Sign In

By signing in or creating an account, you agree with Associated Broadcasting Company's Terms & Conditions and Privacy Policy.

Shell Companies: ‘ನಮ್ಮಲ್ಲಿ ಯಾವ ಶೆಲ್ ಕಂಪನಿಯೂ ಇಲ್ಲ, ಹಿಂಡನ್ಬರ್ಗ್ ಆರೋಪದಲ್ಲಿ ಹುರುಳಿಲ್ಲ’: ಅದಾನಿ ನೆರವಿಗೆ ಬಂದ ಮಾರಿಷಸ್ ದೇಶದ ಸಚಿವ

Mauritius vs Adani vs Hindenburg: ಮಾರಿಷಸ್ ದೇಶದಲ್ಲಿ ಯಾವ ಶೆಲ್ ಕಂಪನಿಯೂ ಇಲ್ಲ. ಆದ್ದರಿಂದ ಹಿಂಡನ್ಬರ್ಗ್ ರಿಸರ್ಚ್​ನ ವರದಿಯಲ್ಲಿ ಮಾಡಲಾಗಿರುವ ಆರೋಪ ಆಧಾರರಹಿತವಾದುದು ಎಂದು ಅಲ್ಲಿನ ಹಣಕಾಸು ಸಚಿವ ಮಹೇನ್ ಕುಮಾರ್ ಸೀರುಟ್ಟನ್ ಹೇಳಿದ್ದಾರೆ.

Shell Companies: ‘ನಮ್ಮಲ್ಲಿ ಯಾವ ಶೆಲ್ ಕಂಪನಿಯೂ ಇಲ್ಲ, ಹಿಂಡನ್ಬರ್ಗ್ ಆರೋಪದಲ್ಲಿ ಹುರುಳಿಲ್ಲ’: ಅದಾನಿ ನೆರವಿಗೆ ಬಂದ ಮಾರಿಷಸ್ ದೇಶದ ಸಚಿವ
ಮಹೇನ್ ಕುಮಾರ್ ಸೀರುಟ್ಟನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2023 | 11:29 AM

ನವದೆಹಲಿ: ಮಾರಿಷಸ್​ನ ಶೆಲ್ ಕಂಪನಿಗಳನ್ನು (Shell Companies) ಉಪಯೋಗಿಸಿ ಅದಾನಿ ಮಾಲಿಕತ್ವದ ಕಂಪನಿಗಳ ಷೇರುಮೌಲ್ಯವನ್ನು (Share Value) ಕೃತಕವಾಗಿ ಹೆಚ್ಚಿಸಲಾಗಿದೆ ಎಂದು ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ರಿಸರ್ಚ್ ಮಾಡಿದ ಆರೋಪವನ್ನು ಮಾರಿಷಸ್​ನ ಸಚಿವರೊಬ್ಬರು ತಳ್ಳಿಹಾಕಿದ್ದಾರೆ. ಮಾರಿಷಸ್​ನ ಸಂಸತ್​ನಲ್ಲಿ (Mauritius Parliament) ಈ ವಿಚಾರ ಪ್ರಸ್ತಾಪವಾಗಿದ್ದು, ಇದಕ್ಕೆ ಉತ್ತರಿಸಿದ ಅಲ್ಲಿನ ಸಚಿವ ಮಹೇನ್ ಕುಮಾರ್ ಸೀರುತ್ತನ್ (Mahen Kumar Seeruttun), ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಮಾಡಲಾದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

ಮಾರಿಷಸ್ ದೇಶದಲ್ಲಿ ಯಾವ ಶೆಲ್ ಕಂಪನಿಯೂ ಇಲ್ಲ. ಹೀಗಿರುವಾಗ ನಮ್ಮಲ್ಲಿನ ಶೆಲ್ ಕಂಪನಿಯನ್ನು ಯಾರಾದರೂ ಹೇಗೆ ಉಪಯೋಗಿಸಲು ಸಾಧ್ಯ. ಆದ್ದರಿಂದ ಹಿಂಡನ್ಬರ್ಗ್ ರಿಸರ್ಚ್​ನ ವರದಿಯಲ್ಲಿ ಮಾಡಲಾಗಿರುವ ಆರೋಪ ಆಧಾರರಹಿತವಾದುದು, ಅಸತ್ಯವಾದುದು ಎಂದು ಮಾರಿಷಸ್ ಸಂಸತ್​ನಲ್ಲಿ ಹಣಕಾಸು ಸಚಿವ ಮಹೇನ್ ಕುಮಾರ್ ಸೀರುಟ್ಟನ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿUS Crisis: ಸಾಲದ ಸುಳಿಯಲ್ಲಿ ಅಮೆರಿಕ; ಬಿಲ್ ಕಟ್ಟಲೂ ಆಗದ ಸ್ಥಿತಿ; ಎಷ್ಟಿದೆ ಅದರ ಸಾಲ? ಬೇರೆ ದೇಶಗಳಿಗೆ ಏನು ಎಫೆಕ್ಟ್?

ಏನಿದು ಶೆಲ್ ಕಂಪನಿ ಎಂದರೆ?

ಶೆಲ್ ಕಂಪನಿ ಎಂದರೆ ಯಾವುದೇ ಆಸ್ತಿ ಇಲ್ಲದ ಒಂದು ನಿಷ್ಕ್ರಿಯವಾಗಿರುವ ಕಂಪನಿ. ಸುಮ್ಮನೆ ನಾಮಕಾವಸ್ತೆಗೆಂದು ಈ ಕಂಪನಿ ತೆರೆದಿರಲಾಗುತ್ತದೆ. ಬೇನಾಮಿ ಹೆಸರಲ್ಲಿ ಸಾಮಾನ್ಯವಾಗಿ ಇದು ಇರುತ್ತದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಇಂಥ ಕಂಪನಿಗಳನ್ನು ಬಳಸಲಾಗುತ್ತದೆ. ಕೇಮನ್ ಐಲೆಂಡ್ಸ್, ಬ್ರಿಟಿಷ್ ವರ್ಜಿನ್ ಐಲೆಂಡ್ಸ್ ಇಂಥ ಶೆಲ್ ಕಂಪನಿಗಳಿಗೆ ನೊಟೋರಿಯಸ್ ಎನಿಸಿವೆ. ಬಹಾಮಸ್, ಲುಕ್ಸಂಬರ್ಗ್, ಸ್ವಿಟ್ಜರ್​ಲೆಂಡ್ ಮೊದಲಾದ ದೇಶಗಳಲ್ಲೂ ಬಹಳಷ್ಟು ಶೆಲ್ ಕಂಪನಿಗಳಿವೆ.

ಮಾರಿಷಸ್​ನಲ್ಲೂ ಶೆಲ್ ಕಂಪನಿಗಳಿವೆ ಎಂಬ ಮಾತು ಬಹಳ ದಿನಗಳಿಂದಲೂ ಕೇಳಿಬರುತ್ತಿರುವುದು ಹೌದು. ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಈ ಶೆಲ್ ಕಂಪನಿಗಳ ಪ್ರಸ್ತಾಪ ಇದೆ. ಅದಾನಿ ಗ್ರೂಪ್​ವೊಂದಿಗೆ ವ್ಯವಹಾರ ಹೊಂದಿರುವ 38 ಕಂಪನಿ ಮತ್ತು 11 ಫಂಡ್​ಗಳು ಮಾರಿಷಸ್​ನಲ್ಲಿವೆ. ಆದರೆ, ಮಾರಿಷಸ್​ನ ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಎನಿಸಿದ ಫೈನಾನ್ಷಿಯಲ್ ಸರ್ವಿಸಸ್ ಕಮಿಷನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅದಾನಿ ಗ್ರೂಪ್​ಗೆ ಜೋಡಿತವಾದ ಮಾರಿಷಸ್​ನ 38 ಕಂಪನಿ ಮತ್ತು 11 ಫಂಡ್​ಗಳಿಂದ ಯಾವ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಹೇಳಿದೆ.

ಇದನ್ನೂ ಓದಿಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಗೆ ಖಡಕ್ ಉತ್ತರ ನೀಡಿ ಬಾಯ್ಮುಚ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

ಈ ಅಂಶವನ್ನು ಪ್ರಸ್ತಾಪಿಸಿರುವ ಮಾರಿಷಸ್ ಹಣಕಾಸ ಸಚಿವರು, ತಮ್ಮ ದೇಶದಲ್ಲಿ ಬಲವಾದ ಹಣಕಾಸು ಕಾನೂನು ಇದೆ. ತಮ್ಮ ಜಾಗತಿಕ ವ್ಯವಹಾರ ವಲಯಕ್ಕೆ ಪ್ರಬಲ ಕಾನೂನು ಚೌಕಟ್ಟು ರೂಪಿಸಲಾಗಿದೆ. ಅಕ್ರಮ ನಡೆಸುವುದು ಅಷ್ಟು ಸುಲಭವಲ್ಲ ಎಂದು ಮಹೇನ್ ಕುಮಾರ್ ಸೀರುಟ್ಟನ್ ಹೇಳಿದ್ದಾರೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ