AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aghori Puja Video: ಶವದ ಎದೆಯ ಮೇಲೆ ಪದ್ಮಾಸನ ಹಾಕಿ ಕುಳಿತು ಅಘೋರಿ ಪೂಜೆ – ತಮಿಳುನಾಡಿನಲ್ಲಿ ವಿಚಿತ್ರ, ಅಮಾನವೀಯ ಆಚರಣೆ

Viral Video: ಶವದ ಪೂಜೆ ಮಾಡಲು ಸತ್ತ ವ್ಯಕ್ತಿಯ ಮೇಲೆ ಕುಳಿತಿರುವುದು ವಿಚಿತ್ರವಾಗಿದೆ. ಸತ್ತ ಸ್ನೇಹಿತನ ಶವವನ್ನು ಪೂಜಿಸುವುದು ಹೀಗಾ? ಎಂದು ಸ್ಥಳೀಯರು ಆಕ್ರೋಶ, ಆತಂಕ ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಈ ಅಘೋರಿ ಪೂಜೆ ಸಂಚಲನ ಮೂಡಿಸುತ್ತಿದೆ.

Aghori Puja Video: ಶವದ ಎದೆಯ ಮೇಲೆ ಪದ್ಮಾಸನ ಹಾಕಿ ಕುಳಿತು ಅಘೋರಿ ಪೂಜೆ - ತಮಿಳುನಾಡಿನಲ್ಲಿ ವಿಚಿತ್ರ, ಅಮಾನವೀಯ ಆಚರಣೆ
ಶವದ ಮೇಲೆ ಕುಳಿತು ಅಘೋರಿ ಪೂಜೆ
ಸಾಧು ಶ್ರೀನಾಥ್​
| Updated By: Digi Tech Desk|

Updated on:May 30, 2023 | 3:38 PM

Share

Viral Video: ತಮಿಳುನಾಡಿನಲ್ಲಿ ನಡೆದಿರುವ ಅಘೋರಿ ಪೂಜೆಯೊಂದು (Aghori Puja) ಸಂಚಲನ ಮೂಡಿಸಿದೆ. ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮಣಿಕಂಠನ್ ಮತ್ತು ಅವರ ಪತ್ನಿ ತಮಿಳುನಾಡಿನ ಕೊಯಮತ್ತೂರು (Coimbatore) ಜಿಲ್ಲೆಯ ಸುಲ್ಲೂರಿನಲ್ಲಿ (Sulur) ನೆಲೆಸಿದ್ದಾರೆ. ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮಣಿಕಂಠನ್ ಸಿಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಣಿಕಂಠನ್ ಅವರ ಕುಟುಂಬಸ್ಥರು ಮೃತದೇಹವನ್ನು (dead body) ಸೂಲೂರಿಗೆ ತಂದು ಅಂತಿಮಸಂಸ್ಕಾರಕ್ಕೆ (Last rites) ವ್ಯವಸ್ಥೆ ಮಾಡಿದ್ದಾರೆ. ಅದೇ ಸಮಯಕ್ಕೆ ಮಣಿಕಂಠನ ಗೆಳೆಯರಾಗಿದ್ದ ಕೆಲವು ಅಘೋರಿಗಳು ಸ್ಥಳಕ್ಕೆ ಬಂದಿದ್ದಾರೆ. ಮಣಿಕಂಠನ್ ಮನಃಶಾಂತಿಗಾಗಿ ಸ್ವಲ್ಪ ಕಾಲ ಪೂಜೆ ಮಾಡುವಂತೆ ಅಘೋರಿಗಳು ಹೇಳಿದರು. ಅದಕ್ಕೆ ಕುಟುಂಬಸ್ಥರು ಒಪ್ಪಿದಾಗ ಮಣಿಕಂಠನ್ ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾ ಮಂತ್ರಗಳನ್ನು ಪಠಿಸುತ್ತಾ ಕಟ್ಟುಮಸ್ತಾದ ಒಬ್ಬ ಯುವ ಅಘೋರಿ ಓ ಅಘೋರಾ.. ಅಘೋರ ಎನ್ನುತ್ತಾ ಮಣಿಕಂಠನ ಶವದ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತು ಜೋರಾಗಿ ಕೂಗಿದ್ದಾನೆ. ಪೂಜೆ ಮಾಡುವಾಗ.. ಆತನ ಅನುಯಾಯಿಗಳು ಸಹ ಜೋರಾಗಿಯೇ ಮಂತ್ರಗಳನ್ನು ಪಠಿಸಿ, ಗಲಾಟೆ ಮಾಡಿದರು. ಡೋಲು ಬಾರಿಸುವುದರ ಜೊತೆಗೆ ಶಂಖಗಳನ್ನು ಸಹ ಊದಿದರು.

ಶವದ ಎದೆಯ ಮೇಲೆ ಪದ್ಮಾಸನ ಹಾಕಿ ಕುಳಿತು ಅಘೋರಿ ಪೂಜೆ ವಿಡಿಯೋ

ಈ ಎಲ್ಲಾ ಗಲಾಟೆ ನೋಡುಗರನ್ನು ಭಯಭೀತಗೊಳಿಸಿತು. ಕೆಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಪೂಜೆ ಮಾಡಲು ಸತ್ತ ವ್ಯಕ್ತಿಯ ಮೇಲೆ ಕುಳಿತಿರುವುದು ವಿಚಿತ್ರವಾಗಿದೆ. ಸತ್ತ ಸ್ನೇಹಿತನ ಶವವನ್ನು ಪೂಜಿಸುವುದು ಹೀಗಾ? ಎಂದು ಆಕ್ರೋಶ, ಆತಂಕ ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಅಘೋರಿ ಪೂಜೆ ಸಂಚಲನ ಮೂಡಿಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Tue, 30 May 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?