ಅಂದುಕೊಂಡಂತೆ ನಡೆಯಲಿಲ್ಲ ಲೆಕ್ಕಾಚಾರ? ‘ಟೈಗರ್ 3’ ವಿಚಾರದಲ್ಲಿ ತಪ್ಪು ಮಾಡಿದ್ರಾ ಸಲ್ಲು?
ರಿಲೀಸ್ ಆದ ಒಂದೇ ವಾರದಲ್ಲಿ ಗಳಿಕೆ 200 ಕೋಟಿ ರೂಪಾಯಿ ಸಮೀಪಿಸುವುದು ಎಂದರೆ ಅದು ಸಣ್ಣ ಮಾತಲ್ಲ. ಇದನ್ನು ದೊಡ್ಡ ಯಶಸ್ಸು ಎಂದೇ ಕರೆಯಲಾಗುತ್ತದೆ. ಆದರೆ, ಇದಕ್ಕೂ ಹೆಚ್ಚಿನ ಗಳಿಕೆ ಮಾಡುವ ಅವಕಾಶ ನಿರ್ಮಾಪಕರ ಬಳಿ, ಸಲ್ಮಾನ್ ಖಾನ್ ಬಳಿ ಇತ್ತು. ಆದರೆ, ಅದನ್ನು ಅವರು ಕೈ ಚೆಲ್ಲಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ (Katrina Kaif) ನಟನೆಯ ‘ಟೈಗರ್ 3’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಯಶ್ ರಾಜ್ ಫಿಲ್ಮ್ಸ್ ಭಾನುವಾರ ಸಿನಿಮಾ ರಿಲೀಸ್ ಮಾಡಿ ಹೊಸ ಪ್ರಯತ್ನಕ್ಕೆ ಕೈ ಹಾಕಿತ್ತು. ಈ ಪ್ರಯೋಗ ಪೂರ್ತಿ ಯಶಸ್ಸು ಕಂಡಿದೆ ಎಂದು ಹೇಳಲು ಸಾಧ್ಯವಿಲ್ಲ ಅನ್ನೋದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಅದಕ್ಕೆ ಅವರು ವಿವರಣೆಯನ್ನೂ ನೀಡುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಟೈಗರ್ 3’ ಕಲೆಕ್ಷನ್
‘ಟೈಗರ್ 3’ ಸಿನಿಮಾದ ಭಾರತದ ಗಳಿಕೆ 186 ಕೋಟಿ ರೂಪಾಯಿ ಆಗಿದೆ. ಭಾನುವಾರ 44.5 ಕೋಟಿ ರೂಪಾಯಿ, ಸೋಮವಾರ 59 ಕೋಟಿ ರೂಪಾಯಿ, ಮಂಗಳವಾರ 44 ಕೋಟಿ ರೂಪಾಯಿ, ಬುಧವಾರ 21 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಗುರುವಾರ ಸಿನಿಮಾದ ಕಲೆಕ್ಷನ್ 17 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾದ ಗಳಿಕೆ 200 ಕೋಟಿ ರೂಪಾಯಿ ಸಮೀಪಿಸಿದೆ.
ಪಂಡಿತರ ಲೆಕ್ಕಾಚಾರ ಏನು?
ರಿಲೀಸ್ ಆದ ಒಂದೇ ವಾರದಲ್ಲಿ ಗಳಿಕೆ 200 ಕೋಟಿ ರೂಪಾಯಿ ಸಮೀಪಿಸುವುದು ಎಂದರೆ ಅದು ಸಣ್ಣ ಮಾತಲ್ಲ. ಇದನ್ನು ದೊಡ್ಡ ಯಶಸ್ಸು ಎಂದೇ ಕರೆಯಲಾಗುತ್ತದೆ. ಆದರೆ, ಇದಕ್ಕೂ ಹೆಚ್ಚಿನ ಗಳಿಕೆ ಮಾಡುವ ಅವಕಾಶ ನಿರ್ಮಾಪಕರ ಬಳಿ, ಸಲ್ಮಾನ್ ಖಾನ್ ಬಳಿ ಇತ್ತು. ಆದರೆ, ಅದನ್ನು ಅವರು ಕೈ ಚೆಲ್ಲಿದ್ದಾರೆ.
ಇದನ್ನೂ ಓದಿ: SSE Side B Review: ‘ಸೈಡ್ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್ ಬಿ’ ಲಯ ಬದಲಾಗಿಲ್ಲ
ಶುಕ್ರವಾರ ಸಿನಿಮಾ ರಿಲೀಸ್ ಆಗೋದು ವಾಡಿಕೆ. ‘ಟೈಗರ್ 3’ ಸಿನಿಮಾ ಭಾನುವಾರ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಭಾನುವಾರದ ಬದಲು ಶುಕ್ರವಾರ ರಿಲೀಸ್ ಆಗಿದ್ದರೆ ಹೆಚ್ಚಿನ ಲಾಭ ಆಗುತ್ತಿತ್ತು. ಶುಕ್ರವಾರ ಸಿನಿಮಾ ರಿಲೀಸ್ ಆದರೆ ಮೊದಲ ದಿನ ಜನರು ದೊಡ್ಡ ಸಂಖ್ಯೆಯಲ್ಲಿ ಸಿನಿಮಾ ನೋಡುತ್ತಿದ್ದರು. ಶನಿವಾರ ಹಾಗೂ ಭಾನುವಾರವಂತೂ ಭರ್ಜರಿ ಗಳಿಕೆ ಆಗುತ್ತಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್ಗೆ ನುಗ್ಗುತ್ತಿದ್ದರು. ಇದು ಸಿನಿಮಾಗೆ ಬೋನಸ್ ಆಗುತ್ತಿತ್ತು. ಈಗಾಗಲೇ ಸಿನಿಮಾದ ಕಲೆಕ್ಷನ್ 250 ಕೋಟಿ ರೂಪಾಯಿ ದಾಟಿರುತ್ತಿತ್ತು ಅನ್ನೋದು ಅನೇಕರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ