Twitter: ಕೊನೆಗೂ ಇಲಾನ್ ಮಸ್ಕ್ ಕೈಗೆ ಸಿಕ್ರು ಹೊಸ ಸಿಇಒ; ಟ್ವಿಟ್ಟರ್ ಮಾಲೀಕನಿಗೆ ಮುಂದೇನು ಕೆಲಸ?

Elon Musk Confirms New Twitter CEO: ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಟ್ವಿಟ್ಟರ್ ಖರೀದಿಸಿದ ಬಳಿಕ ಹೊಸ ಸಿಇಒಗಾಗಿ ಇಲಾನ್ ಮಸ್ಕ್ ಮಾಡುತ್ತಿದ್ದ ಹುಡುಕಾಟ ಅಂತ್ಯಗೊಂಡಿದೆ. ಇನ್ನು 6 ವಾರದಲ್ಲಿ ಹೊಸ ಸಿಇಒ ಟ್ವಿಟ್ಟರ್​ಗೆ ಬರಲಿದ್ದಾರೆ ಎಂದು ಮಸ್ಕ್ ಹೇಳಿದ್ದಾರೆ. ಆದರೆ, ಹೆಸರು ಬಹಿರಂಗಪಡಿಸಿಲ್ಲ.

Twitter: ಕೊನೆಗೂ ಇಲಾನ್ ಮಸ್ಕ್ ಕೈಗೆ ಸಿಕ್ರು ಹೊಸ ಸಿಇಒ; ಟ್ವಿಟ್ಟರ್ ಮಾಲೀಕನಿಗೆ ಮುಂದೇನು ಕೆಲಸ?
ಎಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2023 | 12:12 PM

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟ್ಟರ್​ಗೆ ಸಿಇಒ (Twitter CEO) ಕೂರಿಸಲು ಹಲವು ತಿಂಗಳಿಂದ ತೀವ್ರವಾಗಿ ಹುಡುಕಾಡುತ್ತಿದ್ದ ಎಲಾನ್ ಮಸ್ಕ್ (Elon Musk) ಅವರ ಪ್ರಯತ್ನ ಯಶಸ್ವಿಯಾದಂತಿದೆ. ಟ್ವಿಟ್ಟರ್​ಗೆ ಹೊಸ ಸಿಇಒ ಸಿಕ್ಕಿದ್ದಾರೆ ಎಂದು ಇಲಾನ್ ಮಸ್ಕ್ ಟ್ವಿಟ್ಟರ್​ನಲ್ಲೇ ಘೋಷಿಸಿದ್ದಾರೆ. ಆದರೆ, ಹೊಸ ಸಿಇಒ ಒಬ್ಬ ಮಹಿಳೆಯಾದರೂ ಆಕೆ ಯಾರು ಎಂದು ಮಾತ್ರ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನು, ಟ್ವಿಟ್ಟರ್ ಖರೀದಿಸಿದಾಗಿನಿಂದಲೂ ಅದರ ಸಿಇಒ ಆಗಿರುವ ಇಲಾನ್ ಮಸ್ಕ್ ಈಗ ಆ ಸ್ಥಾನದಿಂದ ಇಳಿಯುವುದು ಖಚಿತವಾಗಿದೆ. ಆದರೆ, ಅವರು ಎಕ್ಸಿಕ್ಯೂಟಿವ್ ಛೇರ್ಮನ್ ಮತ್ತು ಸಿಟಿಒ ಜವಾಬ್ದಾರಿಗಳಲ್ಲಿ ಮುಂದುವರಿಯಲಿದ್ದಾರೆ. ಇದನ್ನೂ ಅವರೇ ಟ್ವೀಟ್ ಮೂಲಕ ಖಚಿಪಡಿಸಿದ್ದಾರೆ. ಅಂದಹಾಗೆ, 6 ವಾರದಲ್ಲಿ ಹೊಸ ಸಿಇಒ ಟ್ವಿಟ್ಟರ್​ಗೆ ಅಡಿ ಇಡಲಿದ್ದಾರೆ.

ಸಿಇಒ ಸ್ಥಾನವನ್ನು ಅಪಹಾಸ್ಯ ಮಾಡುತ್ತಾ ಬಂದಿದ್ದ ಎಲಾನ್ ಮಸ್ಕ್

ಟ್ವಿಟ್ಟರ್ ಅನ್ನು ಖರೀದಿಸಿದಾಗಿನಿಂದ ಎಲಾನ್ ಮಸ್ಕ್ ಸಿಇಒ ಸ್ಥಾನದ ಬಗ್ಗೆ ಬಹಳ ಕುಚೋದ್ಯ ಮಾಡುತ್ತಾ ಬಂದಿದ್ದು ಇಲ್ಲಿ ವಿಶೇಷ. ಯಾರಾದರು ಮೂರ್ಖರು ಮಾತ್ರ ಸಿಇಒ ಸ್ಥಾನ ಪಡೆಯಬೇಕು ಎಂದಿದ್ದರು. ಸಿಇಒ ಸೀಟ್​ನಲ್ಲಿ ನಾಯಿಯನ್ನು ಕೂರಿಸಿ ಅದರ ಫೋಟೋವನ್ನು ಟ್ವೀಟ್ ಮಾಡಿದ್ದರು. ಹೀಗೆ ತಾವೇ ಸಿಇಒ ಸ್ಥಾನದಲ್ಲಿ ಕೂತಿದ್ದರೂ ಆ ಸ್ಥಾನದ ಬಗ್ಗೆ ನಾನಾ ರೀತಿಯಲ್ಲಿ ಅವಹೇಳನನ ಮಾಡಿದ್ದರು. ಟ್ವಿಟ್ಟರ್ ಅನ್ನು ನಿಭಾಯಿಸುವುದು ಅಷ್ಟು ಕಷ್ಟ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿರಲೂಬಹುದು.

ಇದನ್ನೂ ಓದಿ: US Crisis: ಸಾಲದ ಸುಳಿಯಲ್ಲಿ ಅಮೆರಿಕ; ಬಿಲ್ ಕಟ್ಟಲೂ ಆಗದ ಸ್ಥಿತಿ; ಎಷ್ಟಿದೆ ಅದರ ಸಾಲ? ಬೇರೆ ದೇಶಗಳಿಗೆ ಏನು ಎಫೆಕ್ಟ್?

ಟ್ಟಿಟ್ಟರ್ ಸಿಇಒ ಲಿಂಡಾ ಯಚ್ಚಾರಿನೋ ಎಂಬ ಸುದ್ದಿ

ಇಲಾನ್ ಮಸ್ಕ್ ತಮ್ಮ ಟ್ವಿಟ್ಟರ್ ಸಂಸ್ಥೆಗೆ ಹೊಸ ಸಿಇಒ ಬರಲಿದ್ದಾರೆ ಎಂದು ಹೇಳಿದ ಬಳಿಕ ಕೆಲ ಮಾಧ್ಯಮಗಳು, ಆ ಹೊಸ ಸಿಇಒ ಲಿಂಡಾ ಯಚ್ಚಾರಿನೋ ಎಂದು ಅಂದಾಜು ಮಾಡಿವೆ. ಕಾಮ್​ಕ್ಯಾಸ್ಟ್ ಎನ್​ಬಿಸಿ ಯೂನಿವರ್ಸಲ್ ಸಂಸ್ಥೆಯಲ್ಲಿ ಸೇಲ್ಸ್ ವಿಭಾಗದಲ್ಲಿರುವ ಲಿಂಡಾ ಯಕ್ಕಾರಿನೋ ಇತ್ತೀಚೆಗೆ ಎಲಾನ್ ಮಸ್ಕ್ ಜೊತೆ ಮಾತುಕತೆ ನಡೆಸಿದ್ದರು ಎಂಬ ಸಂಗತಿಯನ್ನು ಉಲ್ಲೇಖಿಸಿ ಆಕೆಯೇ ಹೊಸ ಸಿಇಒ ಇರಬಹುದು ಎನ್ನಲಾಗುತ್ತಿದೆ.

ಟೆಸ್ಲಾ, ಸ್ಪೇಸ್​ಎಕ್ಸ್ ಇತ್ಯಾದಿ ಕಂಪನಿಗಳ ಒಡೆಯ ಎಲಾನ್ ಮಸ್ಕ್ ಕಳೆದ ಅಕ್ಟೋಬರ್ ತಿಂಗಳಲ್ಲಿ 44 ಬಿಲಿಯನ್ ಡಾಲರ್ ತೆತ್ತು ಟ್ವಿಟ್ಟರ್ ಅನ್ನು ಖರೀದಿಸಿದ್ದರು. ಇದೀಗ ಅದಕ್ಕೆ ಆದಾಯ ತರಲು ವಿವಿಧ ಪ್ರಯತ್ನ ಮಾಡುತ್ತಿರುವ ಮಸ್ಕ್, ಬ್ಲೂ ಟಿಕ್ ಮಾರ್ಕ್​ಗೆ ಸಬ್​ಸ್ಕ್ರಿಪ್ಷನ್ ಶುಲ್ಕ ನಿಗದಿ ಮಾಡುವುದು ಸೇರಿದಂತೆ ಹಲವು ಕ್ರಮ ಕೈಗೊಂಡಿದ್ದಾರೆ. ಹಾಗೆಯೇ, ಮುಂದೆ ಟ್ವಿಟ್ಟರ್​ನಲ್ಲಿ ಗಮನಾರ್ಹ ಪರಿವರ್ತನೆಗಳು ಆಗಲಿರುವ ಹಿನ್ನೆಲೆಯಲ್ಲಿ ಸಿಇಒ ಜವಾಬ್ದಾರಿ ಬಹಳ ಕಠಿಣವಾಗಿರುತ್ತದೆ. ಆದರೆ, ತಂತ್ರಜ್ಞಾನ ವಿಭಾಗದಲ್ಲಿ ಎಲಾನ್ ಮಸ್ಕ್ ಇರಲಿರುವುದರಿಂದ ಹೊಸ ಸಿಇಒಗೆ ಸಹಾಯವಾಗಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್