AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

ಮದನ್​ ಕುಮಾರ್​
|

Updated on: Nov 05, 2023 | 11:47 AM

Share

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಇರುವ ಎಲ್ಲ ಸ್ಪರ್ಧಿಗಳಿಗೂ ಒಂದೊಂದು ಇಂಟರೆಸ್ಟಿಂಗ್​ ಆದಂತಹ ಕಥೆ ಇದೆ. ಅಂಥ ಕಥೆಯನ್ನು ಇಟ್ಟುಕೊಂಡು ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’ ಸಿನಿಮಾಗೆ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ತುಕಾಲಿ ಸಂತೋಷ್​ ಹೀರೋ ಆಗಿದ್ದು, ಅವರಿಗೆ ಸಿರಿ ಮತ್ತು ಭಾಗ್ಯಶ್ರೀ ಹೀರೋಯಿನ್​ ಆಗಿದ್ದಾರೆ.

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಶೋ (Bigg Boss Kannada) ನಡೆಸಿಕೊಡುವ ರೀತಿ ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್​ ಆಗಿ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಎಲ್ಲರನ್ನೂ ನಗಿಸುತ್ತಾ ಭರ್ಜರಿ ಮನರಂಜನೆ ನೀಡುತ್ತಾರೆ. ಈ ಶನಿವಾರದ ಎಪಿಸೋಡ್​ ಸಖತ್​ ಖಡಕ್​ ಆಗಿತ್ತು. ಆದರೆ ಭಾನುವಾರದ ಸಂಚಿಕೆಯಲ್ಲಿ ಹೆಚ್ಚು ಫನ್​ ಇರಲಿದೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಎಲ್ಲ ಸ್ಪರ್ಧಿಗಳಲ್ಲೂ ಒಂದೊಂದು ಇಂಟರೆಸ್ಟಿಂಗ್​ ಕಥೆ ಇದೆ. ಅದನ್ನು ಮೂವೀ ಮಾಡಿದರೆ ವರ್ಕ್​ ಆಗತ್ತೆ’ ಎಂದು ಹೇಳುವ ಮೂಲಕ ಸುದೀಪ್​ (Kichcha Sudeep) ಅವರು ಕೆಲವು ಪೋಸ್ಟರ್​ಗಳನ್ನು ತೋರಿಸಿದ್ದಾರೆ. ‘ಪಾಪ್ರೆಡ್ಡಿ ಪಾಳ್ಯ’, ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’, ‘ಬೆಂಕಿಯ ಬಲೆ’ ಇತ್ಯಾದಿ ಸಿನಿಮಾಗಳ ಪೋಸ್ಟರ್​ ತೋರಿಸಲಾಗಿದೆ. ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’ ಸಿನಿಮಾಗೆ ತುಕಾಲಿ ಸಂತೋಷ್​ (Tukali Santhosh) ಹೀರೋ ಆಗಿದ್ದು, ಅವರಿಗೆ ಭಾಗ್ಯಶ್ರೀ ಮತ್ತು ಸಿರಿ ಹೀರೋಯಿನ್​ ಆಗಿರುವ ರೀತಿಯಲ್ಲಿ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಈ ಸಂಚಿಕೆ ನವೆಂಬರ್​ 5ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆ ಉಚಿತವಾಗಿ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More