ಗೆಳೆಯನೊಬ್ಬ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವನೆಂದು ತುಮಕೂರಿನ ವಿಚ್ಛೇದಿತೆಯ ಆರೋಪ
2020 ರಲ್ಲಿ ವಿಚ್ಚೇದನ ಪಡೆದ ನಂತರ ದೂರದ ಸಂಬಂಧಿಕನೂ ಆಗಿರುವ ಗಜೇಂದ್ರನೊಂದಿಗೆ ಲಿವ್ ಇನ್ ಸಂಬಂಧ ಹೊಂದಿದ್ದಳಂತೆ ಮತ್ತು ಅವನು ಯಾವುದರೂ ನೆಪವೊಡ್ಡಿ ಮದುವೆ ಮಾಡಿಕೊಳ್ಳುವ ಮಾತನ್ನು ಮುಂದೂಡುತ್ತಿದ್ದನಂತೆ. ಕೊನೆಗೊಮ್ಮೆ ಯುವತಿ ಪೊಲೀಸ್ ಠಾಣೆಯೊಂದರಲ್ಲಿ ಮದುವೆಯಾಗುವ ಮುಚ್ಚಳಿಕೆ ಬರೆಸಿಕೊಂಡಿದ್ದಾಳೆ.
ತುಮಕೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಿರುವ ಯುವತಿ ತನ್ನ ಬಾಲ್ಯದ ಗೆಳೆಯನೊಬ್ಬನಿಂದ ಮೋಸ ಹೋಗಿರುವುದಾಗಿ ಹೇಳುತ್ತಿದ್ದಾಳೆ. ಈಕೆ ಚಿಕ್ಕನಾಯಕನಹಳ್ಳಿಯ (Chikkanayakanahalli) ತಿಮ್ಮನಹಳ್ಳು ಗ್ರಾಮದವಳು, ಮೋಸ ಮಾಡಿರುವನೆಂದು ಆರೋಪಿಸುತ್ತಿರುವ ಯುವಕನ ಹೆಸರು ಗಜೇಂದ್ರ (Gajendra) ಮತ್ತು ಅವನು ಅದೇ ತಾಲ್ಲೂಕಿನ ರಾಮನಹಳ್ಳಿ ಗ್ರಾಮದವನು. ವಿಚ್ಛೇದಿತೆಯಾಗಿರುವ ಯುವತಿ ಗಂಡನೊಂದಿಗೆ ಒಂದು ದಿನವೂ ಸಂಸಾರ ನಡೆಸದೆ ಮದುವೆಯಾದ ಕೇವಲ ಒಂದು ವಾರದ ಬಳಿಕ ಡಿವೋರ್ಸ್ (divorce) ಪಡೆದುಕೊಂಡಿರುವುದಾಗಿ ಹೇಳುತ್ತಾಳೆ. 2020 ರಲ್ಲಿ ವಿಚ್ಚೇದನ ಪಡೆದ ನಂತರ ದೂರದ ಸಂಬಂಧಿಕನೂ ಆಗಿರುವ ಗಜೇಂದ್ರನೊಂದಿಗೆ ಲಿವ್ ಇನ್ ಸಂಬಂಧ ಹೊಂದಿದ್ದಳಂತೆ ಮತ್ತು ಅವನು ಯಾವುದರೂ ನೆಪವೊಡ್ಡಿ ಮದುವೆ ಮಾಡಿಕೊಳ್ಳುವ ಮಾತನ್ನು ಮುಂದೂಡುತ್ತಿದ್ದನಂತೆ. ಕೊನೆಗೊಮ್ಮೆ ಯುವತಿ ಪೊಲೀಸ್ ಠಾಣೆಯೊಂದರಲ್ಲಿ ಮದುವೆಯಾಗುವ ಮುಚ್ಚಳಿಕೆ ಬರೆಸಿಕೊಂಡಿದ್ದಾಳೆ. ರಿಜಿಸ್ಟರ್ ಮದುವೆ ಮಾಡಿಕೊಳ್ಳುವ ಅಂತ ಯುವತಿ ಗಜೇಂದ್ರನನ್ನು ತನ್ನ ಸೋದರ ಸಂಬಂಧಿಗಳೊಂದಿಗೆ ಕಾರಲ್ಲಿ ಬೆಂಗಳೂರಿಗೆ ಬಂದಾಗ ಗಜೇಂದ್ರ ನಗರದ ನೆಲಗದರನಹಳ್ಳಿ ಬಳಿ ಅವರನ್ನು ಬಿಟ್ಟು ಪರಾರಿಯಾಗಿದ್ದಾನೆ. ಯುವತಿ ನ್ಯಾಯ ಕೇಳುತ್ತಿದ್ದಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ