Rakhi Sawant Mother Dies: ನಟಿ ರಾಖಿ ಸಾವಂತ್ ತಾಯಿ ಜಯಾ ಭೇದಾ ಸಾವಂತ್‌ ನಿಧನ

Jaya Sawant Pases Away ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ ಅವರು ನಿಧನರಾಗಿದ್ದಾರೆ.

Rakhi Sawant Mother Dies: ನಟಿ ರಾಖಿ ಸಾವಂತ್ ತಾಯಿ ಜಯಾ ಭೇದಾ ಸಾವಂತ್‌ ನಿಧನ
ನಟಿ ರಾಖಿ ಸಾವಂತ್ ತಾಯಿ ನಿಧನ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 29, 2023 | 1:15 AM

ಬಾಲಿವುಡ್ ನಟಿ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ (Rakhi Sawant’s mother Jaya Sawant) ಅವರು ನಿಧನರಾಗಿದ್ದಾರೆ. ಕ್ಯಾನ್ಸರ್ ಹಾಗೂ ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಜಯಾ ಭೇದಾ, ಮುಂಬೈನ ಜುಹು ಪ್ರದೇಶದಲ್ಲಿರುವ ಸಿಟಿ ಕೇರ್‌ ಆಸ್ಪತ್ರೆಯಲ್ಲಿ ಜನವರಿ 28ರಂದು ಕೊನೆಯುಸಿರೆಳೆದಿದ್ದಾರೆ. ಜಯಾ ಭೇದಾ ಅವರು ಕೆಲ ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರಿಗೆ ಸುದೀರ್ಘವಾಗಿ ಚಿಕಿತ್ಸೆ ನೀಡಿದರೂ ಜ್ಯಾನ್ಸರ್ ದೇಹದ ಹಲವು ಭಾಗಗಳಿಗೆ ಆವರಿಸಿತ್ತು. ಹಾಗಾಗಿ ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.

ಇದನ್ನೂ ಓದಿ: Taraka Ratna Health: ಹೆಲ್ತ್​ ಬುಲೆಟಿನ್ ರಿಲೀಸ್, ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರ

2021ರ ಏಪ್ರಿಲ್‌ ತಿಂಗಳಿನಲ್ಲಿ ರಾಖಿ ಸಾವಂತ್ ತಾಯಿ ಜಯಾ ಭೇದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಗಾಲ್ ಬ್ಲಾಡರ್‌ನಲ್ಲಿದ್ದ ಟ್ಯೂಮರ್‌ ಅನ್ನು ಸರ್ಜರಿ ಮೂಲಕ ತೆಗೆಯಬೇಕಿತ್ತು. ಈ ಸರ್ಜರಿಗೆ ಸಲ್ಮಾನ್ ಖಾನ್ ಧನ ಸಹಾಯ ಮಾಡಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ರಾಖಿ ಸಾವಂತ್‌ ಅವರ ತಾಯಿ ಜಯಾ ಭೇದಾ ಸಾವಂತ್‌ ಇಂದು ಮೃತಪಟ್ಟಿದ್ದಾರೆ.

ತಾಯಿ ನಿಧನ ಸುದ್ದಿಯನ್ನು ರಾಖಿ ಸಾವಂತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನನ್ನ ತಾಯಿ ಅಗಲಿದ್ದಾರೆ ದುಃಖ ವ್ಯಕ್ತಪಡಿಸಿದ್ದಾರೆ. ಇನ್ನು ರಾಖಿ ಸಾವಂತ್ ತಾಯಿ ನಿಧನಕ್ಕೆ ಬಾಲಿವುಡ್​ನ ಹಲವು ಸಂತಾಪ ಸೂಚಿಸಿದ್ದಾರೆ.

ರಾಖಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿದ್ದು, ತನ್ನ ತಾಯಿಯ ಆರೋಗ್ಯದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲದೇ ನೀವೂ ನನ್ನ ತಾಯಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

Published On - 1:14 am, Sun, 29 January 23