‘ಕೆಜಿಎಫ್’ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್

Yash: 'ಕೆಜಿಎಫ್' ಸಿನಿಮಾಕ್ಕೆ ಮೊದಲು ಯಶ್ ಸ್ಟಾರ್ ಆಗಿರಲಿಲ್ಲ ಎಂದು ತೆಲುಗು ಸಿನಿಮಾರಂಗದ ಹಿರಿಯ ನಿರ್ಮಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹೇಳಿದ್ದಾರೆ.

'ಕೆಜಿಎಫ್'ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್
ಯಶ್
Follow us
ಮಂಜುನಾಥ ಸಿ.
|

Updated on: Nov 07, 2023 | 8:50 PM

ಕೆಜಿಎಫ್‘ (KGF) ಸಿನಿಮಾ ಯಶ್ ಅವರ ಸ್ಟಾರ್ ಗಿರಿಯನ್ನು ಹತ್ತು ಪಟ್ಟು ಹೆಚ್ಚು ಮಾಡಿದೆ. ವಿಶ್ವದಾದ್ಯಂತ ಯಶ್ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ, ಗ್ಲೋಬಲ್ ಸ್ಟಾರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇದರ ನಡುವೆ ತೆಲುಗಿನ ಜನಪ್ರಿಯ ಸಿನಿಮಾ ನಿರ್ಮಾಪಕರು, ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಂದೆಯೂ ಆಗಿರುವ ಅಲ್ಲು ಅರವಿಂದ್ ಅವರು ಯಾವುದೋ ವಿಷಯಕ್ಕೆ ಯಶ್ ಅವರನ್ನು ಉದಾಹರಿಸಿ, ‘ಕೆಜಿಎಫ್’ಗೆ ಮುನ್ನ ಯಶ್ ಸ್ಟಾರ್ ಆಗಿರಲಿಲ್ಲ ಎಂದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಈಗ ಸಿನಿಮಾ ನಟರ ಸಂಭಾವನೆ ವಿಷಯ ಜೋರು ಚರ್ಚೆಗೆ ಕಾರಣವಾಗಿದೆ. ನಿರ್ಮಾಪಕರ ಸಂಘದ ಕೆಲ ಸದಸ್ಯರು ಈ ಬಗ್ಗೆ ಸಭೆಗಳನ್ನು ನಡೆಸಿ ಕೆಲವು ಸ್ಟಾರ್ ನಟರು ತಮ್ಮ ಸಂಭಾವನೆಗಳನ್ನು ತಗ್ಗಿಸಿಕೊಳ್ಳಬೇಕು ಎಂದು ಮನವಿಯನ್ನು ಸಹ ಮಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಇನ್ನೂ ಕೆಲವು ನಟರು, ಸ್ಟಾರ್ ನಟರ ಸಂಭಾವನೆ ಬಗ್ಗೆ ಬೇರೆ-ಬೇರೆ ವೇದಿಕೆಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟರ ಸಂಭಾವನೆ ಹೆಚ್ಚಾಯ್ತು, ಇದರಿಂದ ನಿರ್ಮಾಪಕರಿಗೆ ಹೊರೆ ಆಗುತ್ತಿದೆ ಎಂಬುದು ಕೆಲವು ನಿರ್ಮಾಪಕರ ವಾದವಾದರೆ ಇನ್ನು ಕೆಲವರು ಅದನ್ನು ಒಪ್ಪಲು ತಯಾರಿಲ್ಲ.

ಇದನ್ನೂ ಓದಿ:‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

ಇದೇ ವಿಷಯವಾಗಿ ಮಾತನಾಡಿರುವ ನಿರ್ಮಾಪಕ ಅಲ್ಲು ಅರವಿಂದ್, ”ಒಂದು ಸಿನಿಮಾದ ಒಟ್ಟು ಬಜೆಟ್​ನ 25-30% ಮಾತ್ರವೇ ಹೀರೋ ಸಂಭಾವನೆ ಇರುತ್ತದೆ. ಇನ್ನುಳಿದ ಹಣವನ್ನು ಸಿನಿಮಾದ ಇತರೆ ವಿಭಾಗಗಳ ಮೇಲೆ ತೊಡಗಿಸಲಾಗಿರುತ್ತದೆ. ಈಗ ಜನ ಸಿನಿಮಾ ಬೃಹತ್ ಆಗಿರಬೇಕು, ಗ್ರ್ಯಾಂಡ್ ಆಗಿರಬೇಕು, ಅದ್ಧೂರಿಯಾಗಿರಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ನಟ ಯಾರಾದರೂ ಆಗಿರಲಿ, ಸಿನಿಮಾ ಅವರಿಗೆ ಗ್ರ್ಯಾಂಡ್ ಆಗಿರಬೇಕು. ಹಾಗಾಗಿ ಸಿನಿಮಾ ನಟರ ಸಂಭಾವನೆ ಮಾತ್ರದಿಂದಲೇ ಸಿನಿಮಾದ ಬಜೆಟ್​ಗಳು ಹೆಚ್ಚಾಗುತ್ತಿವೆ ಎನ್ನಲಾಗುವುದಿಲ್ಲ. ನಟರು ಯಾರೇ ಆಗಲಿಐ ಸಿನಿಮಾದ ಮೇಕಿಂಗ್​ಗೆ ದೊಡ್ಡ ಮಟ್ಟಿನ ಬಂಡವಾಳ ಹಾಕಲಾಗುತ್ತಿದೆ” ಎಂದಿದ್ದಾರೆ.

‘ಕೆಜಿಎಫ್’ ಸಿನಿಮಾದ ಉದಾಹರಣೆ ತೆಗೆದುಕೊಂಡ ಅಲ್ಲು ಅರವಿಂದ್, ‘ಕೆಜಿಎಫ್’ ಸಿನಿಮಾಕ್ಕೆ ಮುನ್ನ ಯಶ್ ಸ್ಟಾರ್ ಆಗಿರಲಿಲ್ಲ. ಆದರೆ ಕೆಜಿಎಫ್ ಅನ್ನು ಗ್ರ್ಯಾಂಡ್ ಆಗಿಯೇ ಮಾಡಿದರು. ಆ ಅದ್ಧೂರಿತನವೇ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಯ್ತು. ‘ಕೆಜಿಎಫ್’ ಯಶಸ್ಸು, ಈ ವಿಷಯದಲ್ಲಿ ಒಂದು ಉದಾಹರಣೆ, ನಾಯಕ ಯಾರೇ ಆಗಿರಲಿ, ಸಿನಿಮಾ ಅದ್ಧೂರಿಯಾಗಿದ್ದರೆ ಪ್ರೇಕ್ಷಕನಿಗೆ ಇಷ್ಟವಾಗುತ್ತದೆ. ಹಾಗಾಗಿ ದೊಡ್ಡ ನಟರನ್ನು ಆಯ್ಕೆ ಮಾಡಿಕೊಂಡು ಅವರಿಗೆ ದೊಡ್ಡ ಸಂಭಾವನೆ ಕೊಟ್ಟ ಕೂಡಲೇ ಕೆಲಸ ಮುಗಿಯುವುದಿಲ್ಲ. ಸಿನಿಮಾದ ಗುಣಮಟ್ಟಕ್ಕೂ ಅಷ್ಟೇ ದೊಡ್ಡ ಬಂಡವಾಳ ಹಾಕಬೇಕಾಗುತ್ತದೆ” ಎಂದಿದ್ದಾರೆ ಅಲ್ಲು ಅರವಿಂದ್.

ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಗೀತಾ ಆರ್ಟ್ಸ್​ ಮೂಲಕ ಈ ವರೆಗೆ ಹಲವು ಬ್ಲಾಕ್​ ಬಸ್ಟರ್ ಸಿನಿಮಾಗಳನ್ನು ಅಲ್ಲು ಅರವಿಂದ್ ನೀಡಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ಹಿಂದಿ, ತಮಿಳು ಎರಡು ಕನ್ನಡ ಸಿನಿಮಾಗಳನ್ನೂ ಸಹ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್