ಬೀದರ್: ಸದಾ ಎದೆ ಮಟ್ಟದ ನೀರು, 300 ಅಡಿ ಉದ್ದದ ಗುಹೆಯಲ್ಲಿ ಹೋಗಿ ಉಗ್ರ ನರಸಿಂಹ ಸ್ವಾಮಿಯನ್ನು ನೋಡುವುದೆ ಚೆಂದ!

ಈ ಉಗ್ರ ನರಸಿಂಹ ದೇವಸ್ಥಾನದ ಇತಿಹಾಸ ನೋಡುವುದಾದರೆ ನರಸಿಂಹ ಝರಣಿ ಗುಹಾ ದೇವಾಲಯ ಕರ್ನಾಟಕದ ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. 600 ವರ್ಷ ಹಳೆಯದಾದ ನರಸಿಂಹ ದೇವಸ್ಥಾನ ಇಂದಿಗೂ ಭಕ್ತರನ್ನ ಸೆಳೆಯುತ್ತಿದೆ. ಈ ದೇವಸ್ಥಾನ ವಿಶೇಷತೆಯನ್ನ ನೋಡಿದರೆ ಎಂತಹವರಿಗೂ ಅಶ್ಚರ್ಯವಾಗದೇ ಇರದು ಅಂತಹ ಪವಾಡ ಇಲ್ಲಿ ನಡೆಯುತ್ತದೆ. ನರಸಿಂಹನ ದರ್ಶನ ಪಡೆಯಬೇಕೆಂದರೆ ಗುಹೆಯಲ್ಲಿ 200 ಮೀಟರ್ ಉದ್ದ, ಎದೆ ಎತ್ತರದ ನೀರಿನಲ್ಲಿ ಸಾಗಿ ದರ್ಶನ ಪಡೆಯಬೇಕು.

ಬೀದರ್: ಸದಾ ಎದೆ ಮಟ್ಟದ ನೀರು, 300 ಅಡಿ ಉದ್ದದ ಗುಹೆಯಲ್ಲಿ ಹೋಗಿ ಉಗ್ರ ನರಸಿಂಹ ಸ್ವಾಮಿಯನ್ನು ನೋಡುವುದೆ ಚೆಂದ!
| Updated By: ಸಾಧು ಶ್ರೀನಾಥ್​

Updated on: Sep 12, 2023 | 5:18 PM

ಇತಿಹಾಸ ಪ್ರಸಿದ್ಧ ಬೀದರ್ ನ ಉಗ್ರ ನರಸಿಂಹ ದೇವಸ್ಥಾನದಲ್ಲೀಗ ಎಲ್ಲಿ ನೋಡಿದರಲ್ಲಿ ಜನವೋ ಜನ. ವಿವಿಧ ರಾಜ್ಯಗಳಿಂದ ಸಾಗೋರಾಪಾದಿಯಲ್ಲಿ ಜನರು ಹರಿದು ಬರುತ್ತಿದ್ದು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ನರಸಿಂಹ ಜಯಂತಿ ಹಿನ್ನಲೆಯಲ್ಲಿ ಭಕ್ತರು ಉಗ್ರ ನರಸಿಂಹನ ದರ್ಶನ ಪಡೆದುಕೊಂಡು ಭಕ್ತರು ಪುನೀತರಾಗುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಕಡೆಯ ಸೋಮವಾರ ಹಿನ್ನೆಲೆ ನಿನ್ನೆ ಪುರಾತನ ಐತಿಹಾಸಿಕ ಉಗ್ರ ನರಸಿಂಹ ದೇವಸ್ಥಾನಕ್ಕೆ ಹರಿದು ಬಂದ ಭಕ್ತರ ದಂಡು…. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ದಿಂದ ಅಪಾರ ಪ್ರಮಾಣದಲ್ಲಿ ಬಂದಿರು ಭಕ್ತ ಸಾಗರ…. ಇನ್ನೂರು ಮೀಟರ್ ಎದೆ ಎತ್ತರ ನೀರಿನಲ್ಲಿ ಸಾಗಿ ದೇವರ ದರ್ಶನ ಪಡೆಯುವ ದೇಶದ ಏಕೈಕ ಉಗ್ರ ನರಸಿಂಹ ದೇವಸ್ಥಾನ. ಬೀದರ್ ನಗರದ ಹೊರವಲಯದಲ್ಲಿನ ಉಗ್ರ ನರಸಿಂಹ ‌ದೇವಸ್ಥಾನ… ಹೌದು ನರಸಿಂಹ, ಉಗ್ರ ನರಸಿಂಹ, ಸಿಂಹನ ಅವತಾರ ಪುರುಷ ಅಂತಾ ಕರೆಯಿಸಿಕೊಳ್ಳೋ ನರಸಿಂಹ ನೆಲೆಸಿರುವ ಈ ಪವಿತ್ರ ಪುಣ್ಯಸ್ಥಳ ಇರೋದು ಬೀದರ್ ನಲ್ಲಿ.

ಉಗ್ರನರಸಿಂಹ ದೇವಸ್ಥಾನ ಇರುವ ಈ ಸ್ಥಳವನ್ನ ನರಸಿಂಹ ಝರಣಿ ಅಂತಲೇ ಕರೆಯುತ್ತಾರೆ. ಬೀದರ್ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳ ಬಹುಮನಿ ಸುಲ್ತಾನರು ಈ ನೆಲವನ್ನ ಆಳಿ, ಶ್ರೀಮಂತ ಶಿಲ್ಪಕಲೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ಸ್ಥಳದಲ್ಲಿ ಉಗ್ರನರಸಿಂಹನ ದೇವಸ್ಥಾನ ಭಕ್ತರನ್ನ ಆಕರ್ಷಿಸುವ ಸ್ಥಳವಾಗಿದೆ. ಪ್ರತಿವರ್ಷವೂ ಕೂಡಾ ಶ್ರಾವಣ ಮಾಸದ ಕಡೆಯ ಸೋಮವಾರ, ಹಾಗೂ ನರಸಿಂಹ ಜಯಂತಿ ಸಮಯದಲ್ಲಿ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನವನ್ನ ಪಡೆದುಕೊಳ್ಳುತ್ತಾರೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ-ತೆಲಂಗಾಣ- ಮಹಾರಾಷ್ಟ್ರಗಳಿಂದ ಅಪಾರ ಪ್ರಮಾಣದ ಭಕ್ತರು, ನವ ವಧುವರರು ನರಸಿಂಹ ಝರಣಿಗೆ ಬಂದು ಪೂಜಿಸುವ ಸಂಪ್ರದಾಯವಿದೆ. ನೂರಾರು ವರ್ಷಗಳಿಂದಲೂ ಅಸಂಖ್ಯಾತ ಭಕ್ತರು ನರಸಿಂಹನನ್ನ ಪೂಜಿಸುತ್ತಿದ್ದಾರೆ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗದಿಂದ ಭಕ್ತರು ಆಗಮಿಸುವ ಪುಣ್ಯ ಸ್ಥಳವಾಗಿದೆ. ಇಲ್ಲಿ ನೆಲೆಸಿರುವ ಉಗ್ರನರಸಿಂಹನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನ ನೇರವೇರಿಸುವಂತೆ ದೇವರಲ್ಲಿ ಬೇಡಿಕೆಯನ್ನ ಭಕ್ತರು ಇಡುತ್ತಾರೆ. ಅವರ ಬೇಡಿಕೆಯನ್ನ ನರಸಿಂಹ ಸ್ವಾಮಿ ಈಡೇರಿಸಿದ್ದಾನೆಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಿದ್ದಾರೆ.

ಇನ್ನು ಈ ದೇವಸ್ಥಾನದ ಇತಿಹಾಸ ನೋಡುವುದಾದರೆ ನರಸಿಂಹ ಝರಣಿ ಗುಹಾ ದೇವಾಲಯ ಕರ್ನಾಟಕದ ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ಸರಿ ಸುಮಾರು ಆರು ನೂರು ವರ್ಷಗಳಷ್ಠು ಹಳೆದಾದ ನರಸಿಂಹ ದೇವಸ್ಥಾನ ಇಂದಿಗೂ ಭಕ್ತರನ್ನ ತನ್ನತ್ತ ಸೇಳೆಯುತ್ತಿದೆ. ಈ ದೇವಸ್ಥಾನ ವಿಶೇಷತೆಯನ್ನ ನೋಡಿದರೆ ಎಂತಹವರಿಗೂ ಅಶ್ಚರ್ಯವಾಗದೇ ಇರದು ಅಂತಹ ಫವಾಡ ಇಲ್ಲಿ ನಡೆಯುತ್ತದೆ. ನರಸಿಂಹನ ದರ್ಶನ ಪಡೆಯಬೇಕೆಂದರೆ ಗುಹೆಯಲ್ಲಿ ಸುಮಾರು ಇನ್ನೂರು ಮೀಟರ್ ಉದ್ದದ ಎದೆ ಎತ್ತರದ ನೀರಿನಲ್ಲಿ ಸಾಗಿ ದರ್ಶನ ಪಡೆಯಬೇಕು.

ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲಿ ಎಂದಿಗೂ ಇಲ್ಲಿನ ನೀರು ಬತ್ತಿದ್ದ ಉದಾಹರಣೆ ಇಲ್ಲ. ನರಸಿಂಹ ಝರಣಿ ಗುಹಾ ದೇವಾಲಯ ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಇನ್ನೂರು ಮೀಟರ್ ದೂರ ನಡೆದು ಹೋಗಿ ದೇವರ ದರ್ಶನ ಮಾಡಬೇಕು. ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಸಾಗುವುದು ಒಂದು ವಿಶಿಷ್ಟ ಅನುಭವ. ಗುಹೆಯ ಮಬ್ಬುಗತ್ತಲಿನಲ್ಲಿ ನೀರಿನಲ್ಲಿ ನಡೆದು ಹೋಗಲು ಮಾನಸಿಕ ಸಿದ್ಧತೆ ಇದ್ದರೆ ದರ್ಶನ ಸುಲಭ. ಗುಹೆಯೊಳಗಿನ ನೀರು ಯಾವುದೇ ಸಂದರ್ಭದಲ್ಲೂ ಎದೆಮಟ್ಟ ಮೀರುವುದಿಲ್ಲ. ಈ ನೀರಲ್ಲಿ ಎಷ್ಟು ಸಲ ಓಡಾಡಿದರೂ ಶೀತ ಆಗುವುದಿಲ್ಲ! ಈ ನೀರಿನಲ್ಲಿ ಗಂಧಕ (ಸಲ್ಫರ್)ದ ಅಂಶವಿದೆ. ನೀರು ಚಳಿಗಾಲದಲ್ಲೂ ಬೆಚ್ಚಗಿನ ಅನುಭವ ನೀಡುತ್ತದೆ. ಈ ನೀರಿನಲ್ಲಿ ನೆನೆದರೆ ಚರ್ಮದ ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ. ಇಂತಹ ಅಪರೂಪದ ದೇವಸ್ಥಾನಕ್ಕೆ ಶ್ರಾವಣ ಮಾಸ ಇರುವ ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇನ್ನೂ ಪ್ರತಿ ಶನಿವಾರ, ರವಿವಾರದಂತೂ ಕೂಡಾ ಹೆಚ್ಚಿನಬ ಸಂಖ್ಯೆಯಲ್ಲಿ ಭಕ್ತರು ಬಂದಿ ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆಂದು ಇಲ್ಲಿನ ಪ್ರಧಾನ ಅರ್ಚಕರಾದ ಮುರುಳಿಧರ್ ಹೇಳಿದ್ದು ವಿಡಿಯೋದಲ್ಲಿ ನೋಡಿ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ನರಸಿಂಹ ಸ್ವಾಮೀಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಇತಿಹಾಸ ಪ್ರಸಿದ್ದ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಇಂತಹ ಅಪರೂಪದ ದೇವಸ್ಥಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಮಾತ್ರ ಸೌಲಭ್ಯವನ್ನ ಮಾತ್ರ ಕಲ್ಪಿಸಲಾಗಿಲ್ಲ ಅನ್ನೋ ಕೊರಗು ಮಾತ್ರ ಭಕ್ತರನ್ನ ಕಾಡುತ್ತಿರುತ್ತದೆ. ಸದಾ ಎದೆ ಮಟ್ಟದ ನೀರು ಸುಮಾರು ಮೂರು ನೂರು ಅಡಿ ಉದ್ದದ ಗುಹೆಯಿಂದ ನೀರು ಹರಿದು ಬರೋದನ್ನ ನೋಡೋದೆ ಒಂದು ಸೊಗಸು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us