ಬಿಜೆಪಿ ಬೆಂಬಲಿತ ಸರ್ಕಾರದಿಂದ ಅಧಿಕಾರ ಅನುಭವಿಸುವಾಗ ಸಿದ್ದರಾಮಯ್ಯಗೆ ಅದೊಂದು ಕೋಮುವಾದಿ ಪಕ್ಷ ಅಂತ ಗೊತ್ತಿರಲಿಲ್ಲವೇ? ಕೆಎಸ್ ಈಶ್ವರಪ್ಪ

ಬಿಜೆಪಿ ಬೆಂಬಲಿತ ಸರ್ಕಾರದಿಂದ ಅಧಿಕಾರ ಅನುಭವಿಸುವಾಗ ಸಿದ್ದರಾಮಯ್ಯಗೆ ಅದೊಂದು ಕೋಮುವಾದಿ ಪಕ್ಷ ಅಂತ ಗೊತ್ತಿರಲಿಲ್ಲವೇ? ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 12, 2023 | 3:05 PM

ಅವರನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಮಾಡಿದಾಗ; ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಆಗಿನ ಜನತಾ ಪಕ್ಷದ ಸರ್ಕಾರಕ್ಕೆ ವಿಧಾನ ಸಬೆಯಲ್ಲಿ 19 ಶಾಸಕರ ಬಲ ಹೊಂದಿದ್ದ ಬಿಜೆಪಿ ಬೆಂಬಲ ನೀಡಿತ್ತು ಎಂದು ಈಶ್ವರಪ್ಪ ಹೇಳಿದರು. ಆಗ ಅವರಿಗೆ ಬಿಜೆಪಿ ಕೋಮುವಾದಿ ಪಕ್ಷ ಅಂತ ಗೊತ್ತಿರಲಿಲ್ಲವೇ? ಎಂದು ಈಶ್ವರಪ್ಪ ಕೇಳಿದರು.

ಶಿವಮೊಗ್ಗ: ನನ್ ಹೆಣಾನೂ ಬಿಜೆಪಿಗೆ ಹೋಗಲ್ಲ ಅಂತ ಹೇಳಿರುವ ಮುಖ್ಯಮಂತ್ತಿ ಸಿದ್ದರಾಮಯ್ಯರಿಗೆ (CM Siddaramaiah) ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ತೀಕ್ಷ್ನವಾದ ತಿರುಗೇಟು ನೀಡಿದ್ದಾರೆ. ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಳೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ಬೇಗ ಸಾಯಬಾರದು, ಇನ್ನೂ ಹತ್ತಾರು ವರ್ಷಗಳ ಕಾಲ ಅವರು ಹಿಂದುಳಿದ ವರ್ಗಗಳ (backward classes) ಸೇವೆ ಮಾಡಲಿ, ಅವರು ಬಿಜೆಪಿ ಸೇರೋದು ಬೇಡ, ಅವರ ಹೆಣ ಬಿಜೆಪಿ ಕಚೇರಿಗೆ ಬರೋದು ಸಹ ಬೇಡ ಎಂದು ಈಶ್ವರಪ್ಪ ಹೇಳಿದರು. ಆದರೆ, ಸಿದ್ದರಾಮಯ್ಯನವರಿಗೆ ಜಾಣ ಮರೆವು! ಅವರು ತಮ್ಮ ರಾಜಕೀಯ ಬದುಕಿನಲ್ಲಿ ಮೊದಲ ಬಾರಿಗೆ ಸರ್ಕಾರಿ ಕಾರೊಂದನ್ನು ಹತ್ತಿದ್ದು ಬಿಜೆಪಿ ಬೆಂಬಲಿತ ರಾಮಕೃಷ್ಣ ಹೆಗಡೆ ಅವರ ಸರ್ಕಾರದ ಕೃಪಾಕಟಾಕ್ಷದಿಂದ ಅನ್ನೋದನ್ನು ತಮ್ಮ ಅನುಕೂಲಕ್ಕಾಗಿ ಮರೆತಂತಿದೆ. ಅವರನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಮಾಡಿದಾಗ; ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಆಗಿನ ಜನತಾ ಪಕ್ಷದ ಸರ್ಕಾರಕ್ಕೆ ವಿಧಾನ ಸಬೆಯಲ್ಲಿ 19 ಶಾಸಕರ ಬಲ ಹೊಂದಿದ್ದ ಬಿಜೆಪಿ ಬೆಂಬಲ ನೀಡಿತ್ತು ಎಂದು ಈಶ್ವರಪ್ಪ ಹೇಳಿದರು. ಆಗ ಅವರಿಗೆ ಬಿಜೆಪಿ ಕೋಮುವಾದಿ ಪಕ್ಷ ಅಂತ ಗೊತ್ತಿರಲಿಲ್ಲವೇ? ಸಮಾಜಾವಾದಿ ಡೋಂಗಿನಲ್ಲಿ ಮಾಜಾವಾದಿಯಾಗಿ ಮೆರೆದ ರಾಜಕಾರಣಿ ಅವರು ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ