ಯಾರ ಮೇಲೂ ದೌರ್ಜನ್ಯ ನಡೆಸಿಲ್ಲ, ಎಫ್ ಐ ಆರ್ ಯಾಕೆ ದಾಖಲಾಗಿದೆ ಗೊತ್ತಿಲ್ಲ: ಡಿ ಸುಧಾಕರ್, ಸಚಿವ
ತಾನು ಜಮೀನು ಕಡೆ ಹೋಗಿ ತಿಂಗಳುಗಳು ಕಳೆದಿವೆ ಹಾಗೂ ದೂರು ಸಲ್ಲಿಸಿದ ಕುಟುಂಬವನ್ನು ಸಮಾರು 15 ವರ್ಷಗಳಿಂದ ಭೇಟಿಯಾಗಿಲ್ಲ ಎಂದು ಸುಧಾಕರ್ ಹೇಳಿದರು. ಯಾವ ಕಾರಣಕ್ಕೆ ಎಫ್ ಐ ಆರ್ ದಾಖಲಾಗಿದೆಯೋ ಗೊತ್ತಿಲ್ಲ, ಅದರೆ ನಾಡಿನ ಕಾನೂನು ವ್ಯವಸ್ಥೆ ಮೇಲೆ ತನಗೆ ಗೌರವವಿದೆ, ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah government) ಸಂಕಷ್ಟವೊಂದು ಎದುರಾಗಿದೆ. ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ (D Sudhakar) ವಿರುದ್ಧ ಜಾತಿ ನಿಂದನೆ, ಭೂ ಕಬಳಿಕೆ ಹಾಗೂ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣ ದಾಖಲಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಸಚಿವರನ್ನು ನಗರದಲ್ಲಿ ಮಾತಾಡಿಸಿದಾಗ ಅವರು ಎಲ್ಲ ಆರೋಪಗಳನ್ನು ಅಲ್ಲಗಳೆದರು. ತಾನು ಯಾರ ಮೇಲೂ ದೌರ್ಜನ್ಯ ನಡೆಸಿಲ್ಲ, ಜಾತಿ ನಿಂದನೆ ಮಾಡಿಲ್ಲ ಎಂದು ಹೇಳಿದ ಅವರು, ಈಗ ಪ್ರಶ್ನೆಯಲ್ಲಿರುವ ಜಮೀನು (land in question) ಒಂದು ಕಂಪನಿಗೆ ಸೇರಿದ್ದು ಮತ್ತು ತಾನು ಅದರ ನಿರ್ದೇಶಕರಲ್ಲಿ ಒಬ್ಬ ಎಂದು ಹೇಳಿದರು. ತಾನು ಜಮೀನು ಕಡೆ ಹೋಗಿ ತಿಂಗಳುಗಳು ಕಳೆದಿವೆ ಹಾಗೂ ದೂರು ಸಲ್ಲಿಸಿದ ಕುಟುಂಬವನ್ನು ಸಮಾರು 15 ವರ್ಷಗಳಿಂದ ಭೇಟಿಯಾಗಿಲ್ಲ ಎಂದು ಸುಧಾಕರ್ ಹೇಳಿದರು. ಯಾವ ಕಾರಣಕ್ಕೆ ಎಫ್ ಐ ಆರ್ ದಾಖಲಾಗಿದೆಯೋ ಗೊತ್ತಿಲ್ಲ, ಅದರೆ ನಾಡಿನ ಕಾನೂನು ವ್ಯವಸ್ಥೆ ಮೇಲೆ ತನಗೆ ಗೌರವವಿದೆ, ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ