ಮೂಕ ರೋದನೆ: ಮನೆ ಮಾಲೀಕನ ಸಾವು.. ಮೃತದೇಹದ ಮುಂದೆ ಹಸುವಿನ ಆಕ್ರಂದನ
Konaseema: ಸಮಾಜದಲ್ಲಿ ರಕ್ತ ಸಂಬಂಧಿಗಳ ಮೇಲೆಯೇ ಪ್ರೀತಿ ಇರೋಲ್ಲ. ಆಸ್ತಿಗಾಗಿ ಒಬ್ಬರನ್ನೊಬ್ಬರು ಕೊಲ್ಲುವ ಪರಿಸ್ಥಿತಿ ಇದೆ. ಆದರೆ ಮೂಕಪ್ರಾಣಿ ತನ್ನ ಮಾಲೀಕರ ಮೇಲೆ ತೋರಿದ ಪ್ರೀತಿಯನ್ನು ಸ್ಥಳೀಯರು ಶ್ಲಾಘಿಸುತ್ತಾರೆ. ಹಸು.. ಚಿಕ್ಕಂದಿನಿಂದಲೂ ಸತ್ಯನಾರಾಯಣ ಮೂರ್ತಿ ಅವರ ಮಗುವಿನಂತೆ ಬೆಳೆದಿದೆ.. ಅದಕ್ಕೇ ಇಷ್ಟೊಂದು ನರಳುತಿತ್ತು ಎನ್ನುತ್ತಾರೆ ಸ್ಥಳೀಯರು.
ಅದು ಮನುಷ್ಯನಿಗಷ್ಟೇ ಅರ್ಥ ಆಗುವಂತಹುದಲ್ಲ. ಪ್ರೀತಿ ತೋರಿದರೆ… ಇತರ ಜೀವಿಗಳೂ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತವೆ. ಸಾಕುಪ್ರಾಣಿಗಳು, ಹಸುಗಳು ಮತ್ತು ಇತರ ಜೀವಿಗಳು ತಮ್ಮ ಪ್ರೀತಿಯ ಮಾಲೀಕರ ಬಗ್ಗೆ ಅದೇ ಪ್ರೀತಿಯನ್ನು ತೋರಿಸುತ್ತವೆ. ಇತ್ತೀಚೆಗಷ್ಟೇ ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮೆ ಜಿಲ್ಲೆಯಲ್ಲಿ ( Dr Br Ambedkar Konaseema District) ಗೋವಿನ ಮೂಕ ವೇದನೆ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಸಖಿನೇಟಿಪಲ್ಲಿ ಮಂಡಲದ ಮೋರಿ ಗ್ರಾಮದ ಪೋತುರಾಜು ಸತ್ಯನಾರಾಯಣಮೂರ್ತಿ ಎಂಬ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆ ವೇಳೆ ಜಮೀನಿನಿಂದ ಬಂದ ಹಸು (Cow) ಮಾಲೀಕ ಸತ್ಯನಾರಾಯಣ ಮೂರ್ತಿ ಅವರ ಮೃತದೇಹದ (Dead Body) ಬಳಿ ಬಂದು ಅಳಲು ತೋಡಿಕೊಂಡಿದೆ. ಅರ್ಧ ಗಂಟೆ ಕಾಲ ಮಾಲೀಕರ ಶವದ ಬಳಿ ಜೋರಾಗಿ ಕಿರುಚಿಕೊಂಡು ದುಃಖಪಟ್ಟಿದೆ. ಇದನ್ನೆ ಕಂಡು ಕುಟುಂಬಸ್ಥರು ಹಾಗೂ ಸಂಬಂಧಿಕರ ಕಣ್ಣೀರು ಮತ್ತಷ್ಟು ಹೆಚ್ಚಾಗಿದೆ.
ಇಂದಿನ ಸಮಾಜದಲ್ಲಿ ರಕ್ತ ಸಂಬಂಧಿಗಳ ಮೇಲೆಯೇ ಪ್ರೀತಿ ಇರೋಲ್ಲ. ಆಸ್ತಿಗಾಗಿ ಒಬ್ಬರನ್ನೊಬ್ಬರು ಕೊಲ್ಲುವ ಪರಿಸ್ಥಿತಿ ಇದೆ. ಆದರೆ ಇಂತಹ ಮೂಕಪ್ರಾಣಿ ತನ್ನ ಮಾಲೀಕರ ಮೇಲೆ ತೋರಿದ ಪ್ರೀತಿಯನ್ನು ಸ್ಥಳೀಯರು ಶ್ಲಾಘಿಸುತ್ತಾರೆ. ಹಸು.. ಚಿಕ್ಕಂದಿನಿಂದಲೂ ಸತ್ಯನಾರಾಯಣ ಮೂರ್ತಿ ಅವರ ಕಿರಿಯ ಮಗುವಿನಂತೆ ಬೆಳೆದಿದೆ.. ಅದಕ್ಕೇ ಇಷ್ಟೊಂದು ನರಳುತಿತ್ತು ಎನ್ನುತ್ತಾರೆ ಸ್ಥಳೀಯರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ