ಹೆಂಡತಿಯ ಅಗಲಿಕೆ ನೋವಿನಲ್ಲಿ ಆಕೆಯ ಸಮಾಧಿ ಪೂಜೆ ಮಾಡಿ, ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡ ಗಂಡ

38 ವರ್ಷದ ಗುರುಮೂರ್ತಿ ಅವರು ತಮ್ಮ ಪತ್ನಿ ಮೌನಿಕಾಳ ಸಮಾಧಿಗೆ ಪೂಜೆ ‌ಮಾಡಿ, ನಂತರ ಅಲ್ಲೇ ಇದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹೆಂಡತಿಯ ಅಗಲಿಕೆ ನೋವಿನಲ್ಲಿ ಆಕೆಯ ಸಮಾಧಿ ಪೂಜೆ ಮಾಡಿ, ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡ ಗಂಡ
ಹೆಂಡತಿ ಸಾವಿನ ನೋವಿನಲ್ಲಿ ಆಕೆಯ ಸಮಾಧಿ ಬಳಿಯೇ ಆತ್ಮಹತ್ಯೆಗೆ ಶರಣಾದ‌ ಪತಿರಾಯ
Follow us
| Updated By: ಸಾಧು ಶ್ರೀನಾಥ್​

Updated on:Dec 18, 2023 | 5:47 PM

ಚಿಕ್ಕಬಳ್ಳಾಪುರ, ಡಿಸೆಂಬರ್​ 18: ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಆತನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿ (wife) ಮೃತಪಟ್ಟ ವರ್ಷದ ನಂತರ ಆಕೆಯ ಪತಿಯೂ (husband), ಸ್ಮಶಾನದ ಬಳಿ ತೆರಳಿ ಆಕೆಯ ಸಮಾಧಿ ಪಕ್ಕದಲ್ಲೇ ಆಕೆಯದ್ದೇ ಸೀರೆಯನ್ನು ಬಳಸಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾಯಕ,  ನೋವಿನ ಘಟನೆ ನಡೆದಿದೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ.. ಈ ವರದಿ ನೋಡಿ.

ಬರೋಬ್ಬರಿ 13 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ನಿವಾಸಿಗಳಾದ (Bagepalli, Chikkaballapur) ಗುರುಮೂರ್ತಿ (38) ಹಾಗೂ ಮೌನಿಕ, ಪರಸ್ಪರ ಒಬ್ಬರಿಗೊಬ್ಬರು ಇಷ್ಟಪಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ದಂಪತಿಗೆ ಒಂದು ಸುಂದರವಾದ ಹೆಣ್ಣು ಮಗುವಿತ್ತು. ಆದರೆ ಕಳೆದ ವರ್ಷ ನವೆಂಬರ್ 22 ರಂದು ಮೌನಿಕ ಖಿನ್ನತೆಯಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಒಂದು ವರ್ಷದ ನಂತರ ಆಕೆಯ ಗಂಡ ಗುರುಮೂರ್ತಿ ಸಹ ಪತ್ನಿಯ ಹಾದಿ ಹಿಡಿದಿದ್ದು, ಪತ್ನಿಯ ಸಮಾಧಿ ಬಳಿ ಇದ್ದ ಬೇವಿನ ಮರಕ್ಕೆ ಪತ್ನಿಯ ಸೀರೆ ಬಳಸಿ ನೇಣಿಗೆ ಶರಣಾಗಿದ್ದಾನೆ.

ಇನ್ನು ಮೃತ ಗುರುಮೂರ್ತಿ ಕಾರು ಚಾಲಕನಾಗಿದ್ದ. ಪತ್ನಿ ಮೃತಪಟ್ಟ ನಂತರ ಆತನ ಮಗಳನ್ನು ಪತ್ನಿಯ ತವರುಮನೆಯವರು ಕರೆದುಕೊಂಡು ಹೋಗಿದ್ದರು. ಇತ್ತ ಒಬ್ಬಂಟಿಯಾಗಿದ್ದ ಗುರುಮೂರ್ತಿ ಇತ್ತೀಚಿಗೆ ಅಣ್ಣ ಸುಬ್ಬು ಮನೆಯಲ್ಲಿ ವಾಸವಾಗಿದ್ದ. ಇಂದು ಬೆಳಿಗ್ಗೆ 6 ಗಂಟೆಗೆ ವಾಕಿಂಗ್ ಹೋಗಿ ಬರುವುದಾಗಿ ಹೇಳಿ ಹೋದವನು ಸ್ಮಶಾನದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: ತಂದೆಯನ್ನೇ ನೋಡದ ಮಗಳಿಗೆ ತ್ಯಾಗಮಯಿ ತಾಯಿ ಎಲ್ಲವನ್ನೂ ಧಾರೆಯೆದಿದ್ದರು! ಆದರೆ ವಿಧಿಯಾಟ… ಮಿಸ್ ಮಾಡದೆ ಓದಿ

ಅನೋನ್ಯವಾಗಿದ್ದ ದಂಪತಿಯಲ್ಲಿ ಆಕೆ ಸಾವಿನ ಮನೆ ಸೇರಿ, ಗಂಡನನ್ನು ಒಬ್ಬೊಂಟಿ ಮಾಡಿದ್ದರೆ, ಇತ್ತ ಇದ್ದ ಮಗಳ ಮುಖವನ್ನು ನೋಡಿ ಬಾಳಿ ಬದುಕಬೇಕಾದ ವ್ಯಕ್ತಿ ಮಗಳನ್ನು ಒಬ್ಬಂಟಿ ಮಾಡಿ ಪತ್ನಿಯ ಸಮಾಧಿ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದು ದುರದೃಷ್ಟಕರ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 am, Mon, 18 December 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ