AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್, ಅಲ್ಲು ಅರ್ಜುನ್ ಬದಲಿಗೆ ಯಶ್ ಅನ್ನು ಆರಿಸಿದ ಬಾಲಿವುಡ್ ನಟಿ

Yash: 'ಕೆಜಿಎಫ್' ಸಿನಿಮಾ ಯಶ್ ಅವರನ್ನು ಹೊಸ ಎತ್ತರಗಳಿಗೆ ಕೊಂಡೊಯ್ದಿದೆ. ಕನ್ನಡ ಚಿತ್ರರಂಗ ಎಂಬುದೊಂದು ಇದೆಯೆಂದೂ ಗುರುತಿಸಲು ಮುಜುಗರ ಪಡುತ್ತಿದ್ದ ಕೆಲವು ಸೋ ಕಾಲ್ಡ್ ಸ್ಟಾರ್ ನಟ-ನಟಿಯರು ಇಂದು ಯಶ್​ ಜೊತೆಗೆ ನಟಿಸುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಭಾಸ್, ಅಲ್ಲು ಅರ್ಜುನ್ ಬದಲಿಗೆ ಯಶ್ ಅನ್ನು ಆರಿಸಿದ ಬಾಲಿವುಡ್ ನಟಿ
ಮಂಜುನಾಥ ಸಿ.
|

Updated on:Nov 16, 2023 | 6:12 PM

Share

ಕೆಜಿಎಫ್‘ (KGF) ಸಿನಿಮಾ, ಯಶ್​ ಅನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದಿದೆ. ಕನ್ನಡ ಚಿತ್ರರಂಗದ ಕಡೆಗೆ ತಿರುಗಿಯೂ ನೋಡದಿದ್ದ ಸೆಲೆಬ್ರಿಟಿಗಳೆಲ್ಲ ಈಗ ಯಶ್ ಜೊತೆ ನಟಿಸುವಾಸೆ ಎನ್ನುತ್ತಿದ್ದಾರೆ. ತಮ್ಮನ್ನು ‘ಕೆಜಿಎಫ್’ ಜೊತೆ ಸಮೀಕರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​ನ ಹೈಫೈ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಕಪೂರ್ ಇದೀಗ ಶೋ ಒಂದರಲ್ಲಿ ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ, ದಕ್ಷಿಣದ ಇತರೆ ನಟರ ಬದಲಿಗೆ ಯಶ್​ರನ್ನು ಆರಿಸಿದ್ದಾರೆ.

ಕರೀನಾ ಕಪೂರ್ ಇತ್ತೀಚೆಗೆ ಬಾಲಿವುಡ್​ನ ಜನಪ್ರಿಯ ಹಾಗೂ ವಿವಾದಾತ್ಮಕ ಶೋ ಎನಿಸಿಕೊಂಡಿರುವ ‘ಕಾಫಿ ವಿತ್ ಕರಣ್’ ಸೀಸನ್ ಏಳರಲ್ಲಿ ನಟಿ ಆಲಿಯಾ ಭಟ್ ಜೊತೆಗೆ ಪಾಲ್ಗೊಂಡಿದ್ದರು. ಶೋನಲ್ಲಿ ಕರಣ್ ಜೋಹರ್, ಆಲಿಯಾ ಹಾಗೂ ಕರೀನಾಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಕರೀನಾರಿಗೆ ‘ದಕ್ಷಿಣ ಭಾರತದ ಸ್ಟಾರ್​ಗಳೊಟ್ಟಿಗೆ ನಟಿಸುವ ಅವಕಾಶ ಸಿಕ್ಕರೆ ಯಾರೊಟ್ಟಿಗೆ ನಟಿಸಲು ಇಷ್ಟಪಡುತ್ತೀರಿ’ ಎಂದು ಕೇಳಿದರು. ಆಯ್ಕೆಯಾಗಿ ಅಲ್ಲು ಅರ್ಜುನ್, ಪ್ರಭಾಸ್, ವಿಜಯ್ ದೇವರಕೊಂಡ, ರಾಮ್ ಚರಣ್ ಹಾಗೂ ಯಶ್ ಹೆಸರುಗಳನ್ನು ಕರಣ್ ಜೋಹರ್ ಹೇಳಿದರು.

ಹೆಚ್ಚು ಯೋಚನೆಯನ್ನೂ ಸಹ ಮಾಡದೆ ಪ್ರಶ್ನೆಗೆ ಉತ್ತರಿಸಿದ ನಟಿ ಕರೀನಾ ಕಪೂರ್, ‘ನಾನು ‘ಕೆಜಿಎಫ್’ ಮಾದರಿ ಯುವತಿ. ನನಗೆ ಯಶ್ ಜೊತೆ ನಟಿಸಲು ಇಷ್ಟ’ ಎಂದರು. ಮುಂದುವರೆದು ತಾವು ‘ಕೆಜಿಎಫ್’ ಸಿನಿಮಾವನ್ನು ವೀಕ್ಷಿಸಿರುವುದಾಗಿಯೂ ಕರೀನಾ ಕಪೂರ್ ಹೇಳಿದರು.

ಇದನ್ನೂ ಓದಿ:ಕೆಜಿಎಫ್ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್

‘ಕೆಜಿಎಫ್’ ಸಿನಿಮಾ ಬಾಲಿವುಡ್​ನಲ್ಲಿ ದೊಡ್ಡ ಹವಾ ಎಬ್ಬಿಸಿದೆ. ಬಾಲಿವುಡ್​ನ ತಾರೆಗಳಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಸಹ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ವತಃ ಕರಣ್ ಜೋಹರ್ ಸಹ ‘ಕೆಜಿಎಫ್’ ಸಿನಿಮಾದ ಹಿಂದಿ ವಿತರಣೆಯ ಪಾಲುದಾರರಾಗಿದ್ದರು. ಬೆಂಗಳೂರಿನಲ್ಲಿ ನಡೆದ ‘ಕೆಜಿಎಫ್ 2’ ಸಿನಿಮಾದ ಪ್ರೆಸ್ ಮೀಟ್​ ಅನ್ನು ನಿರೂಪಣೆ ಮಾಡಿದ್ದು ಸಹ ಕರಣ್ ಜೋಹರ್ ಅವರೇ.

‘ಕೆಜಿಎಫ್’ ಸಿನಿಮಾದ ಬಳಿಕ ಯಶ್ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ‘ಕೆಜಿಎಫ್’ ಕ್ಕಿಂತಲೂ ದೊಡ್ಡ ಸಿನಿಮಾಕ್ಕೆ ಯಶ್ ತಯಾರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿದೇಶದಿಂದ ಆಕ್ಷನ್ ನಿರ್ದೇಶಕರನ್ನು ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಯಶ್ ಕರೆತಂದಿದ್ದಾರೆ. ಶ್ರೀಲಂಕಾನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಯಶ್​ರ ಮುಂದಿನ ಸಿನಿಮಾಕ್ಕೆ ಸ್ವತಃ ಅವರೇ ಬಂಡವಾಳ ಸಹ ಹೂಡಲಿದ್ದು, ನಿರ್ದೇಶಕರು ಹಾಗೂ ಕತೆಯೂ ಫೈನಲ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Thu, 16 November 23

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?