ರಶ್ಮಿಕಾ ಮಂದಣ್ಣರ ಡೀಪ್​ಫೇಕ್ ರೀತಿ ಲೋನ್ ಆ್ಯಪ್​ಗಳಿಂದ ಸಾಮಾನ್ಯರಿಗೂ ನಕಲಿ ವಿಡಿಯೋಗಳ ಮೂಲಕ ಕಿರುಕುಳ: ಗಾಯಕಿ ಚಿನ್ಮಯಿ ಶ್ರೀಪಾದ ಕಳವಳ

Chinmayi Sripaada On DeepFake Video: ನಕಲಿ ಚಿತ್ರಗಳನ್ನು ಸೃಷ್ಟಿಸಿ ಸೆಲಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ಕಿರುಕುಳ ಕೊಡಲಾಗುತ್ತಿದೆ. ಸುಲಿಗೆ ಮಾಡಲು, ಬ್ಲ್ಯಾಕ್​ಮೇಲ್ ಮಾಡಲು ಮತ್ತು ಮಹಿಳೆಯರನ್ನು ರೇಪ್ ಮಾಡಲು ಎಐ ಟೆಕ್ನಾಲಜಿಯನ್ನು ಉಪಯೋಗಿಸುವ ಸಾಧ್ಯತೆ ಬಗ್ಗೆ ಗಾಯಕಿ ಚಿನ್ಮಯಿ ಭಯ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣರ ಡೀಪ್​ಫೇಕ್ ರೀತಿ ಲೋನ್ ಆ್ಯಪ್​ಗಳಿಂದ ಸಾಮಾನ್ಯರಿಗೂ ನಕಲಿ ವಿಡಿಯೋಗಳ ಮೂಲಕ ಕಿರುಕುಳ: ಗಾಯಕಿ ಚಿನ್ಮಯಿ ಶ್ರೀಪಾದ ಕಳವಳ
ಚಿನ್ಮಯಿ ಶ್ರೀಪಾದ
Follow us
|

Updated on: Nov 08, 2023 | 1:15 PM

ನವದೆಹಲಿ, ನವೆಂಬರ್ 8: ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಪ್ರಕರಣ (Rashmika Mandanna deepfake video) ಬಹಳ ಜನರನ್ನು ದಿಗ್ಮೂಢಗೊಳಿಸಿದೆ. ಆರ್ಟಿಫಿಶಿಯಲ್ ತಂತ್ರಜ್ಞಾನ ಬಳಸಿ ಡೀಪ್​ಫೇಕ್ ವಿಡಿಯೋಗಳನ್ನು ತಯಾರಿಸುವುದು ಅದೆಷ್ಟು ಸುಲಭವಾಗಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಬೇರೊಬ್ಬ ಮಹಿಳೆಯ ವಿಡಿಯೋದಲ್ಲಿ, ಆ ಮಹಿಳೆಯ ಮುಖಕ್ಕೆ ರಶ್ಮಿಕಾ ಮುಖವನ್ನು ಜೋಡಿಸಲಾಗಿದೆ ಅಷ್ಟೇ. ಈ ಡೀಪ್​ಫೇಕ್ ವಿಡಿಯೋವನ್ನು ನೋಡಿದ ಸಾಮಾನ್ಯರಿಗೆ ಯಾರಿಗಾದರೂ ಅದು ನಕಲಿ ಎಂದು ಗೊತ್ತಾಗದ ಮಟ್ಟಿಗೆ ಅದು ತಯಾರಾಗಿದೆ. ಈ ಪ್ರಕರಣದಲ್ಲಿ ಅಮಿತಾಭ್ ಬಚ್ಚನ್ ಸೇರಿದಂತೆ ಬಹಳಷ್ಟು ಸೆಲಬ್ರಿಟಿಗಳು ಕನ್ನಡತಿ ರಶ್ಮಿಕಾಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಗಾಯಕಿ ಚಿನ್ಮಯಿ ಶ್ರೀಪಾದ (Singer Chinmayi Sripaada) ಅವರೂ ಕೂಡ ಈ ಪ್ರಕರಣದಲ್ಲಿ ಪ್ರತಿಕ್ರಿಯಿಸಿದ್ದು, ಎಐ ಟೆಕ್ನಾಲಜಿಯ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಆದರೆ, ಈ ರೀತಿಯ ನಕಲಿ ಚಿತ್ರಗಳನ್ನು ಸೃಷ್ಟಿಸಿ ಸೆಲಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ಕಿರುಕುಳ ಕೊಡಲಾಗುತ್ತಿದೆ. ಸುಲಿಗೆ ಮಾಡಲು, ಬ್ಲ್ಯಾಕ್​ಮೇಲ್ ಮಾಡಲು ಮತ್ತು ಮಹಿಳೆಯರನ್ನು ರೇಪ್ ಮಾಡಲು ಎಐ ಟೆಕ್ನಾಲಜಿಯನ್ನು ಉಪಯೋಗಿಸುವ ಸಾಧ್ಯತೆ ಬಗ್ಗೆ ಗಾಯಕಿ ಚಿನ್ಮಯಿ ಭಯ ವ್ಯಕ್ತಪಡಿಸಿದ್ದಾರೆ.

ಲೋನ್ ಆ್ಯಪ್​​ಗಳಿಂದ ಹಣ ಪಡೆದ ಮಹಿಳೆಯರ ಫೋಟೋಗಳನ್ನು ಪೋರ್ನ್ ಫೋಟೋಗಳಿಗೆ ಜೋಡಿಸಿ ಬ್ಲ್ಯಾಕ್​ಮೇಲ್ ಮಾಡಲಾಗುತ್ತಿದೆ. ಹಣ ವಸೂಲಿ ಮಾಡಲಾಗುತ್ತಿದೆ ಎಂದೂ ಚಿನ್ಮಯಿ ಶ್ರೀಪಾದ ಆರೋಪಿಸಿದ್ದಾರೆ.

ಇದನ್ನೂ ಓದಿ: Rashmika Mandanna: ಡೀಪ್‌ಫೇಕ್ ವಿಡಿಯೋ ಹೇಗೆ ಸೃಷ್ಟಿಯಾಗುತ್ತದೆ? ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಹೇಗೆ ಮಾಡಿದ್ರು?

‘ಹುಡುಗಿಯರನ್ನು ಸುಲಿಗೆ ಮಾಡಲು, ಬ್ಲ್ಯಾಕ್​ಮೇಲ್ ಮಾಡಲು ಮತ್ತು ರೇಪ್ ಮಾಡಲು ಅವರಿಗೆ ಡೀಪ್ ಫೇಕ್ ಒಂದು ಅಸ್ತ್ರವಾಗಲಿದೆ. ಈ ಹುಡುಗಿಯರ ಕುಟುಂಬಗಳು ಸಣ್ಣ ಗ್ರಾಮವೋ, ಪಟ್ಟಣದವರೋ ಆಗಿದ್ದರೆ ಅವರಿಗೆ ಗೌರವದ ವಿಚಾರವಾದ್ದರಿಂದ ಅದು ನಕಲಿ ವಿಡಿಯೋವಾ ಅಲ್ಲವಾ ಎಂಬುದು ಗಮನಿಸುವುದಿಲ್ಲ,’ ಎಂದು ಚಿನ್ಮಯಿ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಾಕಿದ್ದಾರೆ.

‘ತರಬೇತಿ ಪಡೆಯದ ಜನರಿಗೆ ಡೀಪ್ ಫೇಕ್ ವಿಡಿಯೋವನ್ನು ಗುರುತಿಸುವುದು ಕಷ್ಟ. ಇಂಥ ಡೀಪ್​ಫೇಕ್ ಚಿತ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತದೆ ಎಂದು ಆಶಿಸಿದ್ದೇನೆ. ಇಂಥ ಪ್ರಕರಣ ಎದುರಾದರೆ ಜನರು ತಾವೇ ಕ್ರಮ ಕೈಗೊಳ್ಳುವ ಬದಲು ಕಾನೂನಿನ ಗಮನಕ್ಕೆ ತರಬೇಕು,’ ಎಂದು ಚಿನ್ಮಯಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Rashmika Mandanna: ‘ಶಾಲೆಯಲ್ಲಿದ್ದಾಗ ಹೀಗೆ ಆಗಿದ್ದರೆ ಏನು ಮಾಡುತ್ತಿದ್ದೆನೋ ಗೊತ್ತಿಲ್ಲ’: ನಕಲಿ ವಿಡಿಯೋ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

ಅಂದಹಾಗೆ, ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋದ ಮೂಲ ವಿಡಿಯೋ ಝಾರಾ ಪಟೇಲ್ ಎಂಬ ಬ್ರಿಟಿಷ್ ಭಾರತೀಯೆಯದ್ದಾಗಿತ್ತು. ಎಲಿವೇಟರ್​ನೊಳಗೆ ಝಾರಾ ಮುಗುಳ್ನಗುತ್ತಾ ಪ್ರವೇಶಿಸಿದ ವಿಡಿಯೋ ಅದಾಗಿತ್ತು. ಅದರಲ್ಲಿ ಝಾರಾ ಪಟೇಲ್ ಮುಖಕ್ಕೆ ರಶ್ಮಿಕಾಳ ಮುಖ ಸೇರಿಸಲಾಗಿತ್ತು. ಆರಂಭದ ಒಂದು ಸೆಕೆಂಡ್​ನ ದೃಶ್ಯದಲ್ಲಿ ಝಾರಾ ಮುಖ ಇದ್ದದ್ದು ರಶ್ಮಿಕಾ ಮುಖವಾಗಿ ಬದಲಾಗಿದ್ದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಾಣಬಹುದು. ಸಾಮಾನ್ಯ ಸಂದರ್ಭದಲ್ಲಿ ಇದು ರಶ್ಮಿಕಾ ಮಂದಣ್ಣರದ್ದೇ ಎಂದು ಖಚಿತವಾಗಿ ಎಲ್ಲರೂ ಭಾವಿಸುವಷ್ಟು ಕರಾರುವಾಕ್ಕಾಗಿದೆ ಈ ವಿಡಿಯೋ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ