‘ಟೈಗರ್ 3’ ಪ್ರದರ್ಶನದ ವೇಳೆ ಥಿಯೇಟರ್​ನಲ್ಲೇ ಪಟಾಕಿ ಹಚ್ಚಿದ ಅಭಿಮಾನಿಗಳು; ಮುಂದೆ ಆಗಿದ್ದು ಮಾತ್ರ ಭೀಕರ..

ಗೋರೆಗಾಂವ್ ಥಿಯೇಟರ್​ನಲ್ಲಿ ‘ಟೈಗರ್ 3’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಸಲ್ಮಾನ್ ಖಾನ್ ಎಂಟ್ರಿ ವೇಳೆ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನು ನೋಡಿ ಒಂದಷ್ಟು ಮಂದಿ ಥಿಯೇಟರ್ ಬಿಟ್ಟು ಓಡಿ ಹೋಗಿದ್ದಾರೆ. ಕಾಲ್ತುಳಿತ ಕೂಡ ಉಂಟಾಗಿದೆ. ಇದೊಂದು ಡಿಸಾಸ್ಟರ್ ಎಂದು ಕರೆಯಲಾಗುತ್ತಿದೆ.

‘ಟೈಗರ್ 3’ ಪ್ರದರ್ಶನದ ವೇಳೆ ಥಿಯೇಟರ್​ನಲ್ಲೇ ಪಟಾಕಿ ಹಚ್ಚಿದ ಅಭಿಮಾನಿಗಳು; ಮುಂದೆ ಆಗಿದ್ದು ಮಾತ್ರ ಭೀಕರ..
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Nov 13, 2023 | 1:30 PM

‘ಟೈಗರ್ 3’ ಸಿನಿಮಾ (Tiger 3 Movie) ರಿಲೀಸ್ ಆಗಿ ಮೊದಲ ದಿನ ಉತ್ತಮ ಗಳಿಕೆ ಮಾಡಿದೆ. ಈ ಸಿನಿಮಾ 44 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಸಲ್ಮಾನ್ ಖಾನ್ ಅವರ ಭರ್ಜರಿ ಓಪನಿಂಗ್ ಕಂಡಿದ್ದಾರೆ. ಈ ಮಧ್ಯೆ ಸಲ್ಮಾನ್ ಖಾನ್ ಫ್ಯಾನ್ಸ್ ನಡೆದುಕೊಂಡ ರೀತಿ ಅನೇಕರಿಗೆ ಶಾಕ್ ತಂದಿದೆ. ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್​ನಲ್ಲಿ ಪಟಾಕಿ ಸಿಡಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಶುಕ್ರವಾರ ಸಿನಿಮಾ ರಿಲೀಸ್ ಆಗುವುದು ವಾಡಿಕೆ. ಆದರೆ, ಯಶ್ ರಾಜ್ ಫಿಲ್ಮ್ಸ್​ನವರು ಭಾನುವಾರ (ನವೆಂಬರ್ 12) ‘ಟೈಗರ್ 3’ ಚಿತ್ರವನ್ನು  ರಿಲೀಸ್ ಮಾಡಿದ್ದಾರೆ. ಈ ಮೂಲಕ ಸಂಪ್ರದಾಯ ಮುರಿದಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಷ್ಮಿ ನಟನೆಯ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಗೋರೆಗಾಂವ್ ಥಿಯೇಟರ್​ನಲ್ಲಿ ‘ಟೈಗರ್ 3’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಸಲ್ಮಾನ್ ಖಾನ್ ಎಂಟ್ರಿ ವೇಳೆ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನು ನೋಡಿ ಒಂದಷ್ಟು ಮಂದಿ ಥಿಯೇಟರ್ ಬಿಟ್ಟು ಓಡಿ ಹೋಗಿದ್ದಾರೆ. ಕಾಲ್ತುಳಿತ ಕೂಡ ಉಂಟಾಗಿದೆ. ಇದೊಂದು ಡಿಸಾಸ್ಟರ್ ಎಂದು ಕರೆಯಲಾಗುತ್ತಿದೆ.

ಗೋರೆಗಾಂವ್ ಮಾತ್ರವಲ್ಲದೆ ಇನ್ನೂ ಕೆಲವು ಕಡೆಗಳಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಸಿಂಗಲ್​ಸ್ಕ್ರೀನ್ ಥಿಯೇಟರ್​ಗಳಲ್ಲಿ ಬ್ಯಾಗ್ ಪರೀಕ್ಷೆ ಮಾಡುವುದಿಲ್ಲ. ಈ ಕಾರಣದಿಂದ ಕೆಲವರು ಬ್ಯಾಗ್​ನಲ್ಲಿ ಪಟಾಕಿ ತಂದಿದ್ದಾರೆ. ಸಲ್ಲು ಎಂಟ್ರಿ ವೇಳೆ ಪಟಾಕಿ ಹಚ್ಚಲಾಗಿದೆ. ಏಕಾಏಕಿ ಈ ರೀತಿ ಘಟನೆ ನಡೆದಿದ್ದರಿಂದ ಅನೇಕರು ಭಯಬಿದ್ದು ಓಡಿ ಹೋಗಿದ್ದಾರೆ.

ಈ ರೀತಿ ಘಟನೆ ನಡೆಯುತ್ತಿರುವುದು ಇದೇ ಮೊದಲೇನು ಅಲ್ಲ. 2021ರಲ್ಲಿ ಸಲ್ಮಾನ್ ಖಾನ್ ನಟನೆಯ ‘ಅಂತಿಮ್’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿದ್ದರು. ಆಗ ಅಭಿಮಾನಿಗಳ ಬಳಿ ಅವರು ಈ ರೀತಿ ಮಾಡಬೇಡಿ ಎಂದು ಕೋರಿಕೊಂಡಿದ್ದರು. ಆದರೆ, ಅಭಿಮಾನಿಗಳು ಮತ್ತೆ ಅದೇ ರೀತಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟರ್ ವಿಮರ್ಶೆ

ಅಭಿಮಾನಿಗಳ ವರ್ತನೆಗೆ ಥಿಯೇಟರ್ ಮಾಲೀಕರು ಕೂಡ ಅಸಮಧಾನ ಹೊರಹಾಕಿದ್ದಾರೆ. ಥಿಯೇಟರ್​ಗೆ ಹಾನಿ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ