ಟ್ರಾಕ್ಟರ್ ಉಳುಮೆ ಮಾಡುವಾಗ ತೋಟದಲ್ಲಿ ಪತ್ತೆಯಾಯ್ತು ಮೃತ ದೇಹ, ದಂಗಾದ ರೈತ, ಮುಂದೇನಾಯ್ತು?

ಮೃತ ದೇಹವನ್ನು ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ, ಇದರಿಂದ ಇದೊಂದು ಸುಮಾರು 5೦ ವರ್ಷ ವಯಸ್ಸುಳ್ಳ ಪುರುಷನ ಮೃತದೇಹ ಎಂದು ತಿಳಿದು ಬಂದಿದೆ. ಅಲ್ಲದೆ ಮೃತ ದೇಹದ ಎದೆ ಭಾಗ ಹಾಗೂ ತೋಡೆ ಭಾಗದಲ್ಲಿ ಚಾಕುವಿನಿಂದ ಇರಿದ ಸ್ಥಿತಿಯಲ್ಲಿ ಗುರುತುಗಳು ಪತ್ತೆಯಾಗಿದೆ.

ಟ್ರಾಕ್ಟರ್ ಉಳುಮೆ ಮಾಡುವಾಗ ತೋಟದಲ್ಲಿ ಪತ್ತೆಯಾಯ್ತು ಮೃತ ದೇಹ, ದಂಗಾದ ರೈತ, ಮುಂದೇನಾಯ್ತು?
ಟ್ರಾಕ್ಟರ್ ಉಳುಮೆ ಮಾಡುವಾಗ ತೋಟದಲ್ಲಿ ಪತ್ತೆಯಾಯ್ತು ಮೃತ ದೇಹ
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Oct 30, 2023 | 11:58 AM

ನೆಲಮಂಗಲ (ಬೆಂಗಳೂರು ಗ್ರಾಮಾಂತರ) ಅಕ್ಟೋಬರ್​ 30: ಆತ ಎಂದಿನಂತೆ ಟ್ರಾಕ್ಟರ್ ಹತ್ತಿ ನಿನ್ನೆ ಭಾನುವಾರ ಉಳುಮೆ ಮಾಡ್ತಾ ಇದ್ದ, ಆದ್ರೆ ತನ್ನ ಉಳುಮೆಯಲ್ಲಿ ಅವನಿಗೆ ಒಂದು ಅಚ್ಚರಿ ಕಾದಿತ್ತು, ಏನಂದ್ರೆ ಉಳುಮೆ (ploughing) ಮಾಡುತ್ತಿದ್ದ ವೇಳೆ ಒಂದು ಮೃತ ದೇಹ (dead body) ನೋಡಿ ದಂಗಾಗಿದ್ದ. ವಿಶಾಲವಾದ ತೋಟದಲ್ಲಿ ಬಿದ್ದಿರುವ ಮೃತ ದೇಹ, ಮೃತ ದೇಹ ಗಬ್ಬೆದ್ದು ನಾರುತ್ತಿತ್ತು. ಪೊಲೀಸರು ಬಂದು ನೋಡುವಷ್ಟರಲ್ಲಿ ಗೊತ್ತಾಗಿದ್ದು ಅಲ್ಲಿ ಓರ್ವ ವ್ಯಕ್ತಿ ಕೊಲೆಯಾಗಿದ್ದಾನೆ ಎಂದು. ಅದೀಗ ಪೊಲೀಸರಿಗೆ ತಲೆನೋವಾಗಿದೆ‌. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಂಟನಕುರ್ಚಿ ಗ್ರಾಮದ ( village in Nelamangala) ಅನುಸೂಯಮ್ಮ ಎಂಬುವರ ತೋಟದಲ್ಲಿ ಶವ ಪತ್ತೆಯಾಗಿದ್ದು, ಚಾಲಕ ಹರೀಶ್ ಎಂಬುವರು ಟ್ರಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದಾಗ ಮೃತ ದೇಹ ಪತ್ತೆಯಾಗಿದೆ.

ಮೃತ ದೇಹವನ್ನು ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ, ಇದರಿಂದ ಇದೊಂದು ಸುಮಾರು 5೦ ವರ್ಷ ವಯಸ್ಸುಳ್ಳ ಪುರುಷನ ಮೃತದೇಹ ಎಂದು ತಿಳಿದು ಬಂದಿದೆ. ಅಲ್ಲದೆ ಮೃತ ದೇಹದ ಎದೆ ಭಾಗ ಹಾಗೂ ತೋಡೆ ಭಾಗದಲ್ಲಿ ಚಾಕುವಿನಿಂದ ಇರಿದ ಸ್ಥಿತಿಯಲ್ಲಿ ಗುರುತುಗಳು ಪತ್ತೆಯಾಗಿದ್ದು, ಮೃತ ದೇಹದ ಮೇಲೆ ಬಟ್ಟೆಗಳು ಇಲ್ಲದಿರುವುದು ಸಾಕ್ಷ್ಯ ನಾಶ ಪಡಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಪರೂಪದ ಕೊಂಡುಕುರಿ ಸಂತತಿ ರಕ್ಷಣೆ ಮುಂದಾದ ಸರ್ಕಾರ, ಜಗಳೂರಿನ ಕೊಂಡುಕುರಿ ವನ್ಯಧಾಮಕ್ಕೆ ಕೇಂದ್ರ ಅರಣ್ಯ ಇಲಾಖೆ ತಂಡ ಭೇಟಿ

ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಾರ್ಟಿ ವೇಳೆ ಗಲಾಟೆ ಹಾಗೂ ಯಾವುದೇ ಅನೈತಿಕ ಸಂಬಂಧದ ಕೊಲೆ ಆಗಿರಬಹುದಾ ಎಂದು ಗ್ರಾಮಸ್ಥರಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುತ್ತಮುತ್ತಲ‌ ಠಾಣೆಗಳಲ್ಲಿ ಮಿಸ್ಸಿಂಗ್ ಆದವರ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದು ಮೃತ ದೇಹದ ಗುರುತು ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ