಸಿಕ್ಕಿಲ್ಲ. ಈ ವರ್ಷ ಆ ರೀತಿಯ ಅಪರೂಪದ ದಾಖಲೆ ಸೃಷ್ಟಿ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ