Amala Paul: ಹಿಂದೂ ಪದ್ಧತಿ ನೆಪ ಹೇಳಿ ನಟಿ ಅಮಲಾ ಪೌಲ್‌ಗೆ ದೇಗುಲ ಪ್ರವೇಶ ನಿರಾಕರಿಸಿದ ಕೇರಳದ ದೇವಾಲಯ
ಕೇರಳದ ಎರ್ನಾಕುಲಂನ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದಲ್ಲಿ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ. ತನ್ನ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡುತ್ತಿದ್ದಾರೆ.
ಕೇರಳ : ಕೇರಳದ ಎರ್ನಾಕುಲಂನ ತಿರುವೈರಾಣಿಕುಲಂ (Tiruvairanikulam, Ernakulam) ಮಹಾದೇವ ದೇವಸ್ಥಾನದಲ್ಲಿ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದಕ್ಷಿಣ ಭಾರತದ ನಟಿ ಅಮಲಾ ಪೌಲ್ (Amala Paul) ಆರೋಪಿಸಿದ್ದಾರೆ. ತನ್ನ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೀಗ ಈ ಬಗ್ಗೆ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಸೋಮವಾರ ನಟಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಆವರಣದೊಳಗೆ ಹಿಂದೂಗಳಿಗೆ ಮಾತ್ರ ಇಲ್ಲಿಗೆ ಪ್ರವೇಶ ನೀಡಲಾಗುವುದು ಎಂದು ಆವರಣಕ್ಕೆ ಪ್ರವೇಶಿಸಲು ನಿರಾಕರಿಸಲಾಗಿದೆ . ನಂತರ ದೇವಸ್ಥಾನದ ಮುಂಭಾಗದ ರಸ್ತೆಯಿಂದ ದೇವರಿಗೆ ತನ್ನ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ನಟ ಹೇಳಿಕೊಂಡಿದ್ದಾರೆ. ಘಟನೆಯ ಬಗ್ಗೆ ನಟಿ ಇನ್ನೂ ಯಾವುದೇ ಸಾರ್ವಜನಿಕ ಹೇಳಿಕೆಯನ್ನು ನೀಡಿಲ್ಲ ಆದರೆ IANS ಪ್ರಕಾರ, ಅವರು ದೇವಾಲಯದ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅವರು ದೇವಿಯನ್ನು ನೋಡಿ ಅಲ್ಲಿ ಒಂದು ಅದ್ಭುತ ಕ್ಷಣವನ್ನು ಅನುಭವಿಸಿದ್ದೇನೆ. ಇನ್ನೂ ಕೂಡ ನಮ್ಮ ದೇಶದಲ್ಲಿ ಧಾರ್ಮಿಕ ತಾರತಮ್ಯ ಅಸ್ತಿತ್ವದಲ್ಲಿದೆ ಎಂಬುದು ದುಃಖ ಮತ್ತು ನಿರಾಶೆಯಾಗಿದೆ ಎಂದು ಹೇಳಿದ್ದಾರೆ. ನಾನು ದೇವಿಯ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ ಆದರೆ ದೂರದಿಂದ ಚೈತನ್ಯವನ್ನು ಅನುಭವಿಸಬಹುದು. ಧಾರ್ಮಿಕ ತಾರತಮ್ಯ ಶೀಘ್ರದಲ್ಲೇ ಪರಿಹಾರ ಆಗಬೇಕು, ನಾವು ಕೂಡ ಸಮಾನವಾಗಿ ನಿಲ್ಲುತ್ತೇವೆ. ಧರ್ಮದ ಆಧಾರದ ಮೇಲೆ ಅಲ್ಲ ಎಂದು ಅಮಲಾ ಐಎಎನ್‌ಎಸ್ ಪ್ರಕಾರ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ಇದನ್ನು ಓದಿ:Amala Paul: ‘ಹೆಬ್ಬುಲಿ’ ನಟಿಯ ಹಾಟ್ ಅವತಾರ; ಪಡ್ಡೆಗಳ ನಿದ್ದೆ ಕೆಡಿಸಿದ ಅಮಲಾ ಪೌಲ್ ಫೋಟೋಸ್
ದೇವಾಲಯದ ಅಧಿಕಾರಿಗಳು ಅಮಲಾಗೆ ಪ್ರವೇಶವನ್ನು ನಿರಾಕರಿಸಲು ಅಸ್ತಿತ್ವದಲ್ಲಿರುವ ಪ್ರೋಟೋಕಾಲ್ ಅನ್ನು ಉಲ್ಲೇಖಿಸಿದ್ದಾರೆ. ದೇವಸ್ಥಾನದ ಸಂಪ್ರದಾಯಗಳನ್ನು ಮಾತ್ರ ಪಾಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇತರ ಧರ್ಮದ ಅನೇಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಬಂದಿದ್ದಾರೆ, ಆದರೆ ಅದು ಯಾರಿಗೂ ತಿಳಿದಿಲ್ಲ. ಆದರೆ, ಒಬ್ಬ ಸೆಲೆಬ್ರಿಟಿ ಬಂದಾಗ ಅದು ವಿವಾದಾಸ್ಪದವಾಗುತ್ತದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಮಾಡಿದೆ.
ಮೂವತ್ತೊಂದು ವರ್ಷದ ಪೌಲ್ ಮಲಯಾಳಂ, ತಮಿಳು ಮತ್ತು ತೆಲುಗು ಕನ್ನಡ ಭಾಷೆಗಳಲ್ಲಿ ಯಶಸ್ವಿ ಹಿಟ್ ಸಿನಿಮಾಗಳೊಂದಿಗೆ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Wed, 18 January 23