‘ಬಿಗ್​ ಬಾಸ್​ನಿಂದ ಹೋಗ್ತೀನಿ’; ಈ ಬಾರಿ ಜೋರಾಗಿದೆ ಬ್ಲಾಕ್​ಮೇಲ್ ತಂತ್ರ?

‘ನಾನು ಬಿಗ್ ಬಾಸ್ ಬಿಟ್ಟು ಹೋಗ್ತೀನಿ’ ಎಂದು ಹೇಳೋದು ಈ ಬಾರಿಯ ಬಿಗ್​ ಬಾಸ್ ಸೀಸನ್​ನಲ್ಲಿ ಜೋರಾಗಿದೆ. ಈಗಾಗಲೇ ಮೂವರು ದೊಡ್ಮನೆಯಿಂದ ಹೊರ ಬರುವ ನಿರ್ಧಾರ ಮಾಡಿದ್ದರು. ಆ ಬಳಿಕ ಮನಸ್ಸು ಬದಲಿಸಿದರು.

‘ಬಿಗ್​ ಬಾಸ್​ನಿಂದ ಹೋಗ್ತೀನಿ’; ಈ ಬಾರಿ ಜೋರಾಗಿದೆ ಬ್ಲಾಕ್​ಮೇಲ್ ತಂತ್ರ?
ಸಂಗೀತಾ-ವಿನಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 08, 2023 | 12:44 PM

ಬಿಗ್ ಬಾಸ್​ಗೆ (Bigg Boss)  ಹೋಗಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಆದರೆ, ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕರೂ ಕೆಲವರು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಇನ್ನೂ ಕೆಲವರು ದೊಡ್ಮನೆಯ ರಾಜಕೀಯ, ಆಟಗಳಿಂದ ಬೇಸತ್ತು ಹೊರಗೆ ಬರುವ ನಿರ್ಧಾರ ಮಾಡುತ್ತಾರೆ. ಈ ಬಾರಿಯ ಬಿಗ್​ ಬಾಸ್ ಸೀಸನ್​ನಲ್ಲಿ ಅದು ಜೋರಾಗಿದೆ. ಈಗಾಗಲೇ ಮೂವರು ದೊಡ್ಮನೆಯಿಂದ ಹೊರ ಬರುವ ನಿರ್ಧಾರ ಮಾಡಿದ್ದರು. ಆ ಬಳಿಕ ಮನಸ್ಸು ಬದಲಿಸಿದರು. ಆ ಬಗ್ಗೆ ಇಲ್ಲಿದೆ ವಿವರ.

ಸಂಗೀತಾ ಶೃಂಗೇರಿ

‘777 ಚಾರ್ಲಿ’ ಅಂಥ ಚಿತ್ರಗಳಲ್ಲಿ ನಟಿಸಿದವರು ಸಂಗೀತಾ ಶೃಂಗೇರಿ. ಅವರು ದೊಡ್ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಆದರೆ, ಅವರಿಗೆ ದೊಡ್ಮನೆ ಆಟ ಆಗಾಗ ಸಾಕು ಎನಿಸುತ್ತದೆ. ತನಿಷಾ, ಕಾರ್ತಿಕ್ ಜೊತೆ ಜಗಳ ಆದಾಗ ಅವರು ದೊಡ್ಮನೆಯಿಂದ ಹೊರಹೋಗುತ್ತೇನೆ ಎಂದಿದ್ದರು. ತಮ್ಮನ್ನು ಕಳುಹಿಸುವಂತೆ ಅವರು ಕೋರಿಕೊಂಡರು. ಬ್ರಹ್ಮಾಂಡ ಗುರೂಜಿಯನ್ನು ಕಳುಹಿಸಲು ಡೋರ್ ಓಪನ್ ಮಾಡಿದಾಗ ಇವರೂ ಡೋರ್​ನಿಂದ ಹೊರಗೆ ಕಾಲಿಟ್ಟಿದ್ದರು. ಕಾರ್ತಿಕ್ ಅವರ ಅಟೆಂಷನ್ ಗಳಿಸಲು ಅವರು ಈ ರೀತಿಯ ತಂತ್ರ ರೂಪಿಸಿದ್ದರು ಎನ್ನುವ ಆರೋಪ ಕೇಳಿ ಬಂತು.

ವರ್ತೂರು ಸಂತೋಷ್

ವರ್ತೂರು ಸಂತೋಷ್ ಅವರು ದೊಡ್ಮನೆಗೆ ಸ್ಪರ್ಧಿ ಆಗಿ ಬಂದರು. ಈ ವೇಳೆ ಅವರ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಎಲ್ಲರ ಗಮನ ಸೆಳೆಯಿತು. ಈ ಪ್ರಕರಣದಲ್ಲಿ ಅವರು ಅರೆಸ್ಟ್​ ಕೂಡ ಆದರು. ಒಂದು ವಾರಗಳ ಕಾಲ ಅವರು ಹೊರಗೆ ಇದ್ದರು. ಅವರು ಮರಳಿ ದೊಡ್ಮನೆಗೆ ಬಂದರು. ಆದರೆ, ಅವರಿಗೆ ಮನೆಯ ನೆನಪು, ಹೊರಗೆ ಏನಾಗುತ್ತಿದೆ ಎನ್ನುವ ಭಯ ಕಾಡಿದೆ. ಹೀಗಾಗಿ, ನಾನು ಮನೆಯಿಂದ ಹೊರಗೆ ಹೊಗ್ತೀನಿ ಎಂದು ಹಠ ಹಿಡಿದು ಕುಳಿತಿದ್ದರು. ವೀಕೆಂಡ್​ನಲ್ಲಿ ಸುದೀಪ್ ಕೂಡ ಅರ್ಧಕ್ಕೆ ಶೋನಿಂದ ಹೊರ ನಡೆದರು.

ವಿನಯ್ ಗೌಡ

ಡಿಸೆಂಬರ್ 7ರ ಎಪಿಸೋಡ್​ನಲ್ಲಿ ವಿನಯ್ ಗೌಡ ಅವರು ದೊಡ್ಮನೆಯಿಂದ ಹೊರಹೋಗುವ ಬೆದರಿಕೆ ಹಾಕಿದರು. ಕಾರ್ತಿಕ್ ಮಹೇಶ್ ಎಸೆದ ಚಪ್ಪಲಿ ನೆಲಕ್ಕೆ ಬಡಿದು ವಿನಯ್​ಗೆ ತಾಗಿತು. ಇದರಿಂದ ವಿನಯ್ ಅವರು ಸಾಕಷ್ಟು ಕೂಗಾಟ ನಡೆಸಿದರು. ‘ಅವನಿಂದ ಚಪ್ಪಲಿ ಏಟು ತಿನ್ನುವಂಥದ್ದು ನನಗೇನು ಬಂದಿದೆ? ನಾನು ಬಿಗ್ ಬಾಸ್​ನಿಂದ ಹೋಗುತ್ತೇನೆ’ ಎಂದು ದೊಡ್ಮನೆಯ ಮುಖ್ಯದ್ವಾರ ಬಡಿದರು. ಇದರಿಂದ ದೊಡ್ಮನೆಯಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಆ ಬಳಿಕ ಅವರು ನಿರ್ಧಾರ ಬದಲಿಸಿದರು. ‘ಕಪ್ ತೆಗೆದುಕೊಂಡೇ ಹೋಗೋದು’ ಎಂದಿದ್ದಾರೆ ವಿನಯ್.

ಇದನ್ನೂ ಓದಿ: ‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

ಬ್ಲಾಕ್​ಮೇಲ್ ತಂತ್ರ

ಈ ಮೊದಲಿನ ಸೀಸನ್​ಗಳಲ್ಲಿ ಅಲ್ಲೊಂದು, ಇಲ್ಲೊಂದು ಸ್ಪರ್ಧಿಗಳು ಬಿಗ್ ಬಾಸ್ ಬಿಟ್ಟು ಹೋಗುವ ಬಗ್ಗೆ ಹೇಳಿದ್ದಿದೆ. ಆದರೆ, ಇದೇ ಮೊದಲ ಬಾರಿಗೆ ಸಾಲು ಸಾಲು ಸ್ಪರ್ಧಿಗಳು ಈ ರೀತಿ ಬಿಗ್ ಬಾಸ್ ಬಿಟ್ಟು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಬ್ಲಾಕ್​ಮೇಲ್ ತಂತ್ರ ಅಷ್ಟೇ ಎಂಬುದು ವೀಕ್ಷಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Fri, 8 December 23

ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ