ಅಪರೂಪದ ಕೊಂಡುಕುರಿ ಸಂತತಿ ರಕ್ಷಣೆ ಮುಂದಾದ ಸರ್ಕಾರ, ಜಗಳೂರಿನ ಕೊಂಡುಕುರಿ ವನ್ಯಧಾಮಕ್ಕೆ ಕೇಂದ್ರ ಅರಣ್ಯ ಇಲಾಖೆ ತಂಡ ಭೇಟಿ

ರಂಗಯ್ಯದುರ್ಗ ಅರಣ್ಯ ಪ್ರದೇಶದ ಕೊಂಡುಕುರಿ ವನ್ಯಜೀವಿಧಾಮಕ್ಕೆ ಕೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ತಂಡ ಅವನತಿಯ ಅಂಚಿನಲ್ಲಿ ಇರುವ ನಾಲ್ಕು ಕೊಂಬುಗಳ ಕೊಂಡುಕುರಿ ಸಂತತಿ ರಕ್ಷಣೆ ಸಂಬಂಧ ಮಾಹಿತಿ ಕಲೆ ಹಾಕಿ ಅದರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಅಪರೂಪದ ಕೊಂಡುಕುರಿ ಸಂತತಿಗೆ ರಕ್ಷಣೆ ಮಾಡಲು ವಿಶೇಷ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ.

ಅಪರೂಪದ ಕೊಂಡುಕುರಿ ಸಂತತಿ ರಕ್ಷಣೆ ಮುಂದಾದ ಸರ್ಕಾರ, ಜಗಳೂರಿನ ಕೊಂಡುಕುರಿ  ವನ್ಯಧಾಮಕ್ಕೆ  ಕೇಂದ್ರ ಅರಣ್ಯ ಇಲಾಖೆ ತಂಡ ಭೇಟಿ
ಕೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on: Oct 30, 2023 | 10:27 AM

ದಾವಣಗೆರೆ, ಅ.30: ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶದ ಕೊಂಡುಕುರಿ ವನ್ಯಜೀವಿಧಾಮಕ್ಕೆ ಕೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ (Central Forest Department officials Team) ಭೇಟಿ ನೀಡಿದೆ. ರಾಜ್ಯ ಸರ್ಕಾರ ರಂಗಯ್ಯದುರ್ಗ ಅರಣ್ಯ ಪ್ರದೇಶವನ್ನ ಕಳೆದ 13 ವರ್ಷಗಳ ಹಿಂದೆ ಕೊಂಡುಕುರಿ ವನ್ಯಜೀವಿಧಾಮ (Kondukuri Wild Life Sanctuary) ಎಂದು ಘೋಷಣೆ ಮಾಡಿತ್ತು. ಸದ್ಯ ಈಗ ಕೇಂದ್ರ ಅರಣ್ಯ ಇಲಾಖೆ ತಂಡ ಭೇಟಿ ನೀಡಿದ್ದು ಅವನತಿಯ ಅಂಚಿನಲ್ಲಿ ಇರುವ ನಾಲ್ಕು ಕೊಂಬುಗಳ ಕೊಂಡುಕುರಿ (Four Horned Antelope) ಸಂತತಿ ರಕ್ಷಣೆ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದೆ. ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ.

ಡೆಹ್ರಾಡೂನ್ ವನ್ಯಜೀವಿ ತಜ್ಞ ಅನುಕೂಲ್, ರಾಷ್ಟ್ರೀಯ ಹುಲಿ ಪ್ರಾಧಿಕಾರದ ಸದಸ್ಯ ಬೋನಾಲ್ ಬಿಷನ್ ಹಾಗೂ ಪುಣೆಯ ರಿಮೋಟ್ ಸೆನ್ಸಿಂಗ್ ತಜ್ಞ ಮನೀಷ್ ಕಾಳೆ ನೇತೃತ್ವದ ತಂಡ ಜಗಳೂರು ರಂಗಯ್ಯದುರ್ಗ ಅರಣ್ಯಕ್ಕೆ ಭೇಟಿ ನೀಡಿದೆ. ಅರಣ್ಯದ ಅಂಚಿನಲ್ಲಿ ಇರುವ ಗುರುಸಿದ್ದಾಪುರ, ಮಲೆಮಾಚಿಕೆರೆ ಹಾಗೂ ವೆಂಕಟೇಶಪುರ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರನ್ನ ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಪರೂಪದ ಕೊಂಡುಕುರಿ ಸಂತತಿಗೆ ರಕ್ಷಣೆ ಮಾಡಲು ವಿಶೇಷ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ಈ ತಂಡ ಆಗಮಿಸಿದೆ.

ಇದನ್ನೂ ಓದಿ: ತುಮಕೂರು: ಮಾಂಸಕ್ಕಾಗಿ ಬಾವಲಿಗಳ ಬೇಟೆ: ನಾಲ್ವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

ಹುಲಿ ಉಗುರು ಅಸಲಿ ರಹಸ್ಯ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದಲ್ಲಿ ಇತ್ತೀಚಿಗೆ ಬಹುತೇಕರು ಹಕ್ಕಿ ಪಿಕ್ಕಿ ಬುಡಕಟ್ಟಿನ ಬಗ್ಗೆ ಹೆಚ್ಚಾಗಿ ಮಾತಾಡುತ್ತಾರೆ. ಇವರು ದೇಶ ವಿದೇಶಗಳಲ್ಲಿ ಹೆಚ್ಚಾಗಿ ಹುಲಿ ಉಗುರು ಮಾರಾಟ ಮಾಡುತ್ತಾರೆ. ಈಗ ಹುಲಿ ಉಗುರು ಚರ್ಚೆ ಹಿನ್ನೆಲೆ ಹುಲಿ ಉಗುರಿನ ಹಿಂದಿನ ರಹಸ್ಯ ಬಿಡಿಸಿ ಸಮಾಜದ ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ. ಈಗ ಬಹುತೇಕ ಕಡೆ ಹುಲಿ ಉಗುರು ಎನ್ನುವುದು ಅದು ಸಾಕು ಪ್ರಾಣಿಗಳಾದ ಎತ್ತು, ಎಮ್ಮೆ, ಆಕಳು, ಕೋಣದ ಪಾದದ ಉಗುರಿನಿಂದ ಸಿದ್ದವಾಗುವಂತಹದ್ದು ಅಂದ್ರೆ ನೀವು ನಂಬುವುದು ಕಷ್ಟ. ಆದ್ರೆ ಅದು ಸತ್ಯ.

ಮೊದಲು ದನಗಳ ಉಗುರು ತೆಗೆದುಕೊಳ್ಳುತ್ತಾರೆ. ಕಸಾಯಿ ಖಾನೆಗೆ ಸೇರಿದಂತೆ ಹತ್ತಾರು ಕಡೆ ದನಗಳ ಉಗುರು ಲಭ್ಯವಿರುತ್ತವೆ. ಇಂತಹ ಉಗುರು ತಂದು ಚನ್ನಾಗಿ ತೊಳೆದು ಎಣ್ಣೆಯಲ್ಲಿ ಇಡುತ್ತಾರೆ. ಹೀಗೆ ಇಟ್ಟ ಬಳಿಕ ಅದನ್ನ ಆಕೃತಿಗೆ ತಕ್ಕಂತೆ ಕಟ್ ಮಾಡಿಕೊಳ್ಳುತ್ತಾರೆ. ಮೊದಲೇ ಹುಲಿ ಉಗುರಿನ ಆಕೃತಿ ಅವರ ಬಳಿ ಇರುತ್ತದೆ. ಇದನ್ನ ದನಗಳ ಉಗುರಿನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳುತ್ತಾರೆ. ಹೀಗೆ ಮಾಡಿಟ್ಟುಕೊಂಡ ಮಾರ್ಕ್ ನಂತೆ ಕಟ್ ಮಾಡುತ್ತಾರೆ. ಬೆಳ್ಳಗೆ ಹುಲಿ ಉಗುರು ಸಿದ್ದವಾಗುತ್ತದೆ. ಇದು ಹುಲಿ ಉಗುರು ಎಂದು ನಂಬುವುದು ಕಷ್ಟ. ಆದಕಾರಣಕ್ಕೆ ನಕಲಿ ಹುಲಿ ಉಗುರಿನ ಹಿಂಭಾಗಕ್ಕೆ ಸ್ವಲ್ಪ ಅಂಟು ಹಚ್ಚುತ್ತಾರೆ. ಕೆಂಪಗೆ ಇರುವ ಬನ್ನೂರು ಕುರಿಗಳು ಉಣ್ಣೆ ಹಚ್ಚುತ್ತಾರೆ. ಹೀಗೆ ಉಣ್ಣೆ ಹಚ್ಚಿದ ಬಳಿದ ಮಣ್ಣಲ್ಲಿ ಹಾಕಿ ಉಜ್ಜುತ್ತಾರೆ. ಆಗ ನಿಮಗೆ ಅದು ನಕಲಿ ಎಂದು ನಿರ್ಧಾರ ಮಾಡುವುದೇ ಕಷ್ಟ. ಹೀಗೆ ಇಂತಹ ಉಗುರುಗಳನ್ನ ಸಿದ್ಧ ಮಾಡಿಕೊಂಡು ಸ್ಥಿತಿವಂತ ಕುಟುಂಬ ಹಾಗೂ ಚಲನಚಿತ್ರ ಕಲಾವಿದರು ರಾಜಕಾರಣಿ ಮಕ್ಕಳು ಹೀಗೆ ಹತ್ತು ಹಲವಾರು ಕಡೆ ಮಾರಾಟ ಮಾಡುತ್ತಾರೆ. ಜೊತೆಗೆ ವಿದೇಶಕ್ಕೂ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಇದು ದನಗಳ ಪಾದದ ಉಗುರಿನಿಂದ ಮಾಡಿದ ಹುಲಿ ಉಗುರು ಹೊಲುವ ವಸ್ತು ಅಂತಲೇ ಬರೆಸಿಕೊಂಡು ಹೋಗುತ್ತಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್