ಸ್ವತಃ ಆರೋಗ್ಯ ಸಚಿವರಿಂದಲೇ ಈ ಸೂಚನೆ ಹೊರಬೀಳುತ್ತಿದ್ದಂತೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಬೆಳಗಾವಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಆರೋಗ್ಯ ...
ಮೂಡಲಗಿ ಪಟ್ಟಣದ ಹಳ್ಳದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿಯವರು ವೆಂಕಟೇಶ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಅನ್ನು ಜಪ್ತಿ ಮಾಡಿದ್ದಾರೆ. ...
ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾರು ಎಸೆದರು? ಏಕೆ ಎಸೆದರು ಎನ್ನುವುದು ಇನ್ನೂ ನಿಗೂಢವಾಗಿದೆ. ಶಿಶುಗಳ ಮೃತದೇಹ ಕಂಡು ಹೌಹಾರಿದ ಮೂಡಲಗಿಯ ಜನ ಪೊಲೀಸರಿಗೆ ತಿಳಿಸಿದ್ದಾರೆ. ...
ಗ್ರಾಮದ ಹಿರಿಯ ಜೀವ ದ್ಯಾಮಜ್ಜಿ ಸಾವನ್ನಪ್ಪಿದ್ದರು. ಏಳು ದಶಕಗಳ ಕಾಲ ಗ್ರಾಮಕ್ಕೆ ಆದರ್ಶವಾಗಿ ಬದುಕಿದ್ದ ದ್ಯಾಮಜ್ಜಿ ಸಾವನ್ನಪ್ಪಿದಾಗ ಶವ ತೆಗೆದುಕೊಂಡು ಹೋಗಲು ರಸ್ತೆ ಇಲ್ಲದ ಸ್ಥಿತಿ ಇದ್ದರಿಂದ ದಾರಿಗಾಗಿ ಗ್ರಾಮಸ್ಥರೆಲ್ಲಾ ಸೇರಿ ಶವ ರಸ್ತೆಯಲ್ಲಿ ...
ನೀರಿನಲ್ಲಿ ಕೊಚ್ಚಿ ಹೋಗಿರುವ ಮಿಥುನ್ ಸಾಗರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದ ನಿವಾಸಿ. ಮಿಥುನ್ ಸಾವಿನ ಸುದ್ದಿಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ...
ಘಟನೆಯಲ್ಲಿ ಸುಮಾರು 27 ಜನರು ಸಜೀವ ದಹನವಾಗಿದ್ದಾರೆ. ಕಟ್ಟಡದಲ್ಲಿ ಸೂಕ್ತ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಅಗ್ನಿಶಾಮಕ ಇಲಾಖೆಯಿಂದ ಕಟ್ಟಡಕ್ಕೆ ಎನ್ಒಸಿ ಪಡೆದಿರಲಿಲ್ಲ. ...
ಕರ್ನಾಟಕ ಪೊಲೀಸ್ ಅಂದರೆ ಇಡೀ ದೇಶವೇ ನಮ್ಮತ್ತ ತಿರುಗಿ ನೋಡುತ್ತದೆ. ಅಂತಹ ಛಾತಿ, ದಕ್ಷತೆ, ಕಾರ್ಯತತ್ಪರತೆ ನಮ್ಮ ಪೊಲೀಸರಲ್ಲಿ ತುಂಬಿತುಳುಕುತ್ತದೆ. ಆದರೆ ಇತ್ತೀಚೆಗೆ ಅನ್ಯ ಕಾರಣಗಳಿಗಾಗಿ ನಮ್ಮ ಕರ್ನಾಟಕ ಪೊಲೀಸರ ಈ ವರ್ಚಸ್ಸಿಗೆ ಪೆಟ್ಟು ...
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ-ಕಾಡಾನೆ ನಡುವಿನ ಸಂಘರ್ಷ ಮುಂದುವರೆದಿದ್ದು, ಕಾಡಾನೆ ತುಳಿತಕ್ಕೆ ಕಾರ್ಮಿಕ ಬಲಿಯಾಗಿರುವಂತಹ ಘಟನೆ ಜಿಲ್ಲೆ, ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್ನಲ್ಲಿ ನಡೆದಿದೆ. ...
ಅಕ್ರಮವಾಗಿ ದನದ ಮಾಂಸ ಸಾಗಿಸ್ತಿದ್ದ ಹಿನ್ನಲೆ. ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ಬೊಲೆರೊ ಹಾಗೂ ಮೂವರು ಆರೋಪಿಗಳನ್ನು ಹಿಡಿಯಲಾಗಿದೆ. ಸ್ಥಳಿಯ ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ...
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಉ.ಕ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಶಿವಾನಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ...