Video: ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್ಟಿಸಿ ಬಸ್ ಕದ್ದೊಯ್ದ! ಮಾರ್ಗ ಮಧ್ಯೆ ಡೀಸೆಲ್ ಖಾಲಿಯಾದಾಗ ಏನು ಮಾಡಿದ?
ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್ಟಿಸಿ ಬಸ್ ಕದ್ದೊಯ್ದ! ಕೆಲ ಪ್ರಯಾಣಿಕರು ಟಿಕೆಟ್ ಕೊಡುವಂತೆ ಬಸ್ ಚಾಲಕನನ್ನು ಕೇಳಿದಾಗ. ಕಳ್ಳ ರೂಪದ ಆ ಡ್ರೈವರ್ ಮಹಾಶಯ, ಕಂಡಕ್ಟರ್ ಮಾರ್ಗ ಮಧ್ಯೆ ಹತ್ತಿಕೊಳ್ಳುತ್ತಾನೆ, ಆಗ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ತಂಗಲ್ಲಪಲ್ಲಿ ಮಂಡಲದ ಸಾರಂಪೆಲ್ಲಿ ನೇರೆಲ್ಲ ಗ್ರಾಮದ ಉಪನಗರದಲ್ಲಿ ಬಸ್ ನಲ್ಲಿ ಡೀಸೆಲ್ ಖಾಲಿಯಾದ ಕಾರಣ ಬಸ್ ಹಾಗೂ ಪ್ರಯಾಣಿಕರನ್ನು ನಡುರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾನೆ!
ಕರೀಂನಗರ, ಸೆಪ್ಟೆಂಬರ್ 11: ಹತಾಶ ಕಳ್ಳರು ಎಂಥಹುದ್ದೇ ಅಪರಾಧ ಕೃತ್ಯವೆಸಗಲು ಹಿಂದೆ ಸರಿಯುವುದಿಲ್ಲ. ತಾಜಾ ಆಗಿ ತೆಲಂಗಾಣ ರಾಜ್ಯಕ್ಕೆರ ಸೇರಿದ ಸಾರಿಗೆ ಆರ್ ಟಿಸಿ ಬಸ್ ನ್ನು ಕಳ್ಳನೊಬ್ಬ ಕದ್ದೊಯ್ದಿದ್ದಾನೆ! ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿದ್ದಿಪೇಟೆ ಡಿಪೋದಿಂದ ಆರ್ಟೆಸಿ ಬಸ್ ಕದ್ದ ಕಳ್ಳ ಅಲ್ಲಿಂದ ವೇಮುಲವಾಡ ತಲುಪಿದ್ದಾನೆ. ವೇಮುಲವಾಡ ಬಸ್ ನಿಲ್ದಾಣದಲ್ಲಿ ಹೈದರಾಬಾದ್ ಪಾಯಿಂಟ್‌ನಲ್ಲಿ ನಿಲ್ಲಿಸಿ ಈ ಬಸ್ ಹೈದರಾಬಾದ್‌ಗೆ ಹೋಗುತ್ತಿದೆ ಎಂದು ಹೇಳಿ ಕೆಲವು ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಂಡಿದ್ದಾನೆ. ಅಲ್ಲಿಂದ ಹೈದರಾಬಾದ್‌ಗೂ ತೆರಳಿದ್ದಾನೆ. ಕೆಲ ಪ್ರಯಾಣಿಕರು ಟಿಕೆಟ್ ಕೊಡುವಂತೆ ಬಸ್ ಚಾಲಕನನ್ನು ಕೇಳಿದಾಗ. ಕಳ್ಳ ರೂಪದ ಆ ಡ್ರೈವರ್ ಮಹಾಶಯ, ಕಂಡಕ್ಟರ್ ಮಾರ್ಗ ಮಧ್ಯೆ ಹತ್ತಿಕೊಳ್ಳುತ್ತಾನೆ, ಆಗ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ತಂಗಲ್ಲಪಲ್ಲಿ ಮಂಡಲದ ಸಾರಂಪೆಲ್ಲಿ ನೇರೆಲ್ಲ ಗ್ರಾಮದ ಉಪನಗರದಲ್ಲಿ ಬಸ್ ನಲ್ಲಿ ಡೀಸೆಲ್ ಖಾಲಿಯಾದ ಕಾರಣ ಬಸ್ ಹಾಗೂ ಪ್ರಯಾಣಿಕರನ್ನು ನಡುರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾನೆ!
ಈ ಬಸ್ಸಿನಲ್ಲಿ ಡೀಸೆಲ್ ಖಾಲಿಯಾಗಿದೆ, ನೀವು ಬೇರೆ ಬಸ್ ಹತ್ತಿಕೊಂಡು ಪ್ರಯಾಣ ಮುಂದುವರಿಸಿ ಎಂದು ಬಸ್‌ಗಳಿಂದ ಪ್ರಯಾಣಿಕರನ್ನು ಇಳಿಸಿದ್ದಾನೆ ಚಾಲಾಕಿ ಕಳ್ಳ. ಏನೂ ಮಾಡಲಾಗದೆ ಪ್ರಯಾಣಿಕರು ಬೇರೆ ಬಸ್ಸಿಗೆ ಹೊರಟರು. ಇವರ ಜೊತೆಗೆ.. ಕಳ್ಳ ಚಾಲಕ ಕೂಡ ಬಸ್ ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು.. ವಿಚಾರಣೆ ನಡೆಸಿದಾಗ ಬಸ್ ಸಿದ್ದಿಪೇಟೆ ಡಿಪೋಗೆ ಸೇರಿದ್ದು ಎಂದು ತಿಳಿದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಸ್ ಕಳ್ಳನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳ್ಳನ ಬಂಧಿಸಲು ವಿಶೇಷ ತಂಡ ರಚಿಸಲಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ