Dead Body: ಸಿದ್ದರಾಮಯ್ಯ ಬೇಗ ಸಾಯಬಾರದು ಎಂದು ಬಯಸಿದ ಕೆ.ಎಸ್. ಈಶ್ವರಪ್ಪ, ಸಿದ್ದು ಇತಿಹಾಸ ಬಿಚ್ಚಿಟ್ಟಿದ್ದು ಹೀಗೆ!

Dead Body: ಸಿದ್ದರಾಮಯ್ಯ ಬೇಗ ಸಾಯಬಾರದು ಎಂದು ಬಯಸಿದ ಕೆ.ಎಸ್. ಈಶ್ವರಪ್ಪ, ಸಿದ್ದು ಇತಿಹಾಸ ಬಿಚ್ಚಿಟ್ಟಿದ್ದು ಹೀಗೆ!

ಸಾಧು ಶ್ರೀನಾಥ್​
|

Updated on:Sep 12, 2023 | 3:20 PM

Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಹೆಣ ಕೂಡ ಕೋಮುವಾದಿ ಬಿಜೆಪಿಗೆ ಹೋಗೋಲ್ಲ ಎಂದು ಹೇಳಿದ್ದೇ ತಡ ನಾನಾ ರಾಜಕೀಯ ಧುರೀಣರು ನಾನಾ ವ್ಯಾಖ್ಯಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜೀವಂತವಾಗಿ ಬಂದರೂ ಬಿಜೆಪಿಗೆ ಸೇರಿಸಿಕೊಳ್ಳಲ್ಲವೆಂದು ಬಿಜೆಪಿ ಶಾಸಕ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸಿದ್ದರಾಮಯ್ಯ ಸಾಯೋದು ಬೇಡ ಎಂದು ಬಯಸಿದ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯ ಇತಿಹಾಸವೊಂದನ್ನು ಬಿಚ್ಚಿಟ್ಟಿದ್ದಾರೆ.

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನನ್ನ ಹೆಣ (Dead Body) ಕೂಡ ಕೋಮುವಾದಿ ಬಿಜೆಪಿಗೆ ಹೋಗೋಲ್ಲ ಎಂದು ಹೇಳಿದ್ದೇ ತಡ ರಾಜ್ಯದ ಮಟ್ಟಿಗೆ ನಾನಾ ರಾಜಕೀಯ ಧುರೀಣರು ನಾನಾ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜೀವಂತವಾಗಿ ಬಂದರೂ ಬಿಜೆಪಿಗೆ ಸೇರಿಸಿಕೊಳ್ಳಲ್ಲವೆಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ (BJP) ಶಾಸಕ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸಿದ್ದರಾಮಯ್ಯ ಸಾಯೋದು ಬೇಡ ಎಂದು ಬಯಸಿದ ಬಿಜೆಪಿ ಮತ್ತೊಬ್ಬ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರು ಸಿದ್ದರಾಮಯ್ಯ ಇತಿಹಾಸವೊಂದನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿ ಬೆಂಬಲದಿಂದಲೇ ಸಿದ್ರಾಮಯ್ಯ ತಮ್ಮ ಮೊದಲ ಸರ್ಕಾರಿ ಕಾರು ಹತ್ತಿದ್ದು ಎಂದು ಮೆಲುಕು ಹಾಕಿದ್ದಾರೆ. ಬನ್ನೀ KS Eshwarappa ಇನ್ನೂ ಎನು ಹೇಳಿದ್ದಾರೆ ಈ ವಿಡಿಯೋದಲ್ಲಿ ನೋಡೋಣಾ…

ಕಾಂಗ್ರೆಸ್ ಪಕ್ಷ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಅಂದಿನ ಜನತಾ ಪರಿವಾರದ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿದ್ದರು. ಅವರ ಅವಧಿಯಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದರು. ಮೊದಲ ಬಾರಿ ಸರ್ಕಾರಿ ಗೂಟದ ಕಾರು ಹತ್ತಿದ್ದು ಇದೇ ಬಿಜೆಪಿಯಿಂದಾಗಿ ಎಂಬುದು ಸಿದ್ದರಾಮಯ್ಯಗೆ ನೆನಪಿರಲಿ. ಆಗ ಬಿಜೆಪಿ ಇವರಿಗೆ ಕೋಮುವಾದಿ ಆಗಿರಲಿಲ್ಲವೋ ಎಂದು ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 12, 2023 03:19 PM