Devanahalli: ಸ್ಮಶಾನಕ್ಕೆ ಶವ ಸಾಗಿಸುತ್ತಿದ್ದ ವೇಳೆ ಖಾಸಗಿ ಜಮೀನು ಮಾಲಿಕರಿಂದ ಅಡ್ಡಿ
ಸ್ಮಶಾನಕ್ಕೆ ಶವ ಸಾಗಿಸುತ್ತಿದ್ದ ವೇಳೆ ಖಾಸಗಿ ಜಮೀನು ಮಾಲೀಕರು ರಸ್ತೆಯಲ್ಲಿ ಗುಂಡಿ ತೋಡಿ ಅಡ್ಡಿಪಡಿಸಿರುವ ಘಟನೆ ದೇವನಹಳ್ಳಿ ದೇವನಹಳ್ಳಿ ತಾಲೂಕಿನ ಬಿಡಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ: ಸ್ಮಶಾನಕ್ಕೆ (Cemetery) ಶವ ಸಾಗಿಸುತ್ತಿದ್ದ ವೇಳೆ ಖಾಸಗಿ ಜಮೀನು ಮಾಲೀಕರು ರಸ್ತೆಯಲ್ಲಿ ಗುಂಡಿ ತೋಡಿ ಅಡ್ಡಿಪಡಿಸಿರುವ ಘಟನೆ ದೇವನಹಳ್ಳಿ (Devnahalli) ತಾಲೂಕಿನ ಬಿಡಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಡಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನ ಅತ್ತೆ ನಿಧನವಾಗಿದ್ದರು. ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಖಾಸಗಿ ಜಮೀನು ಮಾಲಿಕರು ಸ್ಮಶಾನಕ್ಕೆ ತೆರಳುವ ಕಡೆ ಗುಂಡಿ ತೋಡಿ ಅಡ್ಡಪಡಿಸಿದ್ದಾರೆ. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಖಾಸಗಿ ಜಮೀನು ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು.
ಇನ್ನು ಸ್ಮಶಾನಕ್ಕೆ ತೆರಳು ಸರಿಯಾದ ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಡುತ್ತಿದ್ದಾರೆ. ಹೀಗಾಗಿ ಸ್ಮಶಾನಕ್ಕೆ ರಸ್ತೆ ನೀಡುವಂತೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಉಪತಹಶೀಲ್ದಾರ್ ಸುರೇಶ್ ಹಾಗೂ ವಿಎ ಭೇಟಿ ನೀಡಿದರು. ಹೆಣ ಹೊತ್ತಯ್ಯಲು ಅಡ್ಡಿಪಡಿಸದಂತೆ ಖಾಸಗಿ ಜಮೀನು ಮಾಲಿಕನಿಗೆ ಮನವರಿಕೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ