ಕಲ್ಲು ಹೃದಯ ಹಿಂಡುವ ಪ್ರಕರಣ, ಜೋಗಿ ಸಿನಿಮಾ ರೀತಿ ಹೆತ್ತ ತಾಯಿಯ ಹೆಣದ ಮುಂದೆ ಅಬೋಧ ಕಂದಮ್ಮ ಕಿಲಕಿಲ

20 ದಿನಗಳ ಹಸುಗೂಸು, ಅಬೋಧ ಕಂದಮ್ಮ ಇಡೀ ರಾತ್ರಿ ಒಮ್ಮೆ ಅಳುತ್ತಾ (neonatal kid weeping) ಮಗದೊಮ್ಮೆ ಕಿಲಕಿಲ ಅನ್ನುತ್ತಾ ತಾಯಿಯ ಶವದ ಜೊತೆಗೆ ಕಾಲ ಕಳೆದಿದೆ..ಇಡೀ ರಾತ್ರಿ ಅಮ್ಮನ ಎದೆಹಾಲು ಇಲ್ಲದೇ ಕಣ್ಣೀರಿಟ್ಟಿದ್ದ ಹಸುಗೂಸು ಬೆಳಿಗ್ಗೆ ಜೋರಾಗಿ ಅಳಲು ಶುರುಮಾಡಿತ್ತು.. ಆಗ ನಿದ್ದೆಯಿಂದ ಎದ್ದಿದ್ದ ತಂದೆ ಅವಿನಾಶ್ ನೋಡಿದಾಗ

ಕಲ್ಲು ಹೃದಯ ಹಿಂಡುವ ಪ್ರಕರಣ, ಜೋಗಿ ಸಿನಿಮಾ ರೀತಿ ಹೆತ್ತ ತಾಯಿಯ ಹೆಣದ ಮುಂದೆ ಅಬೋಧ ಕಂದಮ್ಮ ಕಿಲಕಿಲ
ಜೋಗಿ ಸಿನಿಮಾ ರೀತಿ ಹೆತ್ತ ತಾಯಿಯ ಹೆಣದ ಮುಂದೆ ಅಬೋಧ ಕಂದಮ್ಮ ಕಿಲಕಿಲ
Follow us
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​

Updated on: Dec 14, 2023 | 11:06 AM

ಒಂದು ಕಡೆ ಗಾಬರಿಗೊಂಡಿರೊ ಸಿಬ್ಬಂದಿ.. ಏನಾಯ್ತು ಅಂತ ಗೊತ್ತೇ ಆಗದ ಸ್ಥಿತಿಯಲ್ಲಿರುವ ಪರಿಚಯಸ್ಥರು. ಲಾಠಿ ಹಿಡಿದು ಪರಿಶೀಲನೆ ಮಾಡ್ತಿರೊ ಪೊಲೀಸರು. ಇದನ್ನೆಲ್ಲಾ ನೋಡಿದ್ರೆ ಅಲ್ಲೇನೋ ಆಗಿದೆ ಅಂತ ಅನ್ನಿಸದೇ ಇರಲ್ಲ. ಹೌದು ಅಲ್ಲಾಗಿದ್ದು ಅದೇ.. ಅಲ್ಲೊಬ್ಬ ಗೃಹಿಣಿ ರಾತ್ರೋರಾತ್ರಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಆತನ ಹೆಸ್ರು ಅವಿನಾಶ್.. ಆತ ಮೂಲತಃ ಉತ್ತರ ಪ್ರದೇಶದವ. ಕೆಲ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ರಾಯಚೂರಿಗೆ ಬಂದಿದ್ದ. ಹೀಗೆ ಬಂದಿದ್ದ ಈತ ರಾಯಚೂರು ನಗರದ ಸಂತೋಷ್ ಸರೋವರ ಅನ್ನೋ ಲಾಡ್ಜ್ ಕಂ ಹೊಟೆಲ್​ನಲ್ಲಿ ಕೆಲಸಕ್ಕೆ ಸೇರಿದ್ದ..ಇಲ್ಲಿ ಆ ಭಾಗದ ಅನೇಕ ಜನ ಕೆಲಸಕ್ಕಿದ್ದಿದ್ರಿಂದ ಆತ ಇಲ್ಲಿ ಕೆಲವೇ ದಿನಗಳಲ್ಲಿ ಅಡ್ಜಸ್ಟ್ ಆಗಿ ಸೋನು ಅನ್ನೋ 23 ವರ್ಷದ ಯುವತಿಯನ್ನ ಮದುವೆಯಾಗಿದ್ದ (mother). ನಂತ್ರ ಆಕೆಯನ್ನ ಇಲ್ಲೇ ರಾಯಚೂರಿಗೆ (Raichur) ಕರೆತಂದಿದ್ದ..ಈತ ಇದೇ ಹೊಟೆಲ್​ನಲ್ಲಿ ಸ್ವೀಟ್ ಮಾಡೋ ಕೆಲಸದಲ್ಲಿ ತೊಡಗಿಕೊಂಡ್ರೆ,ಆಕೆ ಪತಿಗೆ ಸಹಾಯ ಮಾಡ್ತಿದ್ಲು..ಇದೇ ಹೊಟೆಲ್​​ನಲ್ಲೇ ಇವ್ರಿಗೆ ಇರಲು ರೂಂ ವ್ಯವಸ್ಥೆ ಮಾಡಿಕೊಡಲಾಗಿತ್ತು..ಈ ಸೋನಿ ಹಾಗೂ ಅವಿನಾಶ್ ಸುಖಸಂಸಾರದ ಭಾಗವಾಗಿ 20 ದಿನಗಳ ಹಿಂದೆ ಸೋನು ಗಂಡು ಮಗುವಿಗೆ ಜನ್ಮ ನೀಡಿದ್ಲು. ನಾರ್ಮಲ್ ಡೆಲಿವರಿ ಆಗದ ಹಿನ್ನೆಲೆ ಸಿಜೇರಿಯನ್ ಮೂಲಕ ಡೆಲಿವರಿ ಮಾಡಲಾಗಿತ್ತು. ಸಿಜೆರಿಯನ್ ನೋವನ್ನ ತಡೆದುಕೊಳ್ಳಲಾಗದೇ ಇದ್ದದ್ದರಿಂದ ಸೋನು ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ.

ಹೌದು.. ಮೊನ್ನೆ ಭಾರತ ಹಾಗೂ ದಕ್ಷಿಣಾ ಆಫ್ರಿಕಾ ನಡುವೆ ಟಿ-ಟ್ವೆಂಟಿ ಪಂದ್ಯ ಇತ್ತು. ಕೆಲಸ ಮುಗಿದ ಬಳಿಕ ಪತಿ ಅವಿನಾಶ್ ತನ್ನ ಸ್ನೇಹಿತರ ರೂಂನಲ್ಲಿ ಕ್ರಿಕೆಟ್ ನೋಡ್ತಿದ್ದ.. ಅದು ಮಗಿಯೋವಷ್ಟರಲ್ಲಿ ಸುಮಾರು ಮಧ್ಯರಾತ್ರಿ 12.30 ಆಗಿತ್ತು.. ನಂತರ ತನ್ನ ರೂಂಗೆ ಬಂದಿದ್ದ ಅವಿನಾಶ್ ಪತ್ನಿ ಹಾಗೂ ಪಾಪು ಮಲಗಿದ್ದನ್ನ ನೋಡಿ ತಾನೂ ಸೈಲೆಂಟಾಗಿ ಮಲಗಿದ್ದ.. ಈ ಮಧ್ಯೆ ಪತ್ನಿ ಸೋನು ಎಂದಿನಂತೆ ತನ್ನ ಪತಿ ಮಲಗಿದ ಬಳಿಕ ಸುಸೈಡ್ ಮಾಡಿಕೊಂಡಿದ್ದಾಳೆ.

20 ದಿನಗಳ ಹಸುಗೂಸು, ಅಬೋಧ ಕಂದಮ್ಮ ಇಡೀ ರಾತ್ರಿ ಒಮ್ಮೆ ಅಳುತ್ತಾ (neonatal kid weeping) ಮಗದೊಮ್ಮೆ ಕಿಲಕಿಲ ಅನ್ನುತ್ತಾ ತಾಯಿಯ ಶವದ ಜೊತೆಗೆ ಕಾಲ ಕಳೆದಿದೆ..ಇಡೀ ರಾತ್ರಿ ಅಮ್ಮನ ಎದೆಹಾಲು ಇಲ್ಲದೇ ಕಣ್ಣೀರಿಟ್ಟಿದ್ದ ಹಸುಗೂಸು ಬೆಳಿಗ್ಗೆ ಜೋರಾಗಿ ಅಳಲು ಶುರುಮಾಡಿತ್ತು..ಆಗ ನಿದ್ದೆಯಿಂದ ಎದ್ದಿದ್ದ ತಂದೆ ಅವಿನಾಶ್ ಮಗು ಯಾಕೆ ಅಳುತ್ತಿದೆ ಅಂತ ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರೊ ವಿಷಯ ಬೆಳಕಿಗೆ ಬಂದಿದೆ..ತಾಯಿ ಶವವನ್ನ ಶಿಫ್ಟ್ ಮಾಡೋ ವೇಳೆ ತಾಯಿ ಮೃತದೇಹದ ಹಿಂದೆ 20 ದಿನಗಳ ಕಂದಮ್ಮ ಅಳುತ್ತಾ ಬೇರೊಬ್ಬ ಮಹಿಳೆಯ ಮಡಿಲಿನಲ್ಲಿತ್ತು.

ಇದನ್ನೂ ಓದಿ: ಟ್ರಾಕ್ಟರ್ ಉಳುಮೆ ಮಾಡುವಾಗ ತೋಟದಲ್ಲಿ ಪತ್ತೆಯಾಯ್ತು ಮೃತ ದೇಹ, ದಂಗಾದ ರೈತ, ಮುಂದೇನಾಯ್ತು?

ಘಟನೆ ಬಳಿಕ ರಾಯಚೂರು ಪಶ್ಚಿಮ ಪೊಲೀಸರು ಪರಿಶೀಲನೆ ನಡೆಸಿದ್ರು. 20 ದಿನದ ಹಿಂದೆ ಸಿಜೇರಿಯನ್ ಆದ ಬಳಿಕ ಹೊಟ್ಟೆ ಮೇಲೆ ಹೊಲಿಗೆ ಹಾಕಿದ ಗಾಯ ವಾಸಿಯಾಗಿರ್ಲಿಲ್ಲವಂತೆ..ಇದರ ನೋವಿನಿಂದ ನಿತ್ಯ ನರಳಾಡುತ್ತಿದ್ದ ಸೋನು ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಈ ಬಗ್ಗೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೀತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ