ಮನಕಲಕುವ ಸಂಗತಿ: 82 ವರ್ಷದ ವ್ಯಕ್ತಿ ತಂದೆಯ ಮೃತದೇಹವನ್ನು 18 ತಿಂಗಳ ಕಾಲ ಫ್ರೀಜರ್‌ನಲ್ಲಿ ಇಟ್ಟಿದ್ದ! ಯಾಕೆ ಗೊತ್ತಾ?

82 ವರ್ಷದ ವ್ಯಕ್ತಿ ತನ್ನ ತಂದೆಯನ್ನು ಕಳೆದುಕೊಳ್ಳಲು ಬಯಸಲಿಲ್ಲ, ತಂದೆ ಸತ್ತ ನಂತರವೂ ಅವರ ಶವವನ್ನು ಫ್ರೀಜರ್‌ನಲ್ಲಿಟ್ಟಿದ್ದು, ಅವರೊಂದಿಗೆ ಮಾತನಾಡುತ್ತಿದ್ದನಂತೆ!

ಮನಕಲಕುವ ಸಂಗತಿ: 82 ವರ್ಷದ ವ್ಯಕ್ತಿ ತಂದೆಯ ಮೃತದೇಹವನ್ನು 18 ತಿಂಗಳ ಕಾಲ ಫ್ರೀಜರ್‌ನಲ್ಲಿ ಇಟ್ಟಿದ್ದ! ಯಾಕೆ ಗೊತ್ತಾ?
ಮನಕಲಕುವ ಸಂಗತಿ
Follow us
|

Updated on: May 12, 2023 | 5:19 PM

ಇದೊಂದು ವಿಲಕ್ಷಣ ಸಂಗತಿ ಆದರೆ ಅಷ್ಟೇ ಮನಕಲಕುವ ಸುದ್ದಿಯೂ ಆಗಿದೆ. ಡಚ್ ಪಟ್ಟಣವಾದ (ನೆದರ್ಲೆಂಡ್ಸ್‌ -the Netherlands) ಲ್ಯಾಂಡ್‌ಗ್ರಾಫ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು (octogenarian) ತಮ್ಮ ಮೃತ ತಂದೆಯ (father) ದೇಹವನ್ನು (dead body) ಒಂದು ವರ್ಷಕ್ಕೂ ಹೆಚ್ಚು ಕಾಲ ಫ್ರೀಜರ್‌ನಲ್ಲಿ ಇಟ್ಟಿರುವುದು ಕಂಡುಬಂದಿದೆ. ಅವರು “ತನ್ನ ತಂದೆಯೊಂದಿಗೆ ಇನ್ನೂ ಮಾತನಾಡಲು” ಬಯಸಿದ್ದರಿಂದ ಅವರು (son) ಹಾಗೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ವ್ಯಕ್ತಿಯ ಪ್ರಕಾರ, ಅವರ ತಂದೆ 18 ತಿಂಗಳ ಹಿಂದೆ 101 ನೇ ವಯಸ್ಸಿನಲ್ಲಿ ನಿಧನರಾದರಂತೆ.

82 ವರ್ಷದ ವ್ಯಕ್ತಿ, ಅವರ ಹೆಸರು ಬಹಿರಂಗಪಡಿಸಿಲ್ಲ. ನಾನು [ನನ್ನ ತಂದೆಯನ್ನು] ಕಳೆದುಕೊಳ್ಳಲು ಬಯಸಲಿಲ್ಲ. ಹಾಗಾಗಿ ಫ್ರೀಜರ್‌ನಲ್ಲಿಟ್ಟಿದ್ದೆ. ಇಲ್ಲದಿದ್ದರೆ ನಾನು ಆತನನ್ನು ಕಳೆದುಕೊಳ್ಳುತ್ತೇನೆ ಎಂಬ ಬೇಸರ, ಆತಂಕ ನನ್ನದಾಗಿತ್ತು ಎಂದು ಅವರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದರು.

ಸ್ಥಳೀಯ ಪೊಲೀಸರು ಹಾಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಆ ವ್ಯಕ್ತಿಯ (ತಂದೆಯ) ಸಾವು ಕೊಲೆಯಾ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ. ಆದರೆ ಸದ್ಯಕ್ಕೆ ಅಂಥಹುದ್ದೇನೂ ಆಗಿಲ್ಲ. ನಾವು ಪ್ರಸ್ತುತ ಈ ವ್ಯಕ್ತಿಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಅವಶೇಷಗಳನ್ನು ಫ್ರೀಜರ್‌ನಲ್ಲಿ ಏಕೆ ಇರಿಸಲಾಗಿದೆ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್​​ ಪ್ರಕಟಣೆಯನ್ನು ಉಲ್ಲೇಖಿಸಿ, ಈವ್ನಿಂಗ್ ಸ್ಟ್ಯಾಂಡರ್ಡ್ ಮಾಧ್ಯಮ ವರದಿ ಮಾಡಿದೆ. ತನಿಖೆಯ ಹಿತದೃಷ್ಟಿಯಿಂದ, ನಾವು ಈ ಸಮಯದಲ್ಲಿ ಅಪಾರ್ಟ್​​​ಮೆಂಟ್​​ ನಿವಾಸಿಗಳ ಜೊತೆಗಿನ ಇವರ ಸಂಬಂಧದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

Also Read: ಜಗತ್ತಿನ ಅತ್ಯಂತ ಶ್ರೀಮಂತ ರಾಜಮನೆತನ ಯಾವುದು ಗೊತ್ತಾ? ಇಂಗ್ಲೆಂಡಿನ ರಾಜನದು ಅಂದುಕೊಂಡರೆ ಅದು ತಪ್ಪಾದೀತು!

ಡಿ ಲಿಂಬರ್ಗರ್ ಪ್ರಕಾರ, ಮೃತ ವ್ಯಕ್ತಿಯನ್ನು ಈ ಹಿಂದೆ ನೊಡಿಕೊಳ್ಳುತ್ತಿದ್ದ ವೈದ್ಯರು ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರಂತೆ. ಪೊಲೀಸರು ಮನೆಗೆ ಆಗಮಿಸಿದಾಗ ಅಲ್ಲಿ ಅಸ್ತವ್ಯಸ್ತ ಪರಿಸ್ಥಿತಿ ಕಂಡುಬಂದಿದೆ. 82 ವರ್ಷದ ವ್ಯಕ್ತಿ (ಮೃತ ವ್ಯಕ್ತಿಯ ಮಗ) ಸ್ವತಂತ್ರವಾಗಿ ಬದುಕು ನಡೆಸಲು ಯೋಗ್ಯರಾಗಿದ್ದಾರೆಯೇ ಎಂದು ಅವಲೋಕಿಸಬೇಕಿದೆ. ಮೊದಲು ಅವರನ್ನು ಶುಚಿಗೊಳಿಸಬೇಕಿದೆ. ಸ್ಥಳವನ್ನೂ ಸ್ವಚ್ಛಗೊಳಿಸಬೇಕಿದೆ. ಇದಕ್ಕೆ ಒಂದು ವಾರ ಹಿಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೆದರ್ಲೆಂಡ್ಸ್‌ನಲ್ಲಿ ಮೃತದೇಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ. ಹಾಗೆ ಮನೆಯಲ್ಲೆ ಇಟ್ಟುಕೊಂಡರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಬಹುದು. ಗಮನಾರ್ಗವೆಂದರೆ ಇಲ್ಲಿ ಇಂತಹ ಘಟನೆ ಸಂಭವಿಸಿರುವುದು ಇದೇ ಮೊದಲಲ್ಲ. 2015 ರಲ್ಲಿ ಒಬ್ಬ ವ್ಯಕ್ತಿ ತನ್ನ ಮೃತ ತಾಯಿಯ ದೇಹವನ್ನು ಎರಡು ವರ್ಷಗಳ ಕಾಲ ಮರೆಮಾಚಿ ಇಟ್ಟಿದ್ದರು. ಆದರೆ ಆ ಸಂದರ್ಭದಲ್ಲಿ ದುರಾಸೆಗೆ ಬಿದ್ದು, ಆ ತಾಯಿಯ ಹೆಸರಲ್ಲಿ ಬರುತ್ತಿದ್ದ ಅವರ ಪಿಂಚಣಿ ಮತ್ತು ಸಾಮಾಜಿಕ ಸಹಾಯ ಪಾವತಿಗಳನ್ನು ಪಡೆಯಲಾಗಿತ್ತಂತೆ. ಪ್ರಸ್ತುತ ಪ್ರಕರಣದ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಸಹಾನುಭೂತಿ ವ್ಯಕ್ತಪಡಿಸಿದ್ದರೆ, ಇತರರು ಮಗನ ಕಾರ್ಯವನ್ನು ಖಂಡಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು