‘ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು’; ಕಾರ್ತಿಕ್​ಗೆ ವಿನಯ್ ಎಚ್ಚರಿಕೆ

ಕಾರ್ತಿಕ್​ ಅವರನ್ನು ವಿನಯ್ ಕೆಣಕಿದರು. ಈ ವೇಳೆ ಕಾರ್ತಿಕ್ ಬೀಸಿ ಎಸೆದ ಚಪ್ಪಲ್ಲಿ ನೆಲಕ್ಕೆ ಬಡಿದು ವಿನಯ್​ಗೆ ತಾಗಿತು. ಇದರಿಂದ ಮನೆ ರಣರಂಗ ಆಯಿತು.

‘ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು’; ಕಾರ್ತಿಕ್​ಗೆ ವಿನಯ್ ಎಚ್ಚರಿಕೆ
ವಿನಯ್-ಕಾರ್ತಿಕ್​,ಸಂಗೀತಾ
Follow us
ರಾಜೇಶ್ ದುಗ್ಗುಮನೆ
|

Updated on:Dec 08, 2023 | 8:16 AM

ರಾಕ್ಷಸರು ಹಾಗೂ ಗಂಧರ್ವರು ಗೇಮ್​ನಲ್ಲಿ ಇಡೀ ಮನೆ ರಣರಂಗ ಆಗಿದೆ. ರಾಕ್ಷಸರು ರಾಕ್ಷಸರಂತೆ ವರ್ತಿಸಿದ್ದಾರೆ. ಗಂಧರ್ವರು ಕೂಡ ರಾಕ್ಷಸರಂತೆ ನಡೆದುಕೊಂಡಿದ್ದಾರೆ. ಹೀಗಾಗಿ, ಇಡೀ ಮನೆ ಹೊತ್ತಿ ಉರಿದಿದೆ. ಯಾರನ್ನೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರಿಂದ ಘನಘೋರ ಜಗಳ ನಡೆದಿದೆ. ಕಾರ್ತಿಕ್ (Karthik Gowda) ಚಪ್ಪಲಿಯಲ್ಲಿ ಹೊಡೆದ ಎಂದು ವಿನಯ್ ಆರೋಪಿಸಿದ್ದಾರೆ. ಕಾರ್ತಿಕ್​ಗೆ ಹೊಡೆಯಲು ವಿನಯ್ ಮುಂದಾಗಿದ್ದಾರೆ. ಈ ಎಲ್ಲಾ ಹೈಡ್ರಾಮಾಗಳನ್ನು ಯಾರಿಂದಲೂ ಕಂಟ್ರೋಲ್ ಮಾಡೋಕೆ ಸಾಧ್ಯವಾಗಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನೀಡಲಾಗಿತ್ತು. ಸಂಗೀತಾ ಟೀಂನವರು ಮೊದಲು ರಾಕ್ಷಸರಾದರು. ವರ್ತೂರು ಸಂತೋಷ್ ತಂಡದವರು ಗಂಧರ್ವರಾಗಿದ್ದರು. ರಾಕ್ಷಸರು ಹೇಳಿದಂತೆ ಗಂಧರ್ವರು ನಡೆದುಕೊಳ್ಳಬೇಕು. ಆ ಬಳಿಕ ಸಂಗೀತಾ ತಂಡದವರು ಗಂಧರ್ವರಾದರು, ವರ್ತೂರು ಸಂತೋಷ್ ತಂಡದವರು ರಾಕ್ಷಸರಾದರು. ‘ಅವರು ಹೇಳಿದಂತೆ ನಡೆದುಕೊಳ್ಳೋದು ಬೇಡ’ ಎಂದು ತಂಡದ ಸದಸ್ಯರಿಗೆ ಸಂಗೀತಾ ಸೂಚನೆ ಬಂತು. ಎಲ್ಲರೂ ಅದರಂತೆ ಮಾಡಿದರು. ಇದರಿಂದ ಆಟ ಹಳ್ಳ ಹಿಡಿಯಿತು.

ಕಾರ್ತಿಕ್​ ಅವರನ್ನು ವಿನಯ್ ಕೆಣಕಿದರು. ಈ ವೇಳೆ ಕಾರ್ತಿಕ್ ಬೀಸಿ ಎಸೆದ ಚಪ್ಪಲ್ಲಿ ನೆಲಕ್ಕೆ ಬಡಿದು ವಿನಯ್​ಗೆ ತಾಗಿತು. ಇದರಿಂದ ಮನೆ ರಣರಂಗ ಆಯಿತು. ‘ನಿನ್ನ ಬಳಿ ಚಪ್ಪಲಿ ಏಟು ತಿನ್ನೋಕೆ ಬಂದಿಲ್ಲ. ನಿನಗೆ ಹೊಡೆದು ನಾನು ಹೊರಗೆ ಹೋಗೋದು’ ಎಂದು ವಿನಯ್ ಕೂಗಾಡಿದರು. ಆದರೆ, ಕಾರ್ತಿಕ್ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

‘ಲೇ ತಗಡು ಎದೆಮೇಲೆ ಕಾಲಿಟ್ಟು ನಿನ್ನ ತುಳಿಯೋದು’ ಎಂದು ಕಾರ್ತಿಕ್​ಗೆ ವಿನಯ್ ಎಚ್ಚರಿಸಿದರು. ಆಗಲೂ ಕಾರ್ತಿಕ್ ಕೂಲ್​ ಆಗಿ ವರ್ತಿಸಿದರು. ‘ನಾನು ಇಂಥ ಕುರಿಗಳನ್ನು ಸಾಕಷ್ಟು ನೋಡಿದ್ದೇನೆ’ ಎಂದರು ಕಾರ್ತಿಕ್. ‘ಹೊರಗೆ ಬಾ ನಿನಗೆ ಇಡೀ ಸಿನಿಮಾ ತೋರಿಸ್ತೀನಿ’ ಎಂದೂ ವಿನಯ್​ ಅವರು ಕಾರ್ತಿಕ್​ಗೆ ಎಚ್ಚರಿಕೆ ನೀಡಿದರು. ‘ಇವರನ್ನೆಲ್ಲ ತಿಂದು, ತೇಗಿ, ಕಕ್ಕ ಮಾಡಿಯೇ ಹೋಗೋದು’ ಎಂದು ವಿನಯ್ ಕೂಗಾಡಿದ್ದಾರೆ. ಜಿಯೋ ಸಿನಿಮಾ ಹಾಗೂ ಕಲರ್ಸ್​ ಕನ್ನಡದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್​ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Fri, 8 December 23