ಮೊದಲ ವೀಕೆಂಡ್ ಕಲೆಕ್ಷನ್ನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕಲಿದೆ ‘ಪಠಾಣ್’
‘ಕೆಜಿಎಫ್ 2’ ಸಿನಿಮಾ ಕಳೆದ ಏಪ್ರಿಲ್ 14ರಂದು ರಿಲೀಸ್ ಆಗಿತ್ತು. ಈ ಚಿತ್ರದ ಹಿಂದಿ ವರ್ಷನ್ ನಾಲ್ಕು ದಿನಗಳಲ್ಲಿ (ಮೊದಲ ವೀಕೆಂಡ್) 190 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಪಠಾಣ್’ ಚಿತ್ರ ಎರಡು ದಿನಕ್ಕೆ 123 ಕೋಟಿ ಗಳಿಕೆ ಮಾಡಿದೆ.
‘ಪಠಾಣ್’ ಸಿನಿಮಾ (Pathan Movie Collection) ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಕೇವಲ ಎರಡೇ ದಿನಕ್ಕೆ ಈ ಚಿತ್ರ 123 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ರೀತಿಯ ಅಬ್ಬರದ ಕಲೆಕ್ಷನ್ನ ಯಾವ ಚಿತ್ರವೂ ಮಾಡಿರಲಿಲ್ಲ. ಶಾರುಖ್ ಚಿತ್ರ ಒಂದೊಂದೇ ದಾಖಲೆಗಳನ್ನು ಪುಡಿ ಮಾಡುತ್ತಿದೆ. ಮೊದಲ ಹಾಗೂ ಎರಡನೇ ದಿನದ ಕಲೆಕ್ಷನ್ ವಿಚಾರದಲ್ಲಿ ‘ಕೆಜಿಎಫ್ 2’ (KGF Chapter 2) ಹಿಂದಿ ವರ್ಷನ್ ಮಾಡಿದ ದಾಖಲೆಯನ್ನು ‘508071,507901,507836,508231’ ಸಿನಿಮಾ ಮುರಿದಿತ್ತು. ಈಗ ಮೊದಲ ವೀಕೆಂಡ್ ಕಲೆಕ್ಷನ್ನಲ್ಲೂ ‘ಕೆಜಿಎಫ್ 2’ (ಹಿಂದಿ) ದಾಖಲೆಯನ್ನು ಪಠಾಣ್ ಪುಡಿ ಮಾಡುವ ಸೂಚನೆ ಸಿಕ್ಕಿದೆ.
‘ಕೆಜಿಎಫ್ 2’ ಸಿನಿಮಾ ಕಳೆದ ಏಪ್ರಿಲ್ 14ರಂದು ರಿಲೀಸ್ ಆಗಿತ್ತು. ಈ ಚಿತ್ರದ ಹಿಂದಿ ವರ್ಷನ್ ನಾಲ್ಕು ದಿನಗಳಲ್ಲಿ (ಮೊದಲ ವೀಕೆಂಡ್) 190 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಪಠಾಣ್’ ಚಿತ್ರ ಎರಡು ದಿನಕ್ಕೆ 123 ಕೋಟಿ ಗಳಿಕೆ ಮಾಡಿದೆ. ಜನವರಿ 27ಕ್ಕೆ ಈ ಸಿನಿಮಾ 30 ಕೋಟಿ ರೂ. ಬಾಚಿಕೊಂಡಿದೆ ಎನ್ನಲಾಗುತ್ತಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 150 ಕೋಟಿ ರೂಪಾಯಿ ದಾಟಿದೆ. ಶನಿವಾರ (ಜನವರಿ 28) ಹಾಗೂ ಭಾನುವಾರ (ಜನವರಿ 29) ಕೂಡ ಸಿನಿಮಾ ಅಬ್ಬರಿಸುವ ಸೂಚನೆ ಸಿಕ್ಕಿದೆ. ಈ ಮೂಲಕ ಮೊದಲ ವಾರಾಂತ್ಯಕ್ಕೆ ಸಿನಿಮಾದ ಒಟ್ಟಾರೆ ಕಲೆಕ್ಷನ್ 250 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಈ ಮೂಲಕ ‘ಕೆಜಿಎಫ್ 2’ ಹಿಂದಿಯಲ್ಲಿ ಮಾಡಿದ ದಾಖಲೆಯನ್ನು ‘ಪಠಾಣ್’ ಬ್ರೇಕ್ ಮಾಡಲಿದೆ.
ಶಾರುಖ್ ಖಾನ್ ಅವರು ‘ಜೀರೋ’ ಸೋಲಿನ ನಂತರದಲ್ಲಿ ನಾಲ್ಕು ವರ್ಷ ಬ್ರೇಕ್ ಪಡೆದಿದ್ದರು. ಈಗ ಅವರು ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ‘ಪಠಾಣ್’ ಚಿತ್ರಕ್ಕೆ ಶಾರುಖ್ ಖಾನ್ ಅಬ್ಬರದ ಪ್ರಚಾರ ಮಾಡಿದ್ದರು. ಸಿದ್ದಾರ್ಥ್ ಆನಂದ್ ಅವರ ನಿರ್ದೇಶನ ಕೈ ಹಿಡಿದಿದೆ.
ಇದನ್ನೂ ಓದಿ: Shah Rukh Khan: ಎರಡು ದಿನಕ್ಕೆ ವಿಶ್ವಾದ್ಯಂತ 219 ಕೋಟಿ ರೂ. ಗಳಿಸಿದ ‘ಪಠಾಣ್’; ಶಾರುಖ್ ಚಿತ್ರಕ್ಕೆ ಜಯಭೇರಿ
ಶಾರುಖ್ ಖಾನ್ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜವಾನ್’ ಚಿತ್ರಕ್ಕೆ ಅಟ್ಲೀ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ರಾಜ್ಕುಮಾರ್ ಹಿರಾನಿ ಅವರ ‘ಡಂಕಿ’ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈ ಎರಡೂ ಚಿತ್ರಗಳು ಈ ವರ್ಷವೇ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:55 am, Sat, 28 January 23