ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೋ ಕೇಸ್: ನಾಲ್ವರು ಶಂಕಿತರ ವಿಚಾರಣೆ
ವಿಚಾರಣೆಗೆ ಒಳಪಟ್ಟಿರುವ ಈ ನಾಲ್ವರು ಶಂಕಿತರು ಕೇವಲ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆದರೆ ಇವರು ಡೀಪ್ಫೇಕ್ ವಿಡಿಯೋ ಕ್ರಿಯೇಟ್ ಮಾಡಿದವರಲ್ಲ. ಹಾಗಾಗಿ ಇವರನ್ನು ಸದ್ಯಕ್ಕೆ ಬಿಟ್ಟು ಕಳಿಸಲಾಗಿದೆ. ಡೀಪ್ಫೇಕ್ ವಿಡಿಯೋ ಕ್ರಿಯೇಟ್ ಮಾಡಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ಫೇಕ್ ವಿಡಿಯೋ (Deepfake Video) ವೈರಲ್ ಆದ ಬಳಿಕ ಅನೇಕ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ರೀತಿ ಮಾಡಿದ ಕಿಡಿಗೇಡಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಕಲಿ ಐಡೆಂಟಿಟಿ ಮತ್ತು ವಿಪಿಎನ್ ಬಳಸಿಕೊಂಡು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಸದ್ಯ ಇದರ ತನಿಖೆ ನಡೆಯುತ್ತಿದ್ದು, ಇನ್ನೂ ಹಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಈ ನಾಲ್ವರು ಶಂಕಿತರು ಕೇವಲ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆದರೆ ಇವರು ಡೀಪ್ಫೇಕ್ ವಿಡಿಯೋ ಕ್ರಿಯೇಟ್ ಮಾಡಿದವರಲ್ಲ. ಹಾಗಾಗಿ ಇವರನ್ನು ಸದ್ಯಕ್ಕೆ ಬಿಟ್ಟು ಕಳಿಸಲಾಗಿದೆ. ಡೀಪ್ಫೇಕ್ ವಿಡಿಯೋ ಕ್ರಿಯೇಟ್ ಮಾಡಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆದಷ್ಟು ಬೇಗ ಕಿಡಿಗೇಡಿಗಳು ಸಿಗಲಿ ಮತ್ತು ಅವರಿಗೆ ಸೂಕ್ತ ಶಿಕ್ಷೆ ಆಗಲಿ ಎಂದು ರಶ್ಮಿಕಾ ಮಂದಣ್ಣ ಅವರ ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಾತ್ರವಲ್ಲ, ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..
ಏನಿದು ಪ್ರಕರಣ?
ಜರಾ ಪಟೇಲ್ ಎಂಬ ಯುವತಿಯು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಹಾಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಎಡಿಟ್ ಮಾಡಿ ವಿಡಿಯೋ ಹರಿಬಿಡಲಾಗಿತ್ತು. ಅದನ್ನು ನೋಡಿದ ಅನೇಕರು ಇದು ನಿಜಕ್ಕೂ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಎಂದು ಭಾವಿಸಿದ್ದರು. ಸರಿಯಾಗಿ ಬಟ್ಟೆ ಹಾಕಿಕೊಳ್ಳಲು ಬರುವುದಿಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದರು. ನಂತರ ಇದು ಡೀಪ್ಫೇಕ್ ಎಂಬುದು ಗೊತ್ತಾಯಿತು.
ಇದನ್ನೂ ಓದಿ: Deepfake: ರಶ್ಮಿಕಾ ಮಂದಣ್ಣ, ಕಾಜೋಲ್ ಬಳಿಕ ನಟಿ ಆಲಿಯಾ ಭಟ್ಗೆ ಶುರುವಾಯ್ತು ಡೀಪ್ಫೇಕ್ ಕಾಟ
ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಇನ್ನೂ ಅನೇಕ ನಟಿಯರಿಗೆ ಡೀಪ್ಫೇಕ್ ಕಾಟ ಎದುರಾಗಿದೆ. ಕಾಜೋಲ್, ಆಲಿಯಾ ಭಟ್ ಮುಂತಾದವರ ಡೀಪ್ಫೇಕ್ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ವಿಜಯ್ ದೇವರಕೊಂಡ, ಅಮಿತಾಭ್ ಬಚ್ಚನ್ ಮುಂತಾದ ನಟರು ಈ ಬಗ್ಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಈ ರೀತಿ ಡೀಪ್ಫೇಕ್ ಮಾಡುವುದರಿಂದ ಮಹಿಳೆಯರಿಗೆ ತೊಂದರೆ ಆಗಲಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:22 am, Wed, 20 December 23