‘ಪ್ಲೀಸ್ ಶಟ್ಅಪ್’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ
ವಿನಯ್ ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಸಾಕಷ್ಟು ಕಿತ್ತಾಟ ಉಂಟಾಗಿತ್ತು. ಒಂದು ಸಮಯದಲ್ಲಿ ಇಬ್ಬರೂ ಫ್ರೆಂಡ್ಸ್ ಆದರು. ಈಗ ಇವರು ಮತ್ತೆ ಕಿತ್ತಾಟ ಶುರು ಮಾಡಿದ್ದಾರೆ.
ಬಿಗ್ ಬಾಸ್ನಲ್ಲಿ (Bigg Boss) ಈ ವಾರ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಗಂಧರ್ವರು ಒಂದು ಕಡೆ ಹಾಗೂ ರಾಕ್ಷಸರು ಇನ್ನೊಂದು ಕಡೆ. ಇವರ ಮಧ್ಯೆ ಟಾಸ್ಕ್ ನಡೆಯಲಿದೆ. ಈ ಗ್ರೂಪ್ನ ಆಯ್ಕೆ ಮಾಡಲು ಬಿಗ್ ಬಾಸ್ ಬೇರೆಯದೇ ಆದ ತಂತ್ರ ಉಪಯೋಗಿಸಿತ್ತು. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯ ತನ ಇದೆ ಎಂಬುದನ್ನು ಹೇಳಬೇಕು. ವಿನಯ್ ಕೆಟ್ಟ ಗುಣಗಳ ಬೇರು ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಮಾಡಿದ್ದಾರೆ. ಸಂಗೀತಾಗೆ ಶಟ್ಅಪ್ ಎಂದು ಬೈದಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಲೈವ್ ನೋಡಲು ಜಿಯೋ ಸಿನಿಮಾದಲ್ಲಿ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

