AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Crisis: ಸಾಲದ ಸುಳಿಯಲ್ಲಿ ಅಮೆರಿಕ; ಬಿಲ್ ಕಟ್ಟಲೂ ಆಗದ ಸ್ಥಿತಿ; ಎಷ್ಟಿದೆ ಅದರ ಸಾಲ? ಬೇರೆ ದೇಶಗಳಿಗೆ ಏನು ಎಫೆಕ್ಟ್?

America Near Debt Default: ಅಮೆರಿಕ ಸಾಲದ ಸುಳಿಗೆ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. ಕಳೆದ ವರ್ಷವೇ ಅಮೆರಿಕ ಸರ್ಕಾರದ ಸಾಲಮಿತಿ ಮೀರಿಹೋಗಿದೆ. ಈಗ ಕೆಲವೇ ದಿನಗಳಲ್ಲಿ, ಅಥವಾ ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಅಮೆರಿಕ ಸಾಲದ ಹೊಡೆತಕ್ಕೆ ಕೆಳಗಪ್ಪಳಿಸಿ ಬೀಳಲಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.

US Crisis: ಸಾಲದ ಸುಳಿಯಲ್ಲಿ ಅಮೆರಿಕ; ಬಿಲ್ ಕಟ್ಟಲೂ ಆಗದ ಸ್ಥಿತಿ; ಎಷ್ಟಿದೆ ಅದರ ಸಾಲ? ಬೇರೆ ದೇಶಗಳಿಗೆ ಏನು ಎಫೆಕ್ಟ್?
ಅಮೆರಿಕ ಆರ್ಥಿಕ ಬಿಕ್ಕಟ್ಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2023 | 10:46 AM

Share

ವಾಷಿಂಗ್ಟನ್: ಅಮೆರಿಕದಲ್ಲಿ ಶೀತ ಆದರೆ ಜಗತ್ತಿನ ಇತರ ಭಾಗದಲ್ಲಿ ನೆಗಡಿ ಆಗುತ್ತಂತೆ. ಇದು ಜೋಕ್ ಅಂತಾದರೂ ವಾಸ್ತವದಲ್ಲಿ ನಿಜ. ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಎಂದರೆ ಜಾಗತಿಕ ಆರ್ಥಿಕತೆಯ (Global Economy) ಬೆಳವಣಿಗೆಗೆ ಬೇಕಾದ ಒಂದು ದೊಡ್ಡ ಮಾರುಕಟ್ಟೆ ಎನ್ನಲಡ್ಡಿ ಇಲ್ಲ. ಜಾಗತಿಕ ಆರ್ಥಿಕತೆ ಅಮೆರಿಕದ ಮೇಲೆ ತಕ್ಕಮಟ್ಟಿಗೆ ಅವಲಂಬಿತವಾಗಿರುವುದು ಎಷ್ಟು ನಿಜವೋ ಹಾಗೆಯೇ, ಅಮೆರಿಕವೂ ಜಾಗತಿಕ ಆರ್ಥಿಕತೆಯ ಮೇಲೆ ನಿಂತಿರುವುದೂ ಅಷ್ಟೇ ನಿಜ. ಅಮೆರಿಕ ಪಕ್ಕಾ ಭೋಗ ದೇಶ (Consumer Economy). ಅದಕ್ಕೆ ಅದು ಪ್ರಮುಖ ಜಾಗತಿಕ ಮಾರುಕಟ್ಟೆಯಾಗಿರುವುದು. ಭಾರತದ ಐಟಿ ಕಂಪನಿಗಳ ಬಹುತೇಕ ಆದಾಯ ಬರುವುದು ಅಮೆರಿಕದಿಂದಲೇ.

ಇದೀಗ ಅಮೆರಿಕ ಸಾಲದ ಸುಳಿಗೆ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. ಕಳೆದ ವರ್ಷವೇ ಅಮೆರಿಕ ಸರ್ಕಾರದ ಸಾಲಮಿತಿ ಮೀರಿಹೋಗಿದೆ. ಈಗ ಕೆಲವೇ ದಿನಗಳಲ್ಲಿ, ಅಥವಾ ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಅಮೆರಿಕ ಸಾಲದ ಹೊಡೆತಕ್ಕೆ ಕೆಳಗಪ್ಪಳಿಸಿ ಬೀಳಲಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಆ ದಿನ ಜೂನ್ 1 ಇರಬಹುದು ಎಂದೂ ಕೆಲವರು ಅಂದಾಜು ಮಾಡುತ್ತಿದ್ದಾರೆ. ಅದು ನಿಜವೇ ಆದರೆ ಇನ್ನು, ಮೂರ್ನಾಲ್ಕು ವಾರದಲ್ಲಿ ಭೀಕರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಐಎಂಎಫ್ ಇತ್ಯಾದಿ ಮುಂದೆ ಭಿಕ್ಷಾಂ ದೇಹಿ ಎನ್ನಬೇಕಾದ ಸ್ಥಿತಿ ಬರಬಹುದು.

ಇದನ್ನೂ ಓದಿMicrosoft: ಬೋನಸ್ ಇಲ್ಲ, ಸಂಬಳ ಹೆಚ್ಚಳವೂ ಇಲ್ಲ; 10 ಸಾವಿರ ಲೇ ಆಫ್ ಕಂಡ ಮೈಕ್ರೋಸಾಫ್ಟ್ ಉದ್ಯೋಗಿಗಳ ಗಾಯಕ್ಕೆ ಇನ್ನೊಂದು ಬರೆ

ಅಮೆರಿಕದಲ್ಲಿ ಎಷ್ಟಿದೆ ಸಾಲ?

ವರದಿಗಳ ಪ್ರಕಾರ, ಅಮೆರಿಕ ಸರ್ಕಾರ 31.5 ಟ್ರಿಲಿಯನ್ ಡಾಲರ್​ನಷ್ಟು ಸಾಲ ಹೊಂದಿದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ 2,500 ಲಕ್ಷ ಕೋಟಿ. ಗಮನಿಸಿ, ಇದು ಅಮೆರಿಕ ಸರ್ಕಾರದ ಬಾಹ್ಯ ಸಾಲವಲ್ಲ. ಅದರ ಆಂತರಿಕ ಸಾಲ ಇದು. ಅಂದರೆ ಸಾರ್ವಜನಿಕವಾಗಿ ವಿವಿಧ ಹೂಡಿಕೆಗಳಿಂದ ಪಡೆದಿರುವ ಹಣ ಮತ್ತು ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಾಲದ ಹಣ. ಸಾರ್ವಜನಿಕರ ಹಣ ಸರ್ಕಾರಿ ಬಾಂಡ್, ಹೆಲ್ತ್ ಇನ್ಷೂರೆನ್ಸ್ ಇತ್ಯಾದಿ ಯಾವುದೇ ಆಗಿರಬಹುದು. ಈ ಹಣವನ್ನು ಸರ್ಕಾರ ಜನರಿಗೆ ಒಂದಲ್ಲ ಒಂದು ದಿನ ಕೊಡಬೇಕಾದ್ದೆ. ಹೀಗಾಗಿ, ಇದು ಸರ್ಕಾರದ ಸಾಲದ ಹಣ ಹೌದು. ಈಗ ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಅಗದ ಸ್ಥಿತಿ ಸದ್ಯದಲ್ಲೇ ಬರಲಿದೆ. ವಿವಿಧ ಸರ್ಕಾರಿ ಬಾಂಡ್​ಗಳ ಅವಧಿ ಮುಗಿಯುತ್ತಾ ಬರುತ್ತಿದೆ. ಕೋಟ್ಯಂತರ ಡಾಲರ್ ಹಣವನ್ನು ಹೂಡಿಕೆದಾರರಿಗೆ ಸರ್ಕಾರ ಮರಳಿಸಬೇಕಿದೆ. ಇದಕ್ಕೂ ಅದರ ಬಳಿ ಕಾಸು ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಇಲ್ಲಿ ಅಮೆರಿಕದ ರಾಷ್ಟ್ರೀಯ ಸಾಲದ ಬಗ್ಗೆ ಮಾತನಾಡುತ್ತಿರುವಾದ ಕುತೂಹಲಕ್ಕೆಂದು ಭಾರತದ ರಾಷ್ಟ್ರೀಯ ಸಾಲ ಎಷ್ಟಿದೆ ಎಂದು ತಿಳಿಯಬಯಸಬಹುದು. ಭಾರತದ ಆಂತರಿಕ ಸಾಲ 3,400 ಬಿಲಿಯನ್ ಡಾಲರ್ ಇದೆ. ಅಂದರೆ ಸುಮಾರು 280 ಲಕ್ಷ ಕೋಟಿ ರುಪಾಯಿ ಇದೆ. ಭಾರತದಲ್ಲಿ ಹಣದುಬ್ಬರ, ವಿತ್ತೀಯ ಕೊರತೆ ಇತ್ಯಾದಿ ಹೆಚ್ಚುತ್ತಾ ಹೋದರೆ ಇಲ್ಲಿಯೂ ಇದೇ ಪರಿಸ್ಥಿತಿ ಬರಬಹುದು ಎಂಬುದು ತಜ್ಞರ ಎಚ್ಚರಿಕೆ.

ಇದನ್ನೂ ಓದಿಜಗತ್ತಿನ ಅತ್ಯಂತ ಶ್ರೀಮಂತ ರಾಜಮನೆತನ ಯಾವುದು ಗೊತ್ತಾ? ಇಂಗ್ಲೆಂಡಿನ ರಾಜನದು ಅಂದುಕೊಂಡರೆ ಅದು ತಪ್ಪಾದೀತು! ಹಾಗಾದರೆ ಯಾರದು?

ಅಮೆರಿಕಕ್ಕೆ ಸಾಲವಾದರೆ ಬೇರೆ ದೇಶಗಳಿಗೆ ಯಾಕೆ ಚಿಂತೆ?

ಮೊದಲೇ ಹೇಳಿದ ಹಾಗೆ ಅಮೆರಿಕ ಭೋಗದೇಶವಾದ್ದರಿಂದ ಅದು ವಿಶ್ವದ ಅನೇಕ ಆರ್ಥಿಕತೆಗಳ ಬೆಳವಣಿಗೆಗೆ ಆಹಾರ ಒದಗಿಸುತ್ತದೆ. ಈಗ ಅಮೆರಿಕ ತನ್ನ ಬಿಲ್​ಗಳನ್ನು ಕಟ್ಟಲು ವಿಫಲವಾಗುವ ಪರಿಸ್ಥಿತಿ ತಲುಪಿದರೆ, ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಮಾಡುವ ಖರ್ಚು ಕಡಿತಗೊಳ್ಳುತ್ತದೆ. ಜನರು, ಉದ್ಯಮಗಳು ಗಲಿಬಿಲಿಗೊಳ್ಳಬಹುದು. ಬಡ್ಡಿ ದರ ವಿಪರೀತ ಏರಿಕೆ ಆಗಬಹುದು. ಸಾಲ ಮಾಡುವುದನ್ನೇ ರೂಢಿಸಿಕೊಂಡ ಜನರು ಕೊಳ್ಳುವುದನ್ನೇ ಬಿಡಬಹುದು. ಹೀಗೆ ಪರಿಣಾಮಗಳ ಸರಪಳಿ ಬೆಳೆಯುತ್ತಲೇ ಹೋಗುತ್ತದೆ. ಇದರ ಪರಿಣಾಮವು ಜಾಗತಿಕವಾಗಿ ಪ್ರತಿಫಲಿಸುತ್ತದೆ. ಭಾರತವೂ ಇದರಿಂದ ಹೊರತಾಗಿರುವುದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು