ಸುಳ್ಳು ಪ್ರಕರಣದಲ್ಲಿ ಸುಧಾಕರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ: ಡಿಕೆ ಶಿವಕುಮಾರ್
ವಿಷಯವನ್ನು ಪತ್ರಿಕಾ ಮಾಧ್ಯಮದಲ್ಲಿ ನೋಡಿದಾಗ ತನಗೆ ಗಾಬರಿಯಾಗಿತ್ತು, ಅಧಿಕಾರಿಗಳ ಜೊತೆ ಮಾತಾಡಿದ ಬಳಿಕ ಸುಧಾಕರ್ ಅವರನ್ನೂ ಕರೆಸಿಕೊಂಡು ಮಾತಾಡಿದ್ದೇನೆ ಮತ್ತು ಸಚಿವರ ವಿರುದ್ಧ ಎಫ್ ಐ ಆರ್ ದಾಖಲಾದಾಗ ಅವರು ಚಿತ್ರದುರ್ಗದಲ್ಲೇ ಇದ್ದರು ಮತ್ತು ಜಮೀನಿಗೆ ಸಂಬಂಧಿಸಿದ ದಾಖಲಾತಿಗಳ ಪ್ರತಿಗಳನ್ನು ತನಗೆ ನೀಡಿರುವರೆಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಸಚಿವ ಡಿ ಸುಧಾಕರ್ (D Sudhakar) ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದು, ಸುಧಾಕರ್ ರಾಜೀನಾಮೆ (resignation) ಸಲ್ಲಿಸುವ ಪ್ರಶ್ನೆಯೇ ಉದ್ಭವಿಸೋದಿಲ್ಲ ಅಂತ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ್ ಸುಧಾಕರ್ ರಾಜೀನಾಮೆಗಾಗಿ ಆಗ್ರಹಿಸುತ್ತಿರುವ ಬಿಜೆಪಿ ನಾಯಕರ ಕನಸು ಈಡೇರದು, ಯಾಕೆಂದರೆ ತಾನು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿದ್ದು ಅವರು ಇದೊಂದು ಸುಳ್ಳು ಪ್ರಕರಣ ಅಂತ ಅವರು ಹೇಳಿದ್ದಾರೆ ಎಂದ ಶಿವಕುಮಾರ್ ಸುಳ್ಳು ಪ್ರಕರಣಗಳಿಗೆಲ್ಲ ರಾಜೀನಾಮೆ ಸಲ್ಲಿಸುತ್ತಾ ಹೋದರೆ, ನಾಳೆ ತಮ್ಮ ಮೇಲೂ ಸುಳ್ಳು ದೂರು ದಾಖಲಿಸಿ ರಾಜೀನಾಮೆ ಕೇಳುತ್ತಾರೆ ಎಂದರು. ವಿಷಯವನ್ನು ಪತ್ರಿಕಾ ಮಾಧ್ಯಮದಲ್ಲಿ ನೋಡಿದಾಗ ತನಗೆ ಗಾಬರಿಯಾಗಿತ್ತು, ಅಧಿಕಾರಿಗಳ ಜೊತೆ ಮಾತಾಡಿದ ಬಳಿಕ ಸುಧಾಕರ್ ಅವರನ್ನೂ ಕರೆಸಿಕೊಂಡು ಮಾತಾಡಿದ್ದೇನೆ ಮತ್ತು ಸಚಿವರ ವಿರುದ್ಧ ಎಫ್ ಐ ಆರ್ ದಾಖಲಾದಾಗ ಅವರು ಚಿತ್ರದುರ್ಗದಲ್ಲೇ ಇದ್ದರು ಮತ್ತು ಜಮೀನಿಗೆ ಸಂಬಂಧಿಸಿದ ದಾಖಲಾತಿಗಳ ಪ್ರತಿಗಳನ್ನು ತನಗೆ ನೀಡಿರುವರೆಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ