ಶಿವಮೊಗ್ಗ ಗುತ್ತಿಗೆದಾರ ನಿರ್ಲಕ್ಷ್ಯ: ರೈಲ್ವೆ ಕಾಮಗಾರಿಗಾಗಿ ತೆಗೆದ ಗುಂಡಿಯಲ್ಲಿ ಶಾಲಾ ವಿದ್ಯಾರ್ಥಿನಿ ಶವ ಪತ್ತೆ, ಹೆತ್ತವರ ಅಕ್ರಂದನ

ರೇಲ್ವೆ ಕಾಮಗಾರಿಗೆಂದು ತೆಗೆದ ಗುಂಡಿ ಎಂಟು ಅಡಿ ಆಳವಿದೆ. ಈ ಗುಂಡಿಯಲ್ಲಿ ಅಪ್ಪಿತಪ್ಪಿ ಯಾರಾದ್ರೂ ಬಿದ್ದರೇ ಅನಾಹುತ ಆಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಇಂತಹ ಅಪಾಯಕಾರಿ ಗುಂಡಿಗಳನ್ನ ಮುಚ್ಚದೇ ರೈಲ್ವೆ ಅಧಿಕಾರಿಗಳಾದ ಚೇತನ್, ಇಲಾಖೆ ಇಂಜಿನಿಯರ್ ಹರ್ಷವರ್ದನ್, ಗುತ್ತಿಗೆದಾರ ಸತ್ಯನಾರಯಣ ನಿರ್ಲಕ್ಷ್ಯ ತೋರಿದ್ದಾರೆ. ಈ ಮೂವರ ವಿರುದ್ಧ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ಗುತ್ತಿಗೆದಾರ ನಿರ್ಲಕ್ಷ್ಯ: ರೈಲ್ವೆ ಕಾಮಗಾರಿಗಾಗಿ ತೆಗೆದ ಗುಂಡಿಯಲ್ಲಿ ಶಾಲಾ ವಿದ್ಯಾರ್ಥಿನಿ ಶವ ಪತ್ತೆ, ಹೆತ್ತವರ ಅಕ್ರಂದನ
ರೈಲ್ವೆ ಕಾಮಗಾರಿಗಾಗಿ ತೆಗೆದ ಗುಂಡಿಯಲ್ಲಿ ಶಾಲಾ ವಿದ್ಯಾರ್ಥಿನಿ ಶವ ಪತ್ತೆ
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on: Nov 10, 2023 | 5:33 PM

ಶಾಲೆ ಮುಗಿಸಿಕೊಂಡು ವಾಪಸ್ ಗದ್ದೆಗೆ ಹೋಗಿ ಮನೆ ಬೀಗ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಶಾಲಾ ಬಾಲಕಿ ಹಠಾತ್ ಆಗಿ ನಾಪತ್ತೆಯಾಗಿದ್ದಳು. ಶಾಲಾ ಬಾಲಕಿಯು ಹಠಾತ್ ನಾಪತ್ತೆಯಿಂದ ಪೋಷಕರು ಗಾಬರಿಯಾಗಿದ್ದರು. ಮನೆಯ ಸುತ್ತಮುತ್ತಲು ಬಾಲಕಿಗಾಗಿ ಹುಡುಕಾಟ.. ರೇಲ್ವೇ ಕಾಮಗಾರಿಗೆ ತೋಡಿದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.. ಬಲಿ ಪಡೆದ ರೇಲ್ವೆ ಕಾಮಗಾರಿ ಗುಂಡಿ ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಗಾಗಿ ಅಗೆಯಲಾಗಿದ್ದ 8 ಅಡಿ ಆಳದ ಗುಂಡಿಯಲ್ಲಿ 11 ವರ್ಷದ ಐದನೇ ತರಗತಿಯಲ್ಲಿ ಓದುತ್ತಿದ್ದ ಚಿತ್ರಾ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿರುವ ಘಟನೆ ಮೊನ್ನೆ ಬುಧವಾರ ಸಂಜೆ ನಡೆದಿದೆ. ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ಶ್ರೀನಿವಾಸ ಎಂಬುವರು ಕೆಲಸಕ್ಕೆ ಹೋಗಿದ್ದಾಗ ಶಾಲೆ ಮುಗಿಸಿ ವಾಪಸ್ ಆಗಿದ್ದಳು. ಮನೆ ಬಾಗಿಲು ಹಾಕಿದಾಗ ಅಪ್ಪ ಮತ್ತು ಅಮ್ಮ ಕೆಲಸ ಮಾಡುವ ಅನಿಲ್ ಕುಮಾರ್ ಅವರ ಜಮೀನಿನಲ್ಲಿ ಕೆಲಸ ಮಾಡುವ ಜಾಗಕ್ಕೆ ತೆರಳಿ ಮನೆಯ ಬೀಗ ಪಡೆದು ಮನೆಗೆ ವಾಪಸ್ ಆಗುತ್ತಿದ್ದಳು.

ಆದರೆ ಚಿತ್ರಾ ಇನ್ನೂ ಮನೆಗೆ ಬಂದಿಲ್ಲ ಎಂದು ದೊಡ್ಡಪ್ಪ ತಂದೆಗೆ ಮಾಹಿತಿ ನೀಡುತ್ತಾರೆ. ಮನೆಗೆ ಬಾರದ ಮಗಳು ಎಲ್ಲಿಗೆ ಹೋಗಿದ್ದಾಳೆಂದು ಪೋಷಕರು ಹುಡುಕಾಟ ಶುರು ಮಾಡುತ್ತಾರೆ. ಕೋಟೆಗಂಗೂರು ಗ್ರಾಮದ ಸರ್ವೆ ನಂ 107 ರಲ್ಲಿರುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಗದ್ದೆಯಿಂದ ಬಂದಂತಹ ವಿದ್ಯಾರ್ಥಿನಿಯ ಪೋಷಕರ ಕೈಯಲ್ಲಿ ಸೊಪ್ಪು ಇರುತ್ತದೆ.

ಕಾಮಗಾರಿಗೆಂದು ತೆಗೆದಿರುವ ಗುಂಡಿಯಲ್ಲಿ ನೀರು ನಿಂತಿದ್ದು, ಆ ಗುಂಡಿಯಲ್ಲಿ ಸೊಪ್ಪು ತೊಳೆಯುವಾಗ ವಿದ್ಯಾರ್ಥಿನಿಯ ಸಮವಸ್ತ್ರ ಕಂಡು ಬಂದಿದೆ. ಬಳಿಕ ಗುಂಡಿ ಇಳಿದು ನೋಡಿದಾಗ ಚಿತ್ರಾ ಪತ್ತೆಯಾಗಿದ್ದಾಳೆ. ಚಿತ್ರಾಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಾರೆ.

ಚಿತ್ರಾಳು ಮೃತಪಟ್ಟಿರುವುದು ವೈದ್ಯರು ಖಚಿತ ಪಡಿಸಿದ್ದಾರೆ. ಮಗಳ ಸಾವಿಗೆ ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ರೇಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿ ಸಾವು ಆಗಿದೆ. ರೇಲ್ವೆ ಅಂಡರ್ ಪಾಸ್ ಕಾಮಗಾರಿ ಮುಗಿದಿದೆ. ಕಾಮಗಾರಿ ಮುಗಿದ್ರೂ ಗುಂಡಿ ಮುಚ್ಚದೇ ನಿರ್ಲಕ್ಷ್ಯ ತೋರಿದ್ದ ಗುತ್ತಿಗೆದಾರರ ಮತ್ತು ರೇಲ್ವೇ ಎಂಜಿನಿಯರ್ ಗಳು. ಬಾಲಕಿ ವಾಪಸ್ ಮನೆಗೆ ಹೋಗುವಾಗ ಗಮನಿಸದೇ ಗುಂಡಿ ತುಂಬಿದ ನೀರಿನಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾಳೆ.

ರೇಲ್ವೆ ಕಾಮಗಾರಿಗೆಂದು ತೆಗೆದ ಗುಂಡಿ ಎಂಟು ಅಡಿ ಆಳವಿದೆ. ಈ ಗುಂಡಿಯಲ್ಲಿ ಅಪ್ಪಿತಪ್ಪಿ ಯಾರಾದ್ರೂ ಬಿದ್ದರೇ ಅನಾಹುತ ಆಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಇಂತಹ ಅಪಾಯಕಾರಿ ಗುಂಡಿಗಳನ್ನ ಮುಚ್ಚದೇ ರೈಲ್ವೆ ಅಧಿಕಾರಿಗಳಾದ ಚೇತನ್, ಇಲಾಖೆ ಇಂಜಿನಿಯರ್ ಹರ್ಷವರ್ದನ್, ಗುತ್ತಿಗೆದಾರ ಸತ್ಯನಾರಯಣ ನಿರ್ಲಕ್ಷ್ಯ ತೋರಿದ್ದಾರೆ. ಈ ಮೂವರ ವಿರುದ್ಧ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಡತನದಲ್ಲೂ ಮಗಳಿಗೆ ಶಿಕ್ಷಣ ನೀಡುತ್ತಿದ್ದ ಪೋಷಕರು. ಮಗಳ ಭವಿಷ್ಯದ ನೂರೆಂಟು ಕನಸು ಹೆತ್ತವರು ಕಟ್ಟಿಕೊಂಡಿದ್ದರು. ಮಗಳು ಮನೆಗೆ ಹೋಗುವ ಸಂದರ್ಭದಲ್ಲಿ ಗುಂಡಿಯಲ್ಲಿ ಬಿದ್ದು ಸಾವು ಆಗುತ್ತಾಳೆಂದು ಯಾರು ಕೂಡಾ ಅಂದುಕೊಂಡಿರಲಿಲ್ಲ. ಮೃತ ವಿದ್ಯಾರ್ಥಿನಿಯ ಪೋಷಕರು ಅನಿಲ್ ಕುಮಾರ್ ಎನ್ನುವರ ತೋಟದಲ್ಲಿ ಸೊಪ್ಪು ತೆಗೆಯುವ ಕೆಲಸ ಮಾಡುತ್ತಿದ್ದರು. ಮಗಳು ಸುರಕ್ಷಿತವಾಗಿ ಒಬ್ಬಳೇ ಮನೆಗೆ ಹೋಗುತ್ತಾಳೆ ಅಂತಾ ಅವಳ ಕೈಗೆ ಬೀಗ ಕೊಟ್ಟಿದ್ದೇ ಇಲ್ಲಿ ದೊಡ್ಡ ತಪ್ಪಾಗಿ ಹೋಗಿದೆ.

ಮಗಳು ನಿಗೂಢವಾಗಿ ಗುಂಡಿಗೆ ಬಿದ್ದಿದ್ದು ಹತ್ತಿರದಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪೋಷಕರಿಗೆ ಗೊತ್ತಾಗಿಲ್ಲ. ಕಳೆದ ಎರಡು ಮೂರು ದಿನಗಳಿಂದ ಮಲೆನಾಡಿನಲ್ಲಿ ಮಳೆ ಶುರುವಾಗಿದೆ. ಮಳೆ ನೀರು ಗುಂಡಿ ತುಂಬಾ ತುಂಬಿಕೊಂಡಿತ್ತು. ಈ ಗುಂಡಿಯ ಆಳವನ್ನು ಗಮನಿಸದೇ ಬಾಲಕಿಯು ಅದರಲ್ಲಿ ಬಿದ್ದು ಮೃತಪಟ್ಟಿದ್ದಾಳ. ಬಾಲಕಿಯ ಸಾವಿಗೆ ರೇಲ್ವೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದ ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.

ಯಾರೋ ಮಾಡಿದ ತಪ್ಪಿಗಾಗಿ ಇಲ್ಲಿ ಕೂಲಿ ಮಾಡಿಕೊಂಡು ಉಪಜೀವನ ಮಾಡುವ ಕಾರ್ಮಿಕರ ಮಗಳ ಜೀವ ಹೋಗಿದೆ. ರೇಲ್ವೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಗ್ರಾಮಾಂತರ ಪೊಲೀಸರು ವಿದ್ಯಾರ್ಥಿನಿಯ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರು ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.. ಅಂದ್ರೆ ಮಾತ್ರ ಮಗಳ ಜೀವ ಕಳೆದುಕೊಂಡ ಹೆತ್ತವರಿಗೆ ನ್ಯಾಯ ಸಿಕ್ಕಂತಾಗುತ್ತದೆ.