AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tadepalle: ಮಧ್ಯರಾತ್ರಿ ಸ್ಮಶಾನಕ್ಕೆ ನುಗ್ಗಿದ ಕಳ್ಳರು ಏನು ಮಾಡಿದ್ದಾರೆ ನೋಡಿ!

ಅದೇನೆ ಇರಲಿ, ಸ್ಮಶಾನದ ಗ್ರಿಲ್ಸ್ ಕಳ್ಳತನವಾಗಿರುವ ಬಗ್ಗೆ ತಾಡೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕಳ್ಳರನ್ನು ಹೇಗೆ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Tadepalle: ಮಧ್ಯರಾತ್ರಿ ಸ್ಮಶಾನಕ್ಕೆ ನುಗ್ಗಿದ ಕಳ್ಳರು ಏನು ಮಾಡಿದ್ದಾರೆ ನೋಡಿ!
ಮಧ್ಯರಾತ್ರಿ ಸ್ಮಶಾನಕ್ಕೆ ನುಗ್ಗಿದ ಕಳ್ಳರು
ಸಾಧು ಶ್ರೀನಾಥ್​
|

Updated on: Jun 03, 2023 | 9:25 PM

Share

ಇವರು ಸಾಮಾನ್ಯ ಕಳ್ಳರಲ್ಲ, ಐನಾತಿ ಕಳ್ಳರು … (Thief) ಸತ್ತ ಶವಗಳು ಸಹ ಇವರ ಹಾವಳಿಯಿಂದ ಒಂದು ಕ್ಷಣ ಭಯ ಬೀಳುವುದುಂಟು ಇವರ ಕುಕೃತ್ಯ ನೋಡಿದರೆ. ಅಂಥದ್ದೇನು ಅಂತೀರಿ… ತಾಡೇಪಲ್ಲಿ ಮಂಡಲದ ಪೆನಮಕದಲ್ಲಿ ನಡೆದಿರುವ ಈ ವಿಚಿತ್ರ ಕಳ್ಳತನದ ಬಗ್ಗೆ ನಿಮಗೆ ಹೇಳಲೇ ಬೇಕು. ಸ್ಮಶಾನವನ್ನೂ (Graveyard) ಬಿಡದೆ ಕಳ್ಳರು ಅಲ್ಲೂ ತಮ್ಮ ಕೈಚಳ ತೋರಿ ಕಳ್ಳತನ ಮಾಡಿದ್ದಾರೆ. ಮೃತ ದೇಹಗಳನ್ನು ಸುಡಲು ಬಳಸುತ್ತಿದ್ದ (Last rites) ಕಟ್ಟೆಯ ಮೇಲಿನ ಗ್ರಿಲ್ ಗಳನ್ನು ಕಳವು ಮಾಡಲಾಗಿದೆ. ಶಾಲೆ, ದೇವಸ್ಥಾನ, ಮನೆಗಳಿಗೆ ಭದ್ರತೆ ಒದಗಿಸಬಹುದು. ಆದರೆ ಇನ್ನು ಮುಂದೆ ಸ್ಮಶಾನಕ್ಕೂ ರಕ್ಷಣೆ ನೀಡಬೇಕಾ ಎಂಬ ಆತಂಕದ ಪ್ರಶ್ನೆ ಎದುರಾಗಿದೆ. 1 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಕಬ್ಬಿಣದ ಗ್ರಿಲ್‌ಗಳನ್ನು ಕಳವು ಮಾಡಲಾಗಿದೆ.

ಗ್ರಿಲ್‌ಗಳನ್ನು ಕದ್ದಿರುವುದರಿಂದ ಶವಸಂಸ್ಕಾರ ಮಾಡುವುದಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮೃತದೇಹವನ್ನು ಗ್ರಿಲ್‌ಗಳ ಮೇಲೆ ಇಟ್ಟು ಸುಟ್ಟರೆ ಖರ್ಚು ವೆಚ್ಚ ಕಡಿಮೆಯಾದೀತು. ಆದರೆ ತಾಡೇಪಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಗಾಂಜಾ ಗಿರಾಕಿಗಳು ಕದ್ದಿರಬೇಕು. ಹಳೆ ಕಬ್ಬಿಣಕ್ಕೂ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ನಂಬಿಕೆ ಇದ್ದು, ಮದ್ಯ ಸೇವಿಸಲು, ಗಾಂಜಾ ಸೇದಲು ಹಣವಿಲ್ಲದ ಗ್ಯಾಂಗ್ ಗಳು ಕಳ್ಳತನ ಮಾಡುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Also Read:  ವಿಚಿತ್ರ ಯೋಗ-ರೋಗ: ಬಿಯರ್ ಕುಡಿಯುತ್ತಾ ಯೋಗ ಮಾಡಬೇಕಂತೆ! ಮೂರು ಸಿಪ್ಸ್-ಆರು ಆಸನಗಳು ಮಾಡಬೇಕಂತೆ!

ಅದೇನೆ ಇರಲಿ, ಸ್ಮಶಾನದ ಗ್ರಿಲ್ಸ್ ಕಳ್ಳತನವಾಗಿರುವ ಬಗ್ಗೆ ತಾಡೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕಳ್ಳರನ್ನು ಹೇಗೆ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ