ನರಕವಾಯ್ತು ಬಿಗ್​ಬಾಸ್ ಮನೆ: ಇದಕ್ಕೆಲ್ಲ ಕಾರಣ ಯಾರು?

Bigg Boss: ಬಿಗ್​ಬಾಸ್ ಮನೆ ನರಕದಂತಾಗಿದೆ. ರಾಕ್ಷಸರ ಪಾತ್ರದಲ್ಲಿರುವವರು ತಮ್ಮನ್ನು ನಿಜವಾದ ರಾಕ್ಷಸರೆಂದುಕೊಂಡು ಅಟ್ಟಹಾಸ ಮೆರೆದರೆ, ಕೆಲ ಗಂಧರ್ವರು ಸಹ ತಮ್ಮ ರಾಕ್ಷಸತನ ತೋರಿದ್ದಾರೆ.

ನರಕವಾಯ್ತು ಬಿಗ್​ಬಾಸ್ ಮನೆ: ಇದಕ್ಕೆಲ್ಲ ಕಾರಣ ಯಾರು?
ಬಿಗ್​ಬಾಸ್
Follow us
ಮಂಜುನಾಥ ಸಿ.
|

Updated on: Dec 07, 2023 | 11:30 PM

ಬಿಗ್​ಬಾಸ್ (Bigg Boss) ಮನೆ ನರಕದಂತಾಗಿದೆ. ಸ್ಪರ್ಧಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕೂಗಾಡಿ, ಕಿರುಚಾಡಿ ಅವಾಚ್ಯ ಶಬ್ದಗಳನ್ನು ಬಳಸಿ, ಕೈ-ಕೈ ಹಿಡಿದು ಎಳೆದಾಡಿ ಒಟ್ಟಾರೆ ನೋಡುಗರ ಕಣ್ಣು, ಕಿವಿಗೆ ತ್ರಾಸು ನೀಡಿದ್ದಾರೆ. ಬಿಗ್​ಬಾಸ್ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಿ ಒಂದು ತಂಡವನ್ನು ಗಂಧರ್ವರು ಇನ್ನೊಂದು ತಂಡವನ್ನು ರಾಕ್ಷಸರನ್ನಾಗಿ ಮಾಡಲಾಗಿದೆ. ಕಳೆದ ಮೂರು ದಿನಗಳಿಂದಲೂ ಈ ಟಾಸ್ಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳು ತಮಗೆ ನೀಡಿರುವುದು ಪಾತ್ರಗಳು ಎಂಬುದನ್ನೂ ಮರೆತು ಥೇಟ್ ರಾಕ್ಷಸರಂತೆ ವರ್ತಿಸುತ್ತಿದ್ದಾರೆ.

ಮೊದಲು ಗಂಧರ್ವರಾಗಿದ್ದ ವರ್ತೂರು ಸಂತೋಷ್ ತಂಡದವರನ್ನು ಸಂಗೀತಾ ತಂಡದವರು ಕಾಡಿಸಿದ್ದರು. ಅದನ್ನೇ ಮನಸಲ್ಲಿಟ್ಟುಕೊಂಡಿದ್ದ ವರ್ತೂರು ಸಂತೋಷ್ ತಂಡದವರು ಅವಕಾಶ ಸಿಕ್ಕಾಗ ದುಪ್ಪಟ್ಟು ರಾಕ್ಷಸತನ ತೋರಿದರು. ಬುಧವಾರದ ಎಪಿಸೋಡ್​ಗೆ ಹೋಲಿಸಿದರೆ ಗುರುವಾರದ ಎಪಿಸೋಡ್​ ನಲ್ಲಿ ಕ್ರೌರ್ಯ ಡಬಲ್ ಆಗಿತ್ತು. ಟಾಸ್ಕ್ ಆರಂಭದಲ್ಲಿಯೇ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಅಡುಗೆ ಮನೆ ಸೇರಿದ ಸಂಗೀತಾ, ರಾಕ್ಷಸರ ತಂಡಕ್ಕೆ ಸಿಟ್ಟು ತರಿಸಿದರು. ಅಡುಗೆ ಮನೆಯಲ್ಲಿ ನಮ್ರತಾ, ಪವಿ ಹಾಗೂ ಸಂಗೀತಾ ನಡುವೆ ಕೆಟ್ಟ ಜಗಳ ನಡೆದು, ಸಂಗೀತಾ ಹಿಡಿದಿದ್ದ ಪಾತ್ರೆಯನ್ನು ನಮ್ರತಾ, ಸಂಗೀತಾ ಎಳೆದಾಡಿದರು. ಕೊನೆಗೆ ಅದನ್ನು ವಿನಯ್ ಕಿತ್ತು ಬಿಸಾಡಿದರು.

ಆ ನಂತರ ಕಾರ್ತಿಕ್ ಅನ್ನು ಗುರಿ ಮಾಡಿಕೊಂಡ ವಿನಯ್ ಹಾಗೂ ನಮ್ರತಾ ಕಾರ್ತಿಕ್​ರಿಂದ ಕಷ್ಟದ ಕೆಲಸಗಳನ್ನು ಮಾಡಿಸಿದರು. ಮೊಣಕಾಲ ಮೇಲೆ ಕೂತು ನಾಯಿಯಂತೆ ನಡೆಯುತ್ತಿದ್ದ ಕಾರ್ತಿಕ್​ನ ಅಂಗೈಯನ್ನು ಮೇಲಕ್ಕೆ ತಿರುಗಿಸುವಂತೆ ಹೇಳಿ ಅದರ ಮೇಲೆ ಕಾಲಿಟ್ಟು ನಡೆಯುವ ಪ್ರಯತ್ನ ಮಾಡಿದರು. ಆ ನಂತರ ವಿನಯ್, ಕಾರ್ತಿಕ್​ಗೆ ತುಸು ಕಷ್ಟವಾದ ಕೆಲಸಗಳನ್ನೇ ಹೇಳಿದರು. ಆ ಬಳಿಕ ಗಂಧರ್ವರ ಮುಖಕ್ಕೆ ಕ್ರೀಮ್ ಹಚ್ಚುವುದು, ಅವರ ಮೇಲೆ ನೀರು ಸುರಿಸುವುದು ಮಾಡಲಾಯ್ತು. ಟಾಸ್ಕ್​ನ ನಡುವೆ ತುಸು ಹೆಚ್ಚು ಸಿಟ್ಟಾದ ವಿನಯ್, ಚಪಾತಿ ಹಿಟ್ಟನ್ನು ತುಸು ಜೋರಾಗಿಯೇ ವಿನಯ್ ಮುಖಕ್ಕೆ ಹಾಕಿದರು, ಅದನ್ನು ಅವರ ಬಾಯಿಗೆ ತುರುಕಿದರು. ವಿನಯ್, ಮನೆಯ ಕ್ಯಾಪ್ಟನ್ ಸ್ನೇಹಿತ್ ಬಳಿ ದೂರು ಹೇಳಿದರು. ಆದರೆ ಪ್ರಯೋಜವಾಗಲಿಲ್ಲ, ಕೊನೆಗೆ ತಮ್ಮ ಪಾತ್ರದಿಂದ ಹೊರಬಂದು ಸಿಟ್ಟು ಪ್ರದರ್ಶಿಸಿ ಚಪ್ಪಲಿಯನ್ನು ತೆಗೆದು ನೆಲಕ್ಕೆ ಎಸೆದರು, ಅದು ನೆಲಕ್ಕೆ ಬಿದ್ದು ಹಾರಿ ಹೋಗಿ ವಿನಯ್​ಗೆ ಬಿತ್ತು. ಅಲ್ಲಿಗೆ ಮನೆಯಲ್ಲಿ ಜೋರು ಜಗಳವೇ ಪ್ರಾರಂಭವಾಯ್ತು, ವಿನಯ್​ ಅನ್ನು ಎಲ್ಲರೂ ಸೇರಿ ಸಮಾಧಾನ ಮಾಡಿದರು.

ಇದನ್ನೂ ಓದಿ:ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

ಆದರೆ ಈ ಗಲಾಟೆಗೆ ಕಾರಣ ಸಂಗೀತಾ ಎಂಬ ಮಾತು ಮನೆಯಲ್ಲಿ ಕೇಳಿ ಬಂತು, ಸಂಗೀತಾ ತಂಡದವರೇ ಆದ ಸಿರಿ ಸಹ, ಸಂಗೀತಾ, ಟಾಸ್ಕ್​ನ ಆರಂಭದಲ್ಲಿ ತೆಗೆದುಕೊಂಡ ನಿರ್ಧಾರದಿಂದಲೇ ಎದುರಾಳಿಗಳಿಗೆ ಸಿಟ್ಟು ಬಂತು ಕೆಟ್ಟದಾಗಿ ವರ್ತಿಸಿದರು ಎಂದರು. ಆದರೆ ಆ ವಾದವನ್ನು ಸಂಗೀತಾ ಒಪ್ಪಲಿಲ್ಲ, ನನ್ನ ಮಾತು ಕೇಳಿ ಎಂದು ಅಳಲು ಪ್ರಾರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ