‘ಬುಲ್ಶಿಟ್ ಕಾರಣ ಕೊಡಬೇಡಿ’; ಸ್ನೇಹಿತ್ ನಿರ್ಧಾರದಿಂದ ತೀವ್ರವಾಗಿ ನೊಂದುಕೊಂಡ ನಮ್ರತಾ
ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಬೇಕಾದ ಆದೇಶ ಬಂದಾಗ ವಿನಯ್ ಹಾಗೂ ನಮ್ರತಾ ಅವರನ್ನು ಸ್ನೇಹಿತ್ ಹೊರಗೆ ಇಟ್ಟರು. ವಿನಯ್ಗೆ ಈ ವಿಚಾರ ಹೆಚ್ಚು ಶಾಕಿಂಗ್ ಎನಿಸಲಿಲ್ಲ. ಆದರೆ, ನಮ್ರತಾ ಈ ವಿಚಾರದಲ್ಲಿ ಸಾಕಷ್ಟು ಬೇಸರ ಮಾಡಿಕೊಂಡರು.
ನಮ್ರತಾ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂಬ ಕನಸು ಕಂಡಿದ್ದರು. ಆದರೆ, ಇದು ಸದ್ಯಕ್ಕಂತೂ ನೆರವೇರುವ ಸೂಚನೆ ಕಾಣುತ್ತಿಲ್ಲ. ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ನಿಂದ ಕೆಲವರನ್ನು ಹೊರಗೆ ಇಡಬೇಕು ಎನ್ನುವ ಆದೇಶ ಬಂತು. ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಅವರು ನಮ್ರತಾ ಅವರನ್ನು ಹೊರಗೆ ಇಟ್ಟರು. ಇದು ಅವರನ್ನು ಸಾಕಷ್ಟು ದುಃಖಕ್ಕೆ ತಳ್ಳಿದೆ. ನಮ್ರತಾ ಅವರು ಸ್ನೇಹಿತ್ ಜೊತೆ ಮಾತುಕತೆಯನ್ನೇ ನಿಲ್ಲಿಸಿದ್ದಾರೆ.
ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ನಮ್ರತಾಗೆ ಎಲ್ಲಾ ವಿಚಾರಗಳಲ್ಲಿ ಸ್ನೇಹಿತ್ ಫೇವರ್ ಮಾಡುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈ ಬಾರಿಯ ನಾಮಿನೇಷನ್ನಿಂದ ಸ್ಪರ್ಧಿಗಳನ್ನು ಸೇವ್ ಮಾಡೋ ಅಧಿಕಾರ ಕ್ಯಾಪ್ಟನ್ ಸ್ನೇಹಿತ್ಗೆ ಇತ್ತು. ಈ ವೇಳೆ ನಮ್ರತಾ ಹಾಗೂ ವಿನಯ್ನ ಸ್ನೇಹಿತ್ ಮೊದಲು ಸೇವ್ ಮಾಡಿದರು. ಕ್ಯಾಪ್ಟನ್ ಆದ ಬಳಿಕ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ವಿನಯ್ ತಂಡದ ಪರವಾಗಿಯೇ ಇರುತ್ತದೆ ಎಂದು ಅನೇಕರು ಹೇಳಿದ್ದರು. ಇದನ್ನು ಸುಳ್ಳು ಮಾಡಲು ಸ್ನೇಹಿತ್ ಮುಂದಾದರು.
ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಬೇಕಾದ ಆದೇಶ ಬಂದಾಗ ವಿನಯ್ ಹಾಗೂ ನಮ್ರತಾ ಅವರನ್ನು ಸ್ನೇಹಿತ್ ಹೊರಗೆ ಇಟ್ಟರು. ವಿನಯ್ಗೆ ಈ ವಿಚಾರ ಹೆಚ್ಚು ಶಾಕಿಂಗ್ ಎನಿಸಲಿಲ್ಲ. ಆದರೆ, ನಮ್ರತಾ ಈ ವಿಚಾರದಲ್ಲಿ ಸಾಕಷ್ಟು ಬೇಸರ ಮಾಡಿಕೊಂಡರು. ‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗೆ ಇಡೋಕೆ ನೀವು ಕೊಟ್ಟ ಕಾರಣ ಬುಲ್ಶಿಟ್ ಎನಿಸಿತು. ಎಲ್ಲರ ಎದುರು ಒಳ್ಳೆಯವರು ಎನಿಸಿಕೊಳ್ಳಲು ಈ ರೀತಿ ಮಾಡಿದ್ದೀರಿ’ ಎಂದಿದ್ದಾರೆ ನಮ್ರತಾ.
ಇದನ್ನೂ ಓದಿ: ‘ವಿನಯ್, ನಮ್ರತಾ ನಿಯಮ ಪಾಲಿಸಿಲ್ಲ’; ಇಬ್ಬರನ್ನೂ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟ ಸ್ನೇಹಿತ್
ಆದರೆ, ಇದನ್ನು ಸ್ನೇಹಿತ್ ಒಪ್ಪಿಕೊಳ್ಳಲಿಲ್ಲ. ‘ನಿಮಗೆ ಹೋಲಿಸಿದರೆ ಉಳಿದವರ ಆಟ ಉತ್ತಮವಾಗಿತ್ತು. ಹಾಗಾಗಿ ನಿಮ್ಮನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗೆ ಇಟ್ಟೆ’ ಎಂದರು ಸ್ನೇಹಿತ್. ಈ ಮಾತನ್ನು ಕೇಳಿ ನಮ್ರತಾ ಮತ್ತಷ್ಟು ಬೇಸರ ಮಾಡಿಕೊಂಡರು. ಅವರು ಸ್ನೇಹಿತ್ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ