ವಿನಯ್ v/s ಕಾರ್ತಿಕ್: ನಿಜವಾಗಿಯೂ ಕಾರ್ತಿಕ್ ಆ ಪದ ಬಳಸಿದರೆ?

Bigg Boss: ಬಿಗ್​ಬಾಸ್ ಮನೆಯಲ್ಲಿ ಮತ್ತೊಮ್ಮ ವಿನಯ್ ಹಾಗೂ ಕಾರ್ತಿಕ್ ನಡುವೆ ಬಿರುಸಿನ ಜಗಳ ನಡೆದಿದೆ. ಕಾರ್ತಿಕ್ ತಮಗೆ ಕೆಟ್ಟ ಪದ ಬಳಸಿ ಬೈದಿದ್ದಾನೆಂದು ವಿನಯ್ ಆರೋಪಿಸಿದ್ದಾರೆ. ನಿಜಕ್ಕೂ ಕಾರ್ತಿಕ್ ಆ ಪದಗಳನ್ನು ಬಳಸಿದರೆ?

ವಿನಯ್ v/s ಕಾರ್ತಿಕ್: ನಿಜವಾಗಿಯೂ ಕಾರ್ತಿಕ್ ಆ ಪದ ಬಳಸಿದರೆ?
ವಿನಯ್-ಕಾರ್ತಿಕ್
Follow us
ಮಂಜುನಾಥ ಸಿ.
|

Updated on:Dec 06, 2023 | 11:51 PM

ಬಿಗ್​ಬಾಸ್​ನಲ್ಲಿ (BiggBoss) ಈ ವಾರ ಜಗಳಗಳು ಬಹಳ ಜೋರಾಗಿವೆ. ರಾಕ್ಷಸರು-ಗಂಧರ್ವರು ಎಂದು ಗುಂಪುಗಳನ್ನಾಗಿ ವಿಂಗಡಿಸಿದ್ದು ಜಗಳಗಳಿಗೆ ಸರಿಯಾದ ವೇದಿಕೆಯನ್ನೇ ಒದಗಿಸಲಾಗಿತ್ತು. ಬುಧವಾರದ ಎಪಿಸೋಡ್​ನಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ರಾಕ್ಷಸ ವೇಷದಲ್ಲಿದ್ದ ಸಂಗೀತಾ, ಕಾರ್ತಿಕ್ ಅವರುಗಳು ಕುರ್ಚಿಯ ಮೇಲೆ ಕೂರಿಸಲಾಗಿದ್ದ ನಾಲ್ವರು ಗಂಧರ್ವರಲ್ಲಿ ಇಬ್ಬರನ್ನು ಕುರ್ಚಿ ಬಿಟ್ಟು ಏಳುವಂತೆ ಮಾಡಬೇಕಿತ್ತು.

ಟಾಸ್ಕ್ ಆಡುವ ವೇಳೆ ಯಾವುದೋ ಮಾತಿಗೆ ವಿನಯ್, ಕಾರ್ತಿಕ್ ಅನ್ನು ತಗಡು ಎಂದು ರೇಗಿಸಲು ಪ್ರಾರಂಭಿಸಿದರು. ಕಾರ್ತಿಕ್ ಸಹ ಅದಕ್ಕೆ ತಕ್ಕಂತೆ ವಿನಯ್ ಅನ್ನು ತಗಡು ಎಂದು ಪ್ರತಿಕ್ರಿಯಿಸಲು ಆರಂಭಿಸಿದರು. ಈ ವೇಳೆ ಮಹಿಳೆಯರ ಬಗ್ಗೆಯೂ ಮಾತೊಂದು ಬಂತು, ಆ ಮಾತು ಹಾಗೆಯೇ ಮುಂದುವರೆದು ಇಬ್ಬರ ನಡುವೆ ತುಸು ಜೋರಾದ ಜಗಳವಾಯ್ತು.

ಈ ವೇಳೆ ವಿನಯ್ ತೀವ್ರ ಸಿಟ್ಟಿನಿಂದ ವರ್ತಿಸಿದರು. ಕಾರ್ತಿಕ್ ಸಹ. ಕಾರ್ತಿಕ್ ಬಳಿ ಬಂದ ವಿನಯ್ ಕೆಲವು ಆಂಗಿಕ ಸಂಜ್ಞೆಗಳನ್ನು ಮಾಡಿದರು. ಈ ವೇಳೆ ಕಾರ್ತಿಕ್ ಧ್ವನಿ ಹೊರಡಿಸದೆ ಕೆಲವು ಮಾತುಗಳನ್ನು ಆಡಿದರು. ಆದರೆ ಆ ಬಳಿಕ ವಿನಯ್, ಕಾರ್ತಿಕ್ ನನ್ನನ್ನು ಕೆಟ್ಟ ಮಾತಿನಿಂದ ಬೈದ ಎಂದು ಒಮ್ಮೆಲೆ ಜೋರಾಗಿ ಕೂಗಾಡಿದರು. ಕುಟುಂಬದ ವಿಷಯವನ್ನು ಚರ್ಚೆಗೆ ತಂದ, ಅವನಿಗೂ ಅಮ್ಮ, ತಂಗಿ ಇದ್ದಾರೆ ಅವನು ನನ್ನನ್ನು ಕೆಟ್ಟದಾಗಿ ಬೈದ ಎಂದು ಜೋರಾಗಿ ಕೂಗಾಡಿದರು. ‘ನೀನು ನನ್ನ ಟಾರ್ಗೆಟ್, ನೀನೊಬ್ಬನೆ ನನ್ನ ಟಾರ್ಗೆಟ್’ ಎಂದು ವಿನಯ್ ಧಮ್ಕಿ ಸಹ ಹಾಕಿದರು. ಅದಕ್ಕೆ ಕಾರ್ತಿಕ್ ಆಯ್ತು ಹೋಗೋಲೆ ಎಂದು ಕೂಗಾಡಿದರು.

ಇದನ್ನೂ ಓದಿ:ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು

ವಿನಯ್​ ಮಾಡಿದ ಆರೋಪವನ್ನು ಕಾರ್ತಿಕ್ ಸಂಪೂರ್ಣವಾಗಿ ಅಲ್ಲಗಳೆದರು. ನಾನು ಕೆಟ್ಟ ಪದಗಳನ್ನು ಬಳಸಿದ್ದರೆ ನನ್ನನ್ನು ಈ ಕೂಡಲೇ ಈ ಮನೆಯಿಂದ ಹೊರಗೆ ಹಾಕಿ, ಈ ಕೂಡಲೇ ನಾನು ಹೊರಗೆ ಹೋಗಲು ಸಿದ್ಧ. ನಾನು ಖಂಡಿತ ಹಾಗೆ ಅಂದಿಲ್ಲ ಎಂದರು. ವಿಡಿಯೋ ಇದೆ ಬೇಕಾದರೆ ವೀಡಿಯೋದಲ್ಲಿ ನೋಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಆದರೆ ವಿನಯ್, ತುಕಾಲಿ, ನಮ್ರತಾ ಇನ್ನಿತರರ ಮುಂದೆ ಕಾರ್ತಿಕ್ ಬಗ್ಗೆ ಬೋಡ ಇನ್ನಿತರೆ ಮಾತುಗಳನ್ನು ಬೈಯ್ಯುತ್ತಲೇ ಇದ್ದರು. ನಿಜವಾಗಿಯೂ ಕಾರ್ತಿಕ್, ವಿನಯ್​ಗೆ ಕೆಟ್ಟ ಪದಗಳನ್ನು ಬಳಸಿದರೇ ಅಥವಾ ಇಲ್ಲವೇ ಎಂಬುದು ಪ್ರೇಕ್ಷಕರಿಗೆ ತಿಳಿಯಲಿಲ್ಲ. ಬಹುಷಃ ವಾರಾಂತ್ಯದಲ್ಲಿ ಸುದೀಪ್ ಅವರು ಬಂದಾಗ ಈ ಗೊಂದಲಕ್ಕೆ ಪರಿಹಾರ ಸಿಗಬಹುದು. ನಿಜವಾಗಿಯೂ ಕಾರ್ತಿಕ್ ಕೆಟ್ಟ ಪದಗಳನ್ನು ಬಳಸಿದ್ದಾರೆಯೇ ಅಥವಾ ವಿನಯ್ ಉದ್ದೇಶಪೂರ್ವಕವಾಗಿ ಕಾರ್ತಿಕ್ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಯೇ ತಿಳಿಯಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 pm, Wed, 6 December 23

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್