AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಅಳುವ ಕಾರಣಕ್ಕೆ ಪತ್ನಿಯ ಕೊಂದು ರಾತ್ರಿ ಹೆಣದ ಜೊತೆ ಕಾಲ ಕಳೆದ, ಬೆಳಗಾನೆದ್ದು ಆತ್ಮಹತ್ಯೆ ಎಂದು ಬಿಂಬಿಸಿದ್ದ

ಸಿಸೇರಿಯನ್ ನೋವಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದಿದ್ದ. ಕೊನೆಗೆ ಪೊಲೀಸರ ತನಿಖೆ ವೇಳೆ ಪತ್ನಿ ಕೊಂದು ಇಡೀ ರಾತ್ರಿ ಹೆಣದ ಜೊತೆ ಕಳೆದಿದ್ದ ಅಂತಾ ತಿಳಿದುಬಂದಿದೆ. ಟಿವಿ9 ಸಹ - ಕಲ್ಲು ಹೃದಯ ಹಿಂಡುವ ಪ್ರಕರಣ, ಜೋಗಿ ಸಿನಿಮಾ ರೀತಿ ಹೆತ್ತ ತಾಯಿಯ ಹೆಣದ ಮುಂದೆ ಅಬೋಧ ಕಂದಮ್ಮ ಕಿಲಕಿಲ- ಎಂದು ವರದಿ ಮಾಡಿತ್ತು. ಆದರೆ ಹೀಗೂ ಉಂಟೇ ಎನ್ನುವ ಧಾಟಿಯಲ್ಲಿ ಸತ್ಯ ದರ್ಶನವಾಗಿದೆ!

ಮಗು ಅಳುವ ಕಾರಣಕ್ಕೆ ಪತ್ನಿಯ ಕೊಂದು ರಾತ್ರಿ ಹೆಣದ ಜೊತೆ ಕಾಲ ಕಳೆದ, ಬೆಳಗಾನೆದ್ದು ಆತ್ಮಹತ್ಯೆ ಎಂದು ಬಿಂಬಿಸಿದ್ದ
ಮಗು ಅಳುವ ಕಾರಣಕ್ಕೆ ಪತ್ನಿಯ ಕೊಂದು ರಾತ್ರಿ ಹೆಣದ ಜೊತೆ ಕಾಲ ಕಳೆದ
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​|

Updated on: Dec 18, 2023 | 12:25 PM

Share

ಆಕೆಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾಗಿದ್ದ ಆ ದುರುಳ ಕೊನೆಗೆ ಆ ಪ್ರಾಣವನ್ನೇ ತೆಗೆದಿದ್ದ.. ಸಿಸೇರಿಯನ್ ನೋವಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಕಥೆ ಕಟ್ಟಿದ್ದ. ಕೊನೆಗೆ ಪೊಲೀಸರ ತನಿಖೆ ವೇಳೆ ಪತ್ನಿ ಕೊಂದು ಇಡೀ ರಾತ್ರಿ ಹೆಣದ ಜೊತೆ ಕಳೆದಿದ್ದ ಅನ್ನೋ ಬೆಚ್ಚಿ ಬೀಳೀಸೊ ಸತ್ಯ ಹೊರಬಿದ್ದಿದೆ.. ಟಿವಿ9 ಸಹ – ಕಲ್ಲು ಹೃದಯ ಹಿಂಡುವ ಪ್ರಕರಣ, ಜೋಗಿ ಸಿನಿಮಾ ರೀತಿ ಹೆತ್ತ ತಾಯಿಯ ಹೆಣದ ಮುಂದೆ ಅಬೋಧ ಕಂದಮ್ಮ ಕಿಲಕಿಲ– ಎಂದು ವರದಿ ಮಾಡಿತ್ತು. ಆದರೆ ಹೀಗೂ ಉಂಟೇ ಎನ್ನುವ ಧಾಟಿಯಲ್ಲಿ ಸತ್ಯ ದರ್ಶನವಾಗಿದೆ.

ಬಾಣಂತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್!

ಹೌದು.. ಅದು ಇದೇ ಡಿಸೆಂಬರ್12 ರ ರಾತ್ರಿ.. ರಾಯಚೂರು ನಗರದ ಸಂತೋಷ ಸರೋವರ ಅನ್ನೊ ಹೊಟೆಲ್ ಕಂ ಲಾಡ್ಜ್ ನ ರೂಂ ನಂಬರ್ 103 ರಲ್ಲಿ ಮಹಿಳೆ ಸಾವನ್ನಪ್ಪಿದ್ಲು.. ಸೋನಿ ಅನ್ನೋ‌ 23 ವರ್ಷದ ಬಾಣಂತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ಲು.. ಪಶ್ಚಿಮ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.. ಈ ವೇಳೆ ಮೃತ ಸೋನಿ ಮೃತದೇಹ ಕೆಳಗಿತ್ತು.. ಆಕೆಯ ಪತಿ ಅವಿನಾಶ್, ಆಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಂಬಿಸಿದ್ದ. ಆದ್ರೆ ಪೊಲೀಸರಿಗೆ ಅನುಮಾನ ಕಾಡಿತ್ತು. ಇದಷ್ಟೆ ಅಲ್ಲದೇ ಮೃತ ಸೋನಿ ಕಳೆದ 20 ದಿನಗಳ ಹಿಂದಷ್ಟೆ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆ ನೋವನ್ನ ತಾಳಲಾರದೇ ಬಳಲುತ್ತಿದ್ದ ಪತ್ನಿ ಸೋನಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಂಬಿಸಿ ಪತಿ ಕಥೆ ಕಟ್ಟಿದ್ದ. ಆದ್ರೆ ಪಶ್ಚಿಮ ಠಾಣಾ ಪೊಲೀಸರು ತನಿಖೆ ನಡೆಸಿ, ಘೋರ ಸತ್ಯವನ್ನು ಬಟಾಬಯಲು ಮಾಡಿದ್ದಾರೆ.

ಹೌದು.. ಘಟನಾ ಸ್ಥಳ ಪರಿಶೀಲನೆ ವೇಳೆ ಮೃತ ಸೋನು ಆತ್ಮಹತ್ಯೆ ಕಟ್ಟುಕಥೆ ಬಯಲಾಗಿತ್ತು. ಅದು ಆತ್ಮಹತ್ಯೆ ರೀತಿ ಇರ್ಲಿಲ್ಲ. ಜೊತೆಗೆ ಪತಿ ಅವಿನಾಶ್ ಹೇಳಿದಂತೆ ಘಟನೆ ನಡೆದಿರಲಿಲ್ಲ. ಅದು ಕೊಲೆ ಅನ್ನೋದಕ್ಕೆ ಪುರಾವೆಗಳು ಸಿಕ್ಕಿದ್ದವು. ಮುಂದೆ ಪೊಲೀಸರು ಬೆಂಡೆತ್ತಿದಾಗ ಪತ್ನಿ ಸೋನು ಕೊಲೆ ಮಾಡಿದ್ದ ಸತ್ಯ ಬಾಯ್ಬಿಟ್ಟಿದ್ದ. ಮೂಲತಃ ಉತ್ತರ ಪ್ರದೇಶದವರಾಗಿದ್ದ ಅವಿನಾಶ್, ಅದೇ ಭಾಗದ ಸೋನಿ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ‌.

ಈ ಮದುವೆ ಇಷ್ಟವಿರದ ಹಿನ್ನೆಲೆ ಕುಟುಂಬಸ್ಥರಿಂದ ದೂರವಾಗಿ ಆತ ರಾಯಚೂರಿಗೆ ಬಂದು ನೆಲೆಸಿದ್ದ. ಇಲ್ಲಿ ಸಂತೋಷ ಸರೋವರ ಅನ್ನೋ ಲಾಡ್ಜ್ ಕಂ ಹೊಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಪತ್ನಿ ಈತನಿಗೆ ಕೆಲಸದಲ್ಲಿ ಸಹಾಯಕವಾಗಿದ್ದಳು. 20 ದಿನಗಳ ಹಿಂದೆ ಸಿಸೆರಿಯನ್ ಮೂಲಕ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ಲು.. ಆದ್ರೆ ಹೆರಿಗೆ ಬಳಿಕ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು.. ಹೀಗಾಗಿ ಹಸುಗೂಸಿಗೆ ಕಾಲಕಾಲಕ್ಕೆ ಹಾಲುಣಿಲು‌ ಆಕೆಗೆ ಆಗುತ್ತಿರ್ಲಿಲ್ಲ.. ಹೀಗಾಗಿ ಮಗು ಸದಾ ಅಳೋಕೆ ಶುರು ಮಾಡಿತ್ತು.

ಇದನ್ನೂ ಓದಿ: ಹೆಂಡತಿಯ ಅಗಲಿಕೆ ನೋವಿನಲ್ಲಿ ಆಕೆಯ ಸಮಾಧಿ ಪೂಜೆ ಮಾಡಿ, ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡ ಗಂಡ

ಒಂದು ಕಡೆ ಮಗುವನ್ನ ಸಂಭಾಳಿಸಲಾಗದ ಸ್ಥಿತಿ ಮತ್ತೊಂದು ಕಡೆ ತನ್ನ ಅನಾರೋಗ್ಯ ಸರಿಪಡಿಸಿಕೊಳ್ಳಲಾಗಿರ್ಲಿಲ್ಲ.. ಮಧ್ಯೆ ಮಗು ಅಳೋವಾಗ ಪತಿ ಅವಿನಾಶ್ ಸಮಾಧಾನ ಪಡಿಸಬೇಕಿತ್ತು.. ಇದರಿಂದ ಬೇಸತ್ತು ನಿತ್ಯ ಬಾಣಂತಿ ಪತ್ನಿ ಜೊತೆ ಜಗಳವಾಡ್ತಿದ್ದ.. ಅದರಂತೆ ಡಿಸೆಂಬರ್12 ರಂದು ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತ ಬಿಂಬಿಸಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ ಎಂದು ನಿಖಿಲ್. ಬಿ, ರಾಯಚೂರು ಎಸ್ ಪಿ ಮಾಹಿತಿ ನೀಡಿದ್ದಾರೆ.

ಇದಷ್ಟೆ ಅಲ್ಲ ಪತ್ನಿಯನ್ನು ಕೊಂದು ಬೆಳಗಿನ ಜಾವದ ವರೆಗೂ ಆಕೆ ಹೆಣದ ಜೊತೆಯೇ ಪಾಪಿ ಪತಿ ಕಾಲ ಕಳೆದಿದ್ದ ಅನ್ನೋ ಸತ್ಯ ಕೂಡ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು ಮಗುವನ್ನ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ