Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಳಿದ ಜೆಡಿಎಸ್ ಶಾಸಕರೊಂದಿಗೆ ಹಾಸನ ಹೋಗದಿರುವುದಕ್ಕೆ ಶರಣಗೌಡ ಕಂದ್ಕೂರ್ ಸಮಂಜಸ ಉತ್ತರ ನೀಡಲಿಲ್ಲ!

ಉಳಿದ ಜೆಡಿಎಸ್ ಶಾಸಕರೊಂದಿಗೆ ಹಾಸನ ಹೋಗದಿರುವುದಕ್ಕೆ ಶರಣಗೌಡ ಕಂದ್ಕೂರ್ ಸಮಂಜಸ ಉತ್ತರ ನೀಡಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 08, 2023 | 2:22 PM

ಕಾಂಗ್ರೆಸ್ ಸೇರಲಿದ್ದೀರಾ ಅಂತ ಕೇಳಿದರೆ, ಅವರಲ್ಲೇ 135 ಜನ ಶಾಸಕರಿದ್ದಾರೆಮ ತನ್ನೊಬ್ಬನನ್ನು ಕಟ್ಟಿಕೊಂಡು ಅವರಿಗೇನಾಗಬೇಕಿದೆ ಅನ್ನುತ್ತಾರೆ. ಡಿಕೆ ಶಿವಕುಮಾರ್ ತನ್ನನ್ನು ಈ ಕಾರಣಕ್ಕಾಗಿ ಸಂಪರ್ಕಿಸಿಲ್ಲ ಎಂದು ಹೇಳುವ ಅವರು ಒಬ್ಬ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದುಂಟು ಎನ್ನುತ್ತಾರೆ.

ಬೆಂಗಳೂರು: ಜೆಡಿಎಸ್ ಪಕ್ಷದ ಗುರುಮಠಕಲ್ ಶಾಸಕ ಶರಣಗೌಡ ಕಂದ್ಕೂರ್ (Gurmitkal MLA Sharanagouda Kandkur) ವಿಧಾನ ಸಭೆಗೆ ಆಯ್ಕೆ ಆದ ದಿನದಿಂದ ರೆಬೆಲ್ ನಂತೆ ವರ್ತಿಸುತ್ತಿರೋದನ್ನು ಕನ್ನಡಿಗರು ನೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ (Congress party) ಸೇರಲು ಅಣಿಯಾಗಿದ್ದ 9 ಜೆಡಿಎಸ್ ಶಾಸಕರ ಪಟ್ಟಿಯಲ್ಲಿ ಶರಣಗೌಡ ಹೆಸರು ಸಹ ಇತ್ತು ಅದರೆ ಕಾಂಗ್ರೆಸ್ ನಾಯಕರು ಅಧಿಕಾರದ ಆಸೆಯಿಟ್ಟುಕೊಳ್ಳದೆ ಬರೋದಾದರೆ ಸ್ವಾಗತ ಅಂತ ಹೇಳಿದಾಗ ಅವರೆಲ್ಲ ಹಿಂದೆ ಸರಿದಿದ್ದರು. ಇವತ್ತು ಸಹ ಶರಣಗಗೌಡ ತಮ್ಮ ರೆಬೆಲ್ ಪ್ರವೃತ್ತಿ ಪ್ರದರ್ಶಿಸಿ ತನ್ನೊಂದಿಗೆ ಆಯ್ಕೆಯಾದ ಉಳಿದ 18 ಶಾಸಕರು ಪಕ್ಷದ ಅಧ್ಯಕ್ಷ ಕುಮಾರಸ್ವಾಮಿಯೊಂದಿಗೆ ಹಾಸನದಲ್ಲಿದ್ದರೆ ಇವರು ಬೆಂಗಳೂರಲ್ಲಿ ಉಳಿದಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಅವರನ್ನು ಸಂಪರ್ಕಿಸಿದಾಗ ಹಾಸನ ಹೋಗದಿರುವುದಕ್ಕೆ ಸೂಕ್ತ ಕಾರಣ ನೀಡಲಿಲ್ಲ. ಕಾಂಗ್ರೆಸ್ ಸೇರಲಿದ್ದೀರಾ ಅಂತ ಕೇಳಿದರೆ, ಅವರಲ್ಲೇ 135 ಜನ ಶಾಸಕರಿದ್ದಾರೆಮ ತನ್ನೊಬ್ಬನನ್ನು ಕಟ್ಟಿಕೊಂಡು ಅವರಿಗೇನಾಗಬೇಕಿದೆ ಅನ್ನುತ್ತಾರೆ. ಡಿಕೆ ಶಿವಕುಮಾರ್ (DK Shivakumar) ತನ್ನನ್ನು ಈ ಕಾರಣಕ್ಕಾಗಿ ಸಂಪರ್ಕಿಸಿಲ್ಲ ಎಂದು ಹೇಳುವ ಅವರು ಒಬ್ಬ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದುಂಟು ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 08, 2023 02:18 PM