ಜಗತ್ತಿನ ಅತ್ಯಂತ ಶ್ರೀಮಂತ ರಾಜಮನೆತನ ಯಾವುದು ಗೊತ್ತಾ? ಇಂಗ್ಲೆಂಡಿನ ರಾಜನದು ಅಂದುಕೊಂಡರೆ ಅದು ತಪ್ಪಾದೀತು! ಹಾಗಾದರೆ ಯಾರದು?
ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನೇತೃತ್ವದ ಸೌದಿ ರಾಜಮನೆತನದಲ್ಲಿ 15,000 ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಅವರ ಹೆಚ್ಚಿನ ಸಂಪತ್ತು ದೇಶದ ಅತಿದೊಡ್ಡ ತೈಲ ಕ್ಷೇತ್ರಗಳಿಂದ ಬಂದಿದೆ.
ಜಗತ್ತಿನ ಅತ್ಯಂತ ಶ್ರೀಮಂತ (Rich) ರಾಜಮನೆತನ ಯಾರದು (Royal Family) ಗೊತ್ತಾ? ಎಂದು ಯಾರಾದರೂ ಕೇಳಿದರೆ ಅದು ಇಂಗ್ಲೆಂಡಿನ ರಾಜಮನೆತನ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ, ಇದು ನಿಜವೇ? ಈ ಸುದ್ದಿಯಲ್ಲಿರುವ ಸತ್ಯವೇನೆಂದರೆ… 3ನೇ ಚಾರ್ಲ್ಸ್ ಅಧಿಕೃತವಾಗಿ ಇಂಗ್ಲೆಂಡ್ ರಾಜನ ಪಟ್ಟಾಭಿಷೇಕ ಇತ್ತೀಚೆಗೆ ಅತ್ಯಂತ ವೈಭವದಿಂದ ನಡೆಯಿತು. ಬ್ರಿಟಿಷ್ ರಾಜಮನೆತನದ ಹೊಂದಿರುವ ಭಾರೀ ಸಂಪತ್ತು ಮತ್ತು ಪಟ್ಟಾಭಿಷೇಕಕ್ಕಾಗಿ ಅದ್ದೂರಿ ಖರ್ಚು ಮಾಡಿದ ಬಳಿಕ ಇದೇ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಅಪಾರ ಸಂಪತ್ತು, ಅಪಾರ ಆಸ್ತಿ ಇದ್ದರೂ ಬ್ರಿಟನ್ನಿನ ರಾಜಮನೆತನ ಜಗತ್ತಿನ ಅತ್ಯಂತ ಶ್ರೀಮಂತ ರಾಜಮನೆತನ ಅಲ್ಲ ಎಂಬುದು ನಿಮಗೆ ಗೊತ್ತೇ? ಹೌದು ಇದು ನಿಜ. ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜಮನೆತನಗಳು (Saudi Arabia) ವಿಶ್ವದ ಶ್ರೀಮಂತ ರಾಜ ಕುಟುಂಬಗಳಾಗಿವೆ!
ವಿಶ್ವದ ಅತ್ಯಂತ ಶ್ರೀಮಂತ ರಾಜಮನೆತನವೆಂದರೆ ಸೌದಿ ಅರೇಬಿಯಾದ ರಾಜಮನೆತನ. ಸೌದಿ ರಾಜಮನೆತನದ ಮೌಲ್ಯವು 14 ಟ್ರಿಲಿಯನ್ ಯುಎಸ್ ಡಾಲರ್‌ಗಳಿಗಿಂತ ಹೆಚ್ಚು. ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನೇತೃತ್ವದ ಸೌದಿ ರಾಜಮನೆತನದಲ್ಲಿ 15,000 ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಅವರ ಹೆಚ್ಚಿನ ಸಂಪತ್ತು ದೇಶದ ಅತಿದೊಡ್ಡ ತೈಲ ಕ್ಷೇತ್ರಗಳಿಂದ ಬಂದಿದೆ.
ಸೌದಿ ಅರೇಬಿಯಾದ ರಾಜ ಪ್ರಸ್ತುತ ಅಲ್ ಯಮಾಮಾ ಅರಮನೆ ಎಂದು ಕರೆಯಲ್ಪಡುವ 4 ಮಿಲಿಯನ್ ಚದರ ಅಡಿಯ ಐಷಾರಾಮಿ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ರಾಜಮನೆತನದವರು ಅತ್ಯುತ್ತಮವಾದ ಐಷಾರಾಮಿ ಬ್ರಾಂಡ್ ಉಡುಪುಗಳನ್ನು ಮಾತ್ರ ಧರಿಸುತ್ತಾರೆ. ಐಷಾರಾಮಿ ವಿಹಾರ ನೌಕೆಗಳು, ಖಾಸಗಿ ಜೆಟ್‌ಗಳು, ದುಬಾರಿ ಚಿನ್ನ ಲೇಪಿತ ಕಾರುಗಳನ್ನು ಹೊಂದಿದ್ದಾರೆ.
ಸೌದಿ ಅರೇಬಿಯಾದ ರಾಜಮನೆತನದ ನಂತರ ಕುವೈತ್ ವಿಶ್ವದ ಎರಡನೇ ಶ್ರೀಮಂತ ರಾಜ ಕುಟುಂಬವನ್ನು ಹೊಂದಿದೆ. ಕುಟುಂಬದ ಒಟ್ಟು ಮೌಲ್ಯ USD 360 ಶತಕೋಟಿ. ಇದು ಭಾರತೀಯ ಪರಿಭಾಷೆಯಲ್ಲಿ 2,95,39,98,00,00,000 ರೂಪಾಯಿಯಷ್ಟಿದೆ.
ಕಿಂಗ್ ಚಾರ್ಲ್ಸ್ III ನೇತೃತ್ವದ ಬ್ರಿಟಿಷ್ ರಾಜಮನೆತನವು ವಿಶ್ವದ 5 ನೇ ಶ್ರೀಮಂತ ರಾಜ ಕುಟುಂಬವಾಗಿದ್ದು, ಒಟ್ಟು US $ 88 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದೆ. ಬ್ರಿಟಿಷ್ ರಾಜಮನೆತನವು ಇತ್ತೀಚೆಗೆ ಪಟ್ಟಾಭಿಷೇಕ ಸಮಾರಂಭವನ್ನು ನಡೆಸಿತು. ರಾಜ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಇಲ್ಲಿ ಪಟ್ಟಾಭಿಷೇಕ ನೆರವೇರಿತು. ಪ್ರಿನ್ಸ್ ಹ್ಯಾರಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಅವರ ಪತ್ನಿ ಮೇಘನ್ ಮಾರ್ಕೆಲ್ ಗೈರುಹಾಜರಾಗಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Fri, 12 May 23